ಜನ್ಮದಾತರ ತುಲಾಭಾರ : ಕಣ್ಮನ ತಣಿಸಿದ ಕಡಣಿ ಭಕ್ತರ ಸೇವೆ

ಜನ್ಮದಾತರ ತುಲಾಭಾರ : ಕಣ್ಮನ ತಣಿಸಿದ ಕಡಣಿ ಭಕ್ತರ ಸೇವೆ

ಜನ್ಮದಾತರ ತುಲಾಭಾರ : ಕಣ್ಮನ ತಣಿಸಿದ ಕಡಣಿ ಭಕ್ತರ ಸೇವೆ 

 ಕಲಬುರಗಿ : ಜನ್ಮದಾತರ ಹಾಗು ಮಕ್ಕಳ ತುಲಾಭಾರ ಭಕ್ತಿ ಸೇವೆ ಭಕ್ತಕೋಟಿ ಜನರ ಕಣ್ಮನ ತಣಿಸಿ ಸುತ್ತೂರಿನ ಚಿತ್ತ ಸೆಳೆಯುವಂತೆ ಮಾಡಿದೆ. ತುಲಾಭಾರ ಸೇವೆ ನೋಡಲು ಜನ ಸಾಗರೋಪಾದಿಯಲ್ಲಿ ಕಡಣಿಯತ್ತ ಹರಿದು ಬರುವಂತೆ ಮಾಡಿದೆ. 

 ಅವರು ತಾಲೂಕಿನ ಸುಕ್ಷೇತ್ರ ಕಡಣಿಯಲ್ಲಿ ಶ್ರೀ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಲಚ್ಚಾಣದ ಶ್ರೀ ಸಿದ್ಧಲಿಂಗ ಮಹಾರಾಜ್’ರ ಪುರಾಣ 8ನೇ ದಿನದ ಕಾರ್ಯಕ್ರಮದಲ್ಲಿ ಪುರಾಣದ ಸವಿಯುಣ್ಣಿಸುತ್ತಾ, ಗ್ರಾಮದ ಹಿರಿಯರಾದ ಶಿವಯೋಗೆಪ್ಪ ಹಣಮಂತರಾಯ ಗಿರೆಪ್ಪಗೋಳ ಹಾಗು ಭೀಮಶ್ಯಾ ತಂದೆ ಭೀಮಾಶಂಕರ ಪಾಟೀಲರ ಮೊಮ್ಮಗನಾದ ವರ್ಷಾರು ತಿಂಗಳದ ಶಿಶು ಮನ್ವಿತ್ ಮಲ್ಲಿಕಾರ್ಜುನ ಪಾಟೀಲರ ತುಲಾಭಾರ ಕಡಣಿ ಸೇರಿದಂತೆ ಸುತ್ತೂರಿನ ಜನರನ್ನು ಭಾವುಕಗೊಳಿಸಿತ್ತು. ಜಗನ್ನಾಥ ಸ್ವರೂಪತಿ ಜನ್ಮದಾತ ಹಿರಿಯ ಜೀವಿಯ ಹಾಗು ಶಿವಸ್ವರೂಪಿಯಾಗಿರುವ ಶಿಶುವಿನ ತುಲಾಭಾರದ ಸಂಭ್ರಮ ಭಕ್ತಕೋಟಿ ಜನರ ಭಕ್ತಿ ಅಮಲು ತಾರಕಕ್ಕೇರುವಂತೆ ಮಾಡಿತ್ತು. 

 ಕಣ್ಣಿಗೆ ಕಾಣುವ ದೇವರು ಎಂದರೆ ಜನ್ಮಕೊಟ್ಟವರು. ಅವರನ್ನು ತುಲಾಭಾರ ಸೇವೆ ಮಾಡಿ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರಕ್ಕೆ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನ ಸಮಿತಿಯವರು ಅನುವು ಮಾಡಿಕೊಟ್ಟಿರುವುದು ತುಲಾಭಾರ ಸೇವೆ ಸಲ್ಲಿಸಿ ಬದುಕು ಪಾವನ ಮಾಡಿಕೊಳ್ಳಲು ಅವಕಾಶ ಕಲ್ಪಿಸಿರುವುದು ಭಕ್ತರಿಗೆ ಸಂತಸವನ್ನುಂಟು ಮಾಡಿತ್ತು. 

ಶ್ರೀ ಷ ಬ್ರ ಸಿದ್ದರಾಮ ಶಿವಾಚಾರ್ಯ ರು ಸಾನಿಧ್ಯ ವಹಿಸಿದರು 

 ಮುಖ್ಯ ಅತಿಥಿಗಳಾಗಿ ಕಲಬುರಗಿ ತಾಲೂಕಿನ ಶರಣಸಿರಸಗಿ, ತಾಡತೆಗನೂರು ಹಾಗು ಅಫಜಲಪೂರು ತಾಲೂಕಿನ ಗರೂರ್ ಗ್ರಾಮದ ಗಣ್ಯರು

 ವೇದಿಕೆ ಮೇಲೆ ಉಪಸ್ಥಿತರಿದ್ದರು.  

    ಖ್ಯಾತ ಗವಾಯಿಗಳಾದ ಸಂತೋಷ ಹರಸೂರಮಠ ಅವರ ಸಂಗೀತ ಕಾರ್ಯಕ್ರಮಕ್ಕೆ ಸುರೇಶ ಆಳಂದ ಹಾಗು ಯೋಗಿರಾಜೇಂದ್ರ ಕಡಣಿ ತಬಲಾ ಸಾಥ್ ನೀಡಿದರು. ಚನ್ನಬಸಪ್ಪ ದ್ಯಾವಪಗೋಳ ಪುರಾಣಕ್ಕೆ ಬಸವಣ್ಣನಾಗಿ ಉಪಸ್ಥಿತರಿದ್ದರು.

  ನ್ಯಾಯವಾದಿ ದೇವೆಂದ್ರ ಎಕಲೂರ ಕಾರ್ಯಕ್ರಮ ನಿರೂಪಿಸಿದರೆ, ಶಿವರುದ್ರ ತಿಪ್ಪಣ್ಣ ಕರಿಕಲ್ ಸ್ವಾಗತಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.