ಸಂಘ-ಸಂಸ್ಥೆಗಳು ಸಮಾಜಮುಖಿಯಾಗಿರಲಿ - ದೇವರಾಜ್ ಚೌರ್.
ಸಂಘ-ಸಂಸ್ಥೆಗಳು ಸಮಾಜಮುಖಿಯಾಗಿರಲಿ - ದೇವರಾಜ್ ಚೌರ್.
ಶಹಾಪುರ : ಸಂಘಟನೆಗಳು ಕೇವಲ ಸಾಂಕೇತಿಕವಾಗಿರದೆ ತಳಮಟ್ಟದ ಜನರ ಸಮಸ್ಯೆಗಳಿಗೆ ಸ್ಪಂದಿಸಿ,ಅಧಿಕಾರಿಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿ, ಸಮಾಜಮುಖಿಯಾಗಿ ಕೆಲಸ ಮಾಡಬೇಕೆಂದು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಎಸ್ಸಿ, ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಲ್ಯಾಣ ಕರ್ನಾಟಕ ವಲಯದ ಪ್ರಧಾನ ಕಾರ್ಯದರ್ಶಿಗಳಾದ ದೇವರಾಜ ಚೌರ್ ಕೇಳಿದರು.
ನಗರದ ದೇಶಮುಖ ಬಡಾವಣೆಯಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಯಾದಗಿರಿ ವಿಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿರುವ ನೂತನ ಸದಸ್ಯರ ಸೇರ್ಪಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂಘಟನೆಯಲ್ಲಿ ಸೇರ್ಪಡೆಗೊಂಡ ಪ್ರತಿಯೊಬ್ಬ ನೂತನ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನಾತ್ಮಕವಾಗಿ ವೇದಿಕೆ ಸಿದ್ಧಗೊಳಿಸಿ,ಸಂಘದ ಗೌರವಕ್ಕೆ ಧಕ್ಕೆ ಬಾರದಂತೆ ಸಂಘಟನೆ ಕಟ್ಟಿ ನೊಂದವರಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಯಾದಗಿರಿ ನೂತನ ಜಿಲ್ಲಾ ಅಧ್ಯಕ್ಷ ನಾಗರಾಜ್ ಹೊಸಮನಿ ಗೋಗಿ ಹೇಳಿದರು.
ಈ ಸಂದರ್ಭದಲ್ಲಿ ನಿಂಗಣ್ಣ ದೊರೆ, ತಮ್ಮಣ್ಣ,ರಂಗಣ್ಣ ದೊರೆ,ಪ್ರಧಾನ ಕಾರ್ಯದರ್ಶಿಗಳಾದ ಜೆಟ್ಟಪ್ಪ,
ಪರಮಣ್ಣ ಬಡಿಗೇರ್,ರತಿಲಾಲ್, ದೇಸು,ಸುಭಾಷ್,ಮಹಾದೇವ ಬೆಕಿನಾಳ,ಅಶೋಕ್ ತಾಳಿಕೋಟಿ, ಸೋಮನಾಥ್,ಮಾಹಾಂತಪ್ಪ ನಾಟೇಕರ್,ಅಶೋಕ್ ಪಡಸಾಲಿ,ಮಂಜುನಾಥ್ ಪಡಸಾಲಿ,ಪರಶುರಾಮ್,ಸೋಮು ಸೇರಿದಂತೆ ಇನ್ನಿತರರು ಸಂಘಟನೆಗೆ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು.
