ಸಗರ ಕೆಪಿಎಸ್ ಶಾಲೆಗೆ ಪಿಡಿಒ ಬೇಟಿ.
ಸಗರ ಕೆಪಿಎಸ್ ಶಾಲೆಗೆ ಪಿಡಿಒ ಬೇಟಿ.
ಶಹಾಪುರ : ಎಸ್.ಎಸ್.ಎಲ್.ಸಿ ಪರೀಕ್ಷಾ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ತಾಲೂಕಿನ ಸಗರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸಿದ್ರಾಮಪ್ಪ ದಿಢೀರನೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಗ್ರಾಮದ ಬಹುದೊಡ್ಡ ಶಾಲೆಯಾದ ಕರ್ನಾಟಕ ಪಬ್ಲಿಕ್ ಶಾಲೆಗೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದು,ಇಲ್ಲಿ ಸುಮಾರು ಐದಾರು ನೂರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿರುವುದರ ಬಗ್ಗೆ ಶಿಕ್ಷಕರೊಬ್ಬರು ಮನವಿ ಮಾಡಿಕೊಂಡರು.
ಶುದ್ದ ಕುಡಿಯುವ ನೀರು,ಆಟದ ಮೈದಾನ,ಬೆಳಕಿನ ಸೌಲಭ್ಯ ಶೌಚಾಲಯ ಸೇರಿದಂತೆ ಇನ್ನಿತರ ಸೌಲಭ್ಯಗಳು ಕೂಡಲೇ ಒದಗಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕಾಳಪ್ಪ ಬಡಿಗೇರ,ಡಾಟಾ ಕಮ್ ಕಂಪ್ಯೂಟರ್ ಆಪರೇಟರ್ ಸಾಯಿಬಾಬಾ ಅಣಬಿ,ಶಾಲೆಯ ಉಪ ಪ್ರಾಂಶುಪಾಲ ವಿಶ್ವನಾಥ ಯರಗೋಳ ಸೇರಿದಂತೆ ಪಂಚಾಯ್ತಿ ಸಿಬ್ಬಂದಿಗಳು ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
