ನಾಗಾಂಬಿಕಾ ಬಿ.ಇಡಿ ಕಾಲೇಜಿಗೆ ಶೇ.100 ಫಲಿತಾಂಶ

ನಾಗಾಂಬಿಕಾ ಬಿ.ಇಡಿ ಕಾಲೇಜಿಗೆ ಶೇ.100 ಫಲಿತಾಂಶ

ನಾಗಾಂಬಿಕಾ ಬಿ.ಇಡಿ ಕಾಲೇಜಿಗೆ ಶೇ.100 ಫಲಿತಾಂಶ

ಕಲಬುರಗಿ: ನಗರದ ನಾಗಾಂಬಿಕಾ ಮಹಿಳಾ ಬಿ.ಇಡಿ ಕಾಲೇಜಿಗೆ ಬಿ.ಇಡಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಲಭಿಸಿದೆ.

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಕಾಲೇಜಿನಲ್ಲಿ ಒಟ್ಟು 93 ವಿದ್ಯಾರ್ಥಿನಿಯರು ಬಿ.ಇಡಿ ಪರೀಕ್ಷೆಗೆ ಹಾಜರಾಗಿದ್ದು,

ಎಲ್ಲರೂ ಉತ್ತೀರ್ಣವಾಗಿದ್ದಾರೆ. ಡಿ.ಶ್ವೇತಾ ಶೇ.94.66 ಅಂಕದೊAದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. 

ಮಂದರಾ ಟಿ. ಶೇ.93.83, ಸಿದ್ದಮ್ಮ ಎನ್. ಶೇ.93, ದುರ್ಗಮ್ಮ ಶೇ.92, ಸ್ನೇಹಾ ಶೇ.91,66, ಸುನಿತಾ ಎಸ್ ಶೇ.91.66, ರೇಣುಕಾ ಎಂ.ಶೇ.91.50, ಪ್ರೇಮಾಂಜಲಿ.91.33, ಎ ಸಹನಾ 91.16, ಪ್ರೀತಿ ಎ 91, ಅಂಕಗಳನ್ನು ಪಡೆದಿದ್ದಾರೆ.

ವಿದ್ಯಾರ್ಥಿನಿಯರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ನಿವೃತ್ತ ಡಿ.ಡಿ.ಪಿ.ಐ. ಶ್ರೀ ಆರ್ ಎಸ ಪಾಟೀಲ್, ಪ್ರಾಚಾರ್ಯರಾದ ಡಾ.ಅರವಿಂದ್ ಬಿರಾದಾರ್ ಹಾಗೂ ಸಿಬ್ಬಂದಿ ವರ್ಗದವರಾದ ಬಸವರಾಜ್ ಶರಣಬಸಪ್ಪ, ವಿಜಯಕುಮಾರ್ ಎಂ ಮಡಿವಾಳ್, ಸಬಿಹಾ ಸುಲ್ತಾನಾ, ಮಹಾನಂದಾ ಪಾಟೀಲ್, ಪಾರ್ವತಿಬಾಯಿ ಶಿವಲಿಂಗಪ್ಪ, ಭಾಗ್ಯಶ್ರೀ ಬಾಬುರಾವ್ ಅವರು ಹರ್ಷ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.