ರಾಯಚೋಟಿ ಆಶ್ರಮ ಭಕ್ತರ ನಂಬಿಕೆಯ ಕೇಂದ್ರವಾಗಿದೆ :..ಶಂಕ್ರಯ್ಯ ತಾತನವರು.

ರಾಯಚೋಟಿ ಆಶ್ರಮ ಭಕ್ತರ ನಂಬಿಕೆಯ ಕೇಂದ್ರವಾಗಿದೆ :..ಶಂಕ್ರಯ್ಯ ತಾತನವರು.

ರಾಯಚೋಟಿ ಆಶ್ರಮ ಭಕ್ತರ ನಂಬಿಕೆಯ ಕೇಂದ್ರವಾಗಿದೆ :..ಶಂಕ್ರಯ್ಯ ತಾತನವರು.

ಶಾಸಕ ಬಸವರಾಜ ಮತ್ತಿಮಡು ಆಶ್ರಮದ ವರೆಗೆ ರಸ್ತೆ ನಿರ್ಮಾಣ ಮಾಡಿದ್ದು ಖುಷಿ ತಂದಿದೆ :..

ಶಹಾಬಾದ : - ಹಳೆ ಶಹಾಬಾದ ದಿಂದ ಅಯೋಧ್ಯಾ ನಗರದಲ್ಲಿರುವ ರಾಯಚೋಟಿ ವೀರಭದ್ರೇಶ್ವರ ಆಶ್ರಮಕ್ಕೆ ಶಾಸಕರಾದ ಬಸವರಾಜ ಮತ್ತಿಮಡು ಅವರು ಹಳೆ ಶಹಭಾದ್ ದಿಂದ ಆಶ್ರಮದವರೆಗೆ 70 ಲಕ್ಷದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡುತ್ತಿರುವುದು ಖುಷಿ ತಂದಿದೆ ಎಂದು ರಾಯಚೋಟಿ ಆಶ್ರಮದ ಪೂಜ್ಯರಾದ ಶಂಕ್ರಯ್ಯ ತಾತನವರು ಹೇಳಿದ್ದರು.

ಅವರು ರಾಯಚೋಟಿ ಆಶ್ರಮದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಈ ಆಶ್ರಮದಲ್ಲಿ ಈಗಾಗಲೇ ಗೋಶಾಲೆಯನ್ನ ಪ್ರಾರಂಭಿಸಲಾಗಿದ್ದು, ಅನಾಥ ಗೋವುಗಳ ರಕ್ಷಣೆ ಮಾಡಿ ಆಶ್ರಮದಲ್ಲಿ ಸಾಕಲಾಗುತ್ತಿದೆ, ರಾಯಚೂಟಿ ವೀರಭದ್ರೇಶ್ವರರ ಕೃಪ ಆಶೀರ್ವಾದದಿಂದ ತಮ್ಮ ಕಷ್ಟಗಳನ್ನು ಹೇಳಿಕೊಂಡು ಬಂದ ಭಕ್ತಾದಿಗಳಿಗೆ ತಂಗಲು ವಸತಿ ವ್ಯವಸ್ಥೆ ಹಾಗೂ ಅನ್ನಪ್ರಸಾದ ಜೊತೆಗೆ ಹಲವಾರು ರೋಗದ ಸಮಸ್ಯೆಗಳನ್ನ ಬಗೆಹರಿಸಿದ್ದೇನೆ ಎಂದು ಹೇಳಿದರು 

ಆಶ್ರಮದಲ್ಲಿ ಮಾನಸಿಕ ರೋಗ, ಕ್ಯಾನ್ಸರ್, ಕಿಡ್ನಿ ಸಮಸ್ಯೆ ಗಳಂತಹ ರೋಗಗಳಿಗೆ ವಿವಿಧ ಕಾಯಿಲೆಗಳಿಗೆ ಗಿಡಮೂಲಿಕೆಗಳಿಂದ ರೋಗಗಳನ್ನ ನಿರ್ಮೂಲನೆ ಮಾಡಿ ರೋಗಿಗಳಿಗೆ ಆರೋಗ್ಯವಾಗಿರಲು ಗಿಡಮೂಲಿಕೆ ಔಷಧೀಯ ಗಳಿಂದ ಗುಣಪಡಿಸಿದ್ದು ರಾಯಚೂಟಿ ಆಶ್ರಮ ಭಕ್ತರ ನಂಬಿಕೆಯ ಕೇಂದ್ರವಾಗಿದೆ ಎಂದರು.

ಈ ಸಂದರ್ಭದಲ್ಲಿ ಆಶ್ರಮಕ್ಕೆ ತಮ್ಮ ಕಷ್ಟಗಳನ್ನ ಪರಿಹರಿಸಿಕೊಳ್ಳಲು ಬಂದಂತಹ ಹಲವಾರು ಭಕ್ತರು ಪೂಜ್ಯರ ಆಶೀರ್ವಾದ ಪಡೆದು ಔಷಧಿಯ ಮೂಲಕ ಗುಣಮುಖರಾಗಿದ್ದೇವೆ ಎಂದು ತಮ್ಮ ಅಭಿಪ್ರಾಯನ್ನ ವ್ಯಕ್ತಪಡಿಸಿದ್ದರು