ವಿಕಲಚೇತನರ ಆತ್ಮಸ್ಥೈರ್ಯ ಹೆಚ್ಚಿಸುವುದೇ ಮೂಲ ಉದ್ದೇಶ - ಡಾ ಶಾಲಿವಾನ ಉದಗಿರೆ

ವಿಕಲಚೇತನರ ಆತ್ಮಸ್ಥೈರ್ಯ ಹೆಚ್ಚಿಸುವುದೇ ಮೂಲ ಉದ್ದೇಶ - ಡಾ ಶಾಲಿವಾನ ಉದಗಿರೆ
ವಿಕಲಚೇತನ ಮಕ್ಕಳಿಗೆ ಕ್ರೀಡೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ.
ಕಮಲನಗರ :ತಾಲೂಕಿನ ಡೋಣಗಾಂವ (ಎಂ) ಗ್ರಾಮದ ಹತ್ತಿರ ಶ್ರೀ ಸುಕ್ಷೇತ್ರ ಭಕ್ತ ಮುಡಿ ತಪೋವನ (ಮಾಳಪ್ಪಯ್ಯ)ದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಕೇಂದ್ರದ ಸಮಾನ ಶಿಕ್ಷಣ ವಿಭಾಗದಿಂದ ಮಾಳಪ್ಪಯ್ಯ ಪ್ರಕೃತಿಯ ಮಡಿಲಲ್ಲಿ ಚೇತನ ಮಕ್ಕಳಿಗೆ ಕ್ರೀಡೆ ಮತ್ತು ಅರಿವು ಮೂಡಿಸುವ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಶಾಲಾ ಮಕ್ಕಳ ತಂಡಗಳು ಭಾಗವಹಿಸಿದ್ದವು.
ಕ್ಷೇತ್ರ ಸಮನ್ವಯಾಧಿಕಾರಿಗಳಾದ ಪ್ರಕಾಶ ರಾಠೋಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಕಲಚೇತನ ಮಕ್ಕಳು ಕೂಡ ಸಾಮಾನ್ಯ ಮಕ್ಕಳಂತೆ ಮುಖ್ಯ ವಾಹಿನಿಗೆ ಬರಬೇಕಾಗಿದೆ, ಚೇತನರಲ್ಲಿ ವಿಶೇಷವಾದ ಕಲೆಯನ್ನು ಅಡಗಿರುತ್ತದೆ ಪ್ರತಿಭೆಯನ್ನು ಹೊರ ತೆಗೆಯುವ ಮತ್ತು ಮನಸ್ಥೈರ್ಯವನ್ನು ಹೆಚ್ಚಿಸುವದೇ ಈ ಕಾರ್ಯಕ್ರಮದ ಮೂಲ ಉದ್ದೇಶ ಎಂದು ವಿಕಲಚೇತನ ಕಾರ್ಯಕ್ರಮ ಸಂಪನ್ಮೂಲ ವ್ಯಕ್ತಿಗಳಾದ ಡಾ ಶಾಲಿವಾನ ಉದಗಿರೆ ಅಭಿಪ್ರಾಯ ಪಟ್ಟರು.
ಪ್ರತಿಯೊಂದು ಸ್ಪರ್ಧೆಯನ್ನು ಭಾಗವಹಿಸಲು ಅಂಗವಿಕಲ ಮಕ್ಕಳು ಮುಖ್ಯ ವಾಹಿನಿಗೆ ಬರಬೇಕೆಂಬ ಅಭಿಪ್ರಾಯದಿಂದ ಇಂತಹ ಕಾರ್ಯಕ್ರಮಗಳು ನಡೆಸುವುದು ಜರೂರಿಯಾಗಿದೆ ಎಂದು ನುಡಿದರು.
ತಾಲೂಕಿನ ವಿವಿಧ ಶಾಲೆಯ ಮಕ್ಕಳು ವಿಕಲಚೇತನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ಬಲೂನ್ ಒಡೆಯುವುದು, ಚಿತ್ರ ಕಲೆ ಬಿಡಿಸುವುದು,ಓಟದ ಸ್ಪರ್ಧೆ,ನಿಂಬೆ ಹಣ್ಣಿನ ಸ್ಪರ್ಧೆ,10 ಹಲವಾರು ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸಿದ್ದರು,
ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.
ಸ್ವಚ್ಛತೆ ಪರಿಸರ ಸಂರಕ್ಷಣೆ, ಮೊಬೈಲ್ ನ ದುರ್ಬಳಕೆ, ಕುರಿತು ಮಕ್ಕಳಿಗೆ ತಿಳಿಸಲಾಯಿತು.
ಬಿ ಐಇ ಆರ್ ಟಿ ರಮೇಶ ಡೊಂಬಾಳೆ, ಶಾಮರಾವ ಪವಾರ, ಜ್ಞಾನೋಬಾ ರೆಡ್ಡಿ, ದೈಹಿಕ ಶಿಕ್ಷಕರಾದ ಸುಧಾಕರ್ ಬಾಬ್ರೆ, ಶಿವಕುಮಾರ ಮೇಣಸೆ, ಶ್ರೀನಿವಾಸ ಮಂಠಾಳೆ, ವೀರೇಶ್ ಲೀಗಾಡೆ, ಸದಾಸಿವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಕಮಲನಗರ ಹಾಗೂ ಔರಾದ (ಬಾ) ತಾಲೂಕಿನ ವಿವಿಧ ಶಾಲೆಯ ಮಕ್ಕಳು ಭಾಗವಹಿಸಿದ್ದರು.