ಕರ್ತ್ಯವ್ಯದಲ್ಲಿದ್ದ ಚೆಟ್ಟಿನಾಡ್ ಸಿಮೇಂಟ್ ಕಂಪನಿಯ ಕಾರ್ಮಿಕನ ಸಾವು

ಕರ್ತ್ಯವ್ಯದಲ್ಲಿದ್ದ ಚೆಟ್ಟಿನಾಡ್ ಸಿಮೇಂಟ್ ಕಂಪನಿಯ ಕಾರ್ಮಿಕನ ಸಾವು

ಚಿಂಚೋಳಿ :ತಾಲೂಕಿನ ಚಿಟ್ಟಿನಾಡ್ ಸಿಮೇಂಟ್ ಕಾರ್ಖಾನೆಯ ಕಾರ್ಮಿಕನು ಕಾರ್ಖಾನೆಯಲ್ಲಿ ಕರ್ತವ್ಯದ ಮೇಲೆ ಇರುವಾಗಲೇ ಸ್ಥಳದಲ್ಲಿ ಮೃತಪಟ್ಟಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ. 

ಮೃತ ಕಾರ್ಮಿಕ ಕೇಶವ್ ಆಸ್ಸಾಮ್ ರಾಜ್ಯದ ಮೂಲದವನ್ನು ಆಗಿದ್ದಾನೆ ಎಂದು ಹೇಳಲಾಗುತ್ತಿದೆ. ಇತನು ಟಾಟಾ ಸೋಲಾರ ಏಜೇನ್ಸಿ ಅಡಿ ಚೆಟ್ಟಿನಾಡ್ ಸಿಮೇಂಟ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದನ್ನು ಎನ್ನಲಾಗುತ್ತಿದೆ. ಮೃತನ ಕಾರ್ಮಿಕನ ಹೆಸರು ಕೇಶವ್ (28) ಎಂದು ಗುರುತಿಸಲಾಗಿದೆ. ಬೆಳಗ್ಗೆ 9.21.35 ನಿಮಿಷಕ್ಕೆ ಚೆಟ್ಟಿನಾಡ್ ಸಿಮೇಂಟ್ ಕಾರ್ಖಾನೆಯ ಆಬುಲೇನ್ಸ್ ನಲ್ಲಿ ಮೃತ ದೇಹವನ್ನು ಚಿಂಚೋಳಿ ಅವಳಿ ಪಟ್ಟಣದ ಚಂದಾಪೂರ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದೆ. ಮೃತ ಕಾರ್ಮಿಕ ಕೇಶವ್ ತಲೆ ಸುತ್ತು ಬಿದ್ದು ಸಾವುನಪ್ಪಿದ್ದಾನೆ. ಹೀಗಾಗಿ ಇದೊಂದು ಸಹಜ ಸಾವಾಗಿದೆ ಎಂದು ಚೆಟ್ಟಿನಾಡ್ ಸಿಮೇಂಟ್ ಕಾರ್ಖಾನೆ ಆಡಳಿತ ಮಂಡಳಿ ಮತ್ತು ಸರಕಾರಿ ಕಾರ್ಮಿಕ ಇಲಾಖೆಯ ಅಧಿಕಾರಿ ಶಿವರಾಜ ಪಾಟೀಲ್ ತಿಳಿಸಿದ್ದಾರೆ. ಮೃತ ಕಾರ್ಮಿಕ ಸಾವಿನ ಬಗ್ಗೆ ಇನ್ನೂ ಪ್ರಕರಣ ದಾಲು ಆಗದೆ ಇರುವ ಕಾರಣ, ಬೆಳಿಗ್ಗೆ 9.21.35 ಗಂಟೆಯಿಂದ ಚಂದಾಪೂರದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಿಎಮ್ ಗಾಗಿ ಮೃತ ದೇಹ ಕಾಯುತ್ತಿದೆ.