ಪುರಾಣ ಪ್ರವಚನಗಳು ಜಗತ್ತನ್ನು ಕತ್ತ್ತಲೆಯಿಂದ ಬೆಳಕಿನೆಡೆಗೆ ಒಯ್ಯುವ ಮಾರ್ಗ:ಡಾ.ಅಪ್ಪಾರಾವ ದೇವಿ ಮುತ್ಯಾ

ಪುರಾಣ ಪ್ರವಚನಗಳು ಜಗತ್ತನ್ನು ಕತ್ತ್ತಲೆಯಿಂದ ಬೆಳಕಿನೆಡೆಗೆ ಒಯ್ಯುವ ಮಾರ್ಗ:ಡಾ.ಅಪ್ಪಾರಾವ ದೇವಿ ಮುತ್ಯಾ
ಕಲಬುರಗಿ:ಜಯನಗರ ಶಿವಮಂದಿರದಲ್ಲಿ ಇಂದು ಒಂದು ತಿಂಗಳ ನಿರಂತರ ಗುಡ್ಡಾಪೂರದ ಶ್ರೀ ದಾನಮ್ಮ ದೇವಿಯ ಪುರಾಣದ ಮಹಾಮಂಗಲೋತ್ಸವ ಹಾಗೂ ಪಲ್ಲಕ್ಕಿ ಮೆರವಣಿಗೆ ವಿಜ್ರಂಭಣೆಯಿಂದ ಜರುಗಿತು.
ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಗುಡ್ಡಾಪೂರ ಶ್ರೀ ದಾನಮ್ಮ ದೇವಿ ಚರಿತ್ರೆಯ ಒಂದು ತಿಂಗಳು ಪುರಾಣ ಕಾರ್ಯಕ್ರಮದ ಮಂಗಲೋತ್ಸವ ಕಾರ್ಯಕ್ರಮದಲ್ ಸಾನಿಧ್ಯ ವಹಿಸಿ ಪಲ್ಲಕ್ಕಿ ಮೇರವಣಿಗೆಗೆ ಶ್ರೀನಿವಾಸ ಸರಡಗಿಯ ಲಕ್ಷೀಗುಡಿ ಶಕ್ತಿ ಪೀಠದ ಪೂಜ್ಯ ಶ್ರೀ ಡಾ.ಅಪ್ಪಾರಾವ ದೇವಿ ಮುತ್ಯಾ ಚಾಲನೆ ನೀಡಿ ನಂತರ ಮಾತನಾಡಿ ಪುರಾಣ ಎಂಬುದು ಜಗತ್ತನ್ನು ಬೆಳಗಿಸಲು ಒಂದು ಸಾಧನೆ.ನಂಬಿಕೆ ಇಟ್ಟು ಮನುಷ್ಯನು ಧಾರ್ಮಿಕತೆಯಲ್ಲಿ ತೊಡಗಿದರೆ ಸನ್ಮಾರ್ಗ ಪ್ರಾಪ್ತಿಯಾಗುತ್ತದೆ.ಅಷ್ಟೆ ಅಲ್ಲದೆ ಭಕ್ತಿ ಭಾವನೆಯೂ ಮೂಡುತ್ತದೆ.ನಾವೇಲ್ಲರೂ ಭಗವಂತನ ಮಕ್ಕಳು.ಮೇಲು ಕೀಳೆಂಬ ಭಾವನೆ ದೂರ ಮಾಡಿ ಎಲ್ಲರೂ ನಮ್ಮವರೆಂದು ಕಾಣಬೇಕು.ಗುಡ್ಡಾಪೂರ ದಾನಮ್ಮನ ಮಹಿಮೆ ಅಪಾರವಾದದ್ದು.ಸಂಸಾರದಲ್ಲಿದ್ದುಕೊಂಡೆ ಸದ್ಗತಿ ಮಾರ್ಗ ತೊರಿಸಿದವಳು.ಅವಳನ್ನು ಮನದಲ್ಲಿ ನೆನೆದರೆ ಜೀವನದಲ್ಲಿ ಸಂಕಷ್ಟಗಳು ಬರಲಾರವು ಎಂದರು.
ಸಾನಿಧ್ಯ ವಹಿಸಿದ್ದ ಮುಗುಳನಾಗಾಂವ ಕಟ್ಟಿಮನಿ ಹಿರೇಮಠದ ಪೂಜ್ಯ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ ಪುರಾಣದಿಂದ ಮಹಾತ್ಮರ ತ್ಯಾಗದ ಜೀವನ ಚರಿತ್ರೆ ತಿಳಿಯಬಹುದು.ಇಲ್ಲಿನ ಸಂಸ್ಕ್ರತಿ,ಆಚಾರ,ವಿಚಾರ ಹಾಗೂ ಧಾರ್ಮಿಕತೆಯಿಂದ ಇಂದು ಜಗತ್ತಿನಲ್ಲಿ ಭಾರತ ವಿಶ್ವ ಗರುವಾಗಿದೆ.ಸಕಲ ಪ್ರಾಣಿಗಳನ್ನು ದಯೆ ಯಿಂದ ಕಾಣಬೇಕು ಎಂದರು.ಇಂಥ ಪುರಾಣಗಳು ಇನ್ನು ಹೆಚ್ಚು ನಡೆಯಬೇಕು ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಚ್ಕೆಇ ಸೋಸೈಟಿ ಮಾಜಿ ಅಧ್ಯಕ್ಷ ಹಾಗೂ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಗೌರವ ಅಧ್ಯಕ್ಷ ಡಾ.ಭೀಮಾಶಂಕರ ಮಾತನಾಡಿ ಈ ವರ್ಷ ಜಯನಗರ ಶಿವಮಂದಿರಲ್ಲಿ ಗುಡ್ಡಾಪೂರ ಶ್ರೀ ದಾನಮ್ಮ ದೇವಿಯ ಒಂದು ತಿಂಗಳು ಪುರಾಣ ಯಶಸ್ವಿಯಾಗಿ ಜರುಗಿದ್ದು ಹೆಮ್ಮೆಯ ವಿಷಯ .ಇದಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.ಮಹಾನಗರ ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಮಾತನಾಡಿ ಭಕ್ತರ ಮತ್ತು ಹಿರಿಯರ ಕೋರಿಕೆ ಮೇರೆಗೆ ಶ್ರೀ ದಾನಮ್ಮ ದೇವಿ ಪುರಾಣ ಹಮ್ಮಿಕೊಳ್ಳಲಾಗಿತ್ತುಒಂದು ತಿಂಗಳು ಅನ್ನ ದಾಸೋಹ ನಡೆಯಿತು ಎಂದರು.
ವೇದಮೂರ್ತಿ ಪುರಾಣ ಪಂಡಿತ ಶ್ರೀ ತೋಟಯ್ಯ ಶಾಸ್ತ್ರೀಗಳು ಪುರಾಣ ಹೇಳುವ ಮೂಲಕ ಮಂಗಲೋತ್ಸವ ಪುರಾಣ ಹೇಳಿದರು.ನೀಡಿದರು.ಇದಕ್ಕೂ ಮೊದಲು ಸಂಗೀತ ಕಲಾವಿದರಾದ ಜಗದೀಶ ನಗನೂರ ಹಾಗೂ ಸಿದ್ದಲಿಂಗಯ್ಯ ಸಾಲಿ ಅವರಿಂದ ಭಕ್ತಿ ಗೀತೆಗಳ ಗಾಯನ ನಡೆಯಿತು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಸ್ವಾಗತಿಸಿದರು.ಮಹಿಳಾ ಘಟಕದ ಅನಿತಾ ನವಣಿ ಹಾಗೂ ಲತಾ ತುಪ್ಪದ ಪ್ರಾರ್ಥಿಸಿದರು.ಉಪಾಧ್ಯಕ್ಷ ವಿರೇಶ ದಂಡೋತಿ ವಂದಿಸಿದರು.ಭೀಮಾಶಂಕರ ಶೆಟ್ಟಿ ,ಬಸವರಾಜ ಅನ್ವರಕರ, ಸಿದ್ಧಲಿಂಗ ಗುಬ್ಬಿ, ವಿರೇಶ ಹುಡುಗಿ,ಎಸ್.ಡಿ.ಸೇಡಂಕರ,ಮನೋಹರ ಬಡಶೇಷಿ,ಬಂಡಪ್ಪ ಕೇಸೂರ,ಗುರುಪಾದಪ್ಪ ಕಾಂತಾ, ನಾಗರಾಜ ಖೂಬಾ,ಮಲ್ಲಿಕಾರ್ಜುನ ಕಲ್ಲಾ, ಬಸವರಾಜ ಪುರ್ಮಾ, ಮಲ್ಲಯ್ಯ ಸ್ವಾಮಿ ಗಂಗಾಧರಮಠ, ಶಿವಪುತ್ರಪ್ಪ ಮರಡಿ, ಮಲ್ಲಯ್ಯ ಸ್ವಾಮಿ ಬೀದಿಮನಿ,ವಿನೋದ ಪಾಟೀಲ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ,ಅನುರಾಧಾ ಕುಮಾರಸ್ವಾಮಿ,ಸುಜಾತಾ ಭೀಮಳ್ಳಿ, ಸುರೇಖಾ ಬಾಲಕೊಂದೆ, ಸುಷ್ಮಾ ಮಾಗಿ,ವಿಜಯಾ ದಂಡೋತಿ,ಗಂಗಾ ಅನ್ವರಕರ,ಗೀತಾ ಸಿರಗಾಪೂರ, ಪಾರ್ವತಿ ಶೆಟ್ಟಿ,ವಿಜಯಾ ಚವ್ಹಾಣ,ಶಕುಂತಲಾ ಮರಡಿ ಸೇರಿದಂತೆ ವಿವಿಧ ಬಡಾವಣೆಯ ಅನೇಕ ಮಹಿಳೆಯರು, ಹಿರಿಯರು,ಸಾರ್ವಜನಿಕರು ಭಾಗವಹಿಸಿದ್ದರು.