ಕೃಷಿಯಲ್ಲಿ ಸಾಧನೆ ಮಾಡಿದ ರೈತ ಮಹಿಳೆ ಶಿವಮ್ಮ ಶಂಭುಲಿಂಗಪ್ಪ ಹಡಪದಗೆ ಸನ್ಮಾನ

ಕೃಷಿಯಲ್ಲಿ ಸಾಧನೆ ಮಾಡಿದ ರೈತ ಮಹಿಳೆ ಶಿವಮ್ಮ ಶಂಭುಲಿಂಗಪ್ಪ ಹಡಪದಗೆ ಸನ್ಮಾನ
ವಾಡಿ: ಪಟ್ಟಣದ ಸಮೀಪ ಹಲಕಟ್ಟಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚಿತ್ತಾಪುರ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಸನ್ಮಾನಿಸಲಾಯಿತು.
ಕೃಷಿಯಲ್ಲಿ ಸುಮಾರು 40 ವರ್ಷದಿಂದಲೂ ದಣಿವರಿಯದೆ ಸಾವಯವ ಕೃಷಿಯನ್ನು ರೂಡಿಸಿಕೊಂಡು ಬಂದಿರುವ ಶ್ರೀಮತಿ ಶಿವಮ್ಮ ಶಂಭುಲಿಂಗಪ್ಪ ಹಡಪದ ಕಮರವಾಡಿ ಇವರಿಗೆ ಅಂತರಾಷ್ಟ್ರೀಯ ಮಹಿಳೆಯರ ದಿನದ ಪ್ರಯುಕ್ತ ಸನ್ಮಾನಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮುನೀಂದ್ರ ಶಿವಾಚಾರ್ಯರು ವಹಿಸಿದ್ದರು. ಮುಖ್ಯ ಅತಿಥಿ ಸ್ಥಾನವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರು ವಹಿಸಿದ್ದರು .ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಸದಸ್ಯರು, ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಎಲ್ಲಾ ಮಹಿಳಾ ಶಿಕ್ಷಕ ವೃಂದದವರು , ಶಿಕ್ಷಣ ತಜ್ಞರು, ಊರಿನ ಹಿರಿಯರು ಉಪಸ್ಥಿತರಿದ್ದರು.