ಮಹಿಳಾ ದಿನಾಚರಣೆ ಅಂಗವಾಗಿ ವಿಕಲಚೇತನ ಮಕ್ಕಳಿಗೆ ಸಹಾಯ ಸಾಮಗ್ರಿ ವಿತರಣೆ
ಮಹಿಳಾ ದಿನಾಚರಣೆ ಅಂಗವಾಗಿ ವಿಕಲಚೇತನ ಮಕ್ಕಳಿಗೆ ಸಹಾಯ ಸಾಮಗ್ರಿ ವಿತರಣೆ
ಕಲಬುರಗಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕಲಬುರಗಿ ಉಚ್ಚ ನ್ಯಾಯಾಲಯದ ಮಹಿಳಾ ನ್ಯಾಯವಾದಿಗಳು ಸಮಾಜಮುಖಿ ಕಾರ್ಯ ಕೈಗೊಂಡು ಆಳಂದ ರಸ್ತೆಯಲ್ಲಿರುವ ಸರಕಾರಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಶಾಲೆಯ ಮಕ್ಕಳಿಗೆ ಉಪಯೋಗವಾಗುವಂತಹ ವಸ್ತುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ಅಗತ್ಯವಾಗುವ ಬ್ಲೂಟೂತ್ ಸ್ಪೀಕರ್‌ಗಳು ಹಾಗೂ ಶ್ರವಣ ಮತ್ತು ಮೂಕ ಮಕ್ಕಳಿಗೆ ನೋಟ್‌ಬುಕ್ ಕಿಟ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಮಹಿಳಾ ದಿನಾಚರಣೆಯ ಸಂದೇಶವಾಗಿ ಸಮಾಜದ ಎಲ್ಲಾ ವರ್ಗದ ಮಕ್ಕಳಿಗೂ ಶಿಕ್ಷಣ ಹಾಗೂ ಪ್ರೋತ್ಸಾಹ ದೊರೆಯಬೇಕು ಎಂಬ ಉದ್ದೇಶದಿಂದ ಈ ಸೇವಾ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಮಹಿಳಾ ನ್ಯಾಯವಾದಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಮಹಿಳಾ ವಕೀಲರಾದ ಅನಿತಾ ಎಂ. ರೆಡ್ಡಿ, ಆರ್ತಿ ಪಾಟೀಲ್, ವಿಜಯ ಎಂ. ಪಾಟೀಲ್, ರೇಖಾ ಪಾಟೀಲ್, ಅಂಬಿಕಾ ಚೌಡಾಪುರ್ ಸೇರಿದಂತೆ ಅನೇಕ ಮಹಿಳಾ ನ್ಯಾಯವಾದಿಗಳು ಉಪಸ್ಥಿತರಿದ್ದರು.
