ರಾಜ್ಯ ಮಟ್ಟದ ಕಲಾಶ್ರೀ ಪ್ರಶಸ್ತಿಗೆ ಅಮೀತ ಪಾಟೀಲ್ ಹಾಗೂ ಆದಿತ್ಯ ಪಾಟೀಲ್ ಆಯ್ಕೆ

ರಾಜ್ಯ ಮಟ್ಟದ ಕಲಾಶ್ರೀ ಪ್ರಶಸ್ತಿಗೆ ಅಮೀತ  ಪಾಟೀಲ್ ಹಾಗೂ  ಆದಿತ್ಯ ಪಾಟೀಲ್   ಆಯ್ಕೆ

ರಾಜ್ಯ ಮಟ್ಟದ ಕಲಾಶ್ರೀ ಪ್ರಶಸ್ತಿಗೆಅಮೀತ ಪಾಟೀಲ್ ಹಾಗೂ ಆದಿತ್ಯ ಪಾಟೀಲ್ ಆಯ್ಕೆ

ಕಲಬುರಗಿ : ರಂಗಾಯಣದಲ್ಲಿ ಇತ್ತೀಚೆಗೆ ರಾಜ್ಯ ಬಾಲ ಭವನ ಸೊಸೈಟಿ ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ನಡೆದ 2024-25ನೇ ಸಾಲಿಗೆ ರಾಜ್ಯ ಮಟ್ಟದ ಕಲಾಶ್ರೀ ಪ್ರಶಸ್ತಿಗೆ ವಿಜ್ಞಾನ ವಿಭಾಗದಲ್ಲಿ ಅಮೀತ ಪಾಟೀಲ್ ಸೆಂಟ್ರಲ್ ಸ್ಕೂಲ ವಿದ್ಯಾರ್ಥಿ ಆದಿತ್ಯ ಪಾಟೀಲ್ ಕಲಬುರಗಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

8 ರಿಂದ 16 ವರ್ಷ ವಯಸ್ಸಿನ ಮಕ್ಕಳಿಗೆ ಇತ್ತೀಚೆಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ವಿದ್ಯಾರ್ಥಿ ಆದಿತ್ಯ ಪಾಟೀಲ್ ಕಲಬುರಗಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಇದೇ ನವೆಂಬರ್ 27 ರಿಂದ 30 ರವರಗೆ ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಆದಿತ್ಯ ಪಾಟೀಲ್ ಭಾಗವಹಿಸಲಿದ್ದಾರೆ. ಶಾಲೆಯ ಅಧ್ಯಕ್ಷ ಬಿ.ಜಿ.ಪಾಟೀಲ್,ಚಂದು ಪಾಟೀಲ್, ಪ್ರಾಂಶುಪಾಲ ಸುಷ್ಮಾ ಸತೀಶ, ವಿದ್ಯಾರ್ಥಿಯತಂದೆ ನಾಗರಾಜ ಪಾಟೀಲ್- ತಾಯಿ ರೇಖಾ ಪಾಟೀಲ್, ಸಹೋದರ ವಾಸು ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಪನಿರ್ದೇಶಕ ರಾಜಕೂಮಾರ ರಾಠೋಡ, ಜಿಲ್ಲಾ ನಿರೂಪಣಾಧಿಕಾರಿ ಮುರುಗೇಶ ಗುಣಾರಿ, ಮಂಜುಳಾ ಪಾಟೀಲ್, ಸಂಯೋಜಕಿ ಗೀತಾ ಎಂ.ಅವರು ವಿಜೇತರಿಗೆ ಪ್ರಮಾಣ ಪತ್ರ ವಿತರಿಸಿದ್ದರು.