ಶೈಕ್ಷಣಿಕ ಕ್ಷೇತ್ರದ ದೃವತಾರೆ ಮಹಾದೇವಪ್ಪ ರಾಂಪೂರೆ ಡಾ ಮೈತ್ರಾದೇವಿ

ಶೈಕ್ಷಣಿಕ ಕ್ಷೇತ್ರದ ದೃವತಾರೆ ಮಹಾದೇವಪ್ಪ ರಾಂಪೂರೆ ಡಾ ಮೈತ್ರಾದೇವಿ

ಶೈಕ್ಷಣಿಕ ಕ್ಷೇತ್ರದ ದೃವತಾರೆ ಮಹಾದೇವಪ್ಪ ರಾಂಪೂರೆ ಡಾ ಮೈತ್ರಾದೇವಿ 

ಕಲಬುರ್ಗಿ: ಮಹಾದೇವಪ್ಪ ರಾಂಪುರೆ ಶೈಕ್ಷಣಿಕ ಧ್ರುವತಾರೆ. ಶಿಕ್ಷಣದ ಮೂಲಕ ಅಭಿವೃದ್ಧಿ ಸಾಧ್ಯ ಎಂದು ಬಲವಾಗಿ ನಂಬಿದ ಅವರು ಸಮಾಜದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದರು ಎಂದು ಎಂ ಎಸ್ ಇರಾಣಿ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ ಮೈತ್ರಾದೇವಿ ಹಳೆಮನಿ ಹೇಳಿದರು

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಲಿಂಗೈಕ್ಯ ಮಹಾದೇವಪ್ಪ ರಾಂಪೂರೆಯವರ 53 ನೇ ಪುಣ್ಯತಿಥಿ ಕಾರ್ಯಕ್ರಮದ ನಿಮಿತ್ತ, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು, ರೆಡ್ ರಿಬ್ಬನ್ ಕ್ಲಬ್, ಯುತ್ ರೆಡ್ ಕ್ರಾಸ್ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು. ಹೈದರಾಬಾದ್-ಕರ್ನಾಟಕ ಭಾಗದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿಗಳಾಗಿದ್ದರು ಇವರು ಒಬ್ಬ ಶೈಕ್ಷಣಿಕ ಕ್ಷೇತ್ರದ ದಿಗ್ಗಜರು ಎಂದೆ ಗುರುತಿಸಿಕೊಳ್ಳುತ್ತಾರೆ. ಇವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಎಂಬ ಶಿಕ್ಷಣ ಸಂಸ್ಥೆ ಸ್ಥಾಪಿಸದೆ ಹೋಗಿದ್ದರೆ ಕಲ್ಯಾಣ ಕರ್ನಾಟಕದ ಭಾಗ ಇನ್ನೂ ಶೈಕ್ಷಣಿಕ ಅಂಧಕಾರದಲ್ಲಿ ಮುಳುಗುತ್ತಿತ್ತು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಭಾರಿ ಪ್ರಾಚಾರ್ಯರಾದ ಡಾ ನೀಲಕಂಠ ವಾಲಿಯವರು ಮಾತನಾಡಿ ಲಿಂಗೈಕ್ಯ ಮಹಾದೇವಪ್ಪ ರಾಂಪೂರೆಯವರು ನಮ್ಮ ಭಾಗದ ಮದನ ಮೋಹನ ಮಾಳವೀಯ ಎಂದೆ ಪ್ರಸಿದ್ಧರಾಗಿದ್ದಾರೆ ಎಂದು ಹೇಳಿದರು.

ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಪ್ರಭಾರಿ ಪ್ರಾಚಾರ್ಯರಾದ ಡಾ ನೀಲಕಂಠ ವಾಲಿ ರಕ್ತದಾನ ಮಾಡುವ ಮೂಲಕ ಶಿಬಿರ ಉದ್ಘಾಟಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಐ ಕೆ ಪಾಟೀಲ್ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ಡಾ ಪ್ರಾಣೇಶ್ , ಡಾ ಶಂಕರೆಪ್ಪ ಉಪಸ್ಥಿತರಿದ್ದರು.