ವಿಶ್ವ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ, ಪ್ರತಿಭಾಪುರಸ್ಕಾರ ಹಾಗೂ ಬಿಳ್ಕೊಡುಗೆ ಸಮಾರಂಭ
ವಿಶ್ವ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ, ಪ್ರತಿಭಾಪುರಸ್ಕಾರ ಹಾಗೂ ಬಿಳ್ಕೊಡುಗೆ ಸಮಾರಂಭ
ಕಲಬುರಗಿ: ಶ್ರೀವಿಶ್ವೇಶ್ವರಯ್ಯಾ ಇಂಜಿನಿಯರಿಂಗ ಸಭಾಭವನದಲ್ಲಿ ಹೈಕೊರ್ಟ ಹತ್ತಿರವಿರುವ ಪ್ರತಿಷ್ಠಿತ ವಿಶ್ವ ಭಾರತಿಕಾಲೇಜಿನ ವಾರ್ಷಿಕೋತ್ಸವ, ಪ್ರತಿಭಾಪುರಸ್ಕಾರ ಹಾಗೂ 2024-25 ಸಾಲಿನ ದ್ವಿತಿಯ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭವನ್ನು ಸುಲೇಪೆಟದ ವಿಶ್ವಕರ್ಮ ಎಕದಂಡಗಿಮಠ ಪರಮಪೂಜ್ಯ ದೊಡ್ಡೇಂದ್ರ ಮಹಾಸ್ವಾಮಿಜಿ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾರ್ಥನಾಗೀತೆಯನ್ನು ಕುಮಾರಿ ಮಮತಾ ಮತ್ತು ಪ್ರೀತಿ ಹಾಡಿದರು. ಶ್ರೀಮಹೆಶ ಬಡಿಗೆರವರು ಸುಮಧುರ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ದೊಡ್ಡೇಂದ್ರ ಮಹಾಸ್ವಾಮಿಗಳು” ಕಾರ್ಯಕ್ರಮವನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ ಆಶಿರ್ವಾದವನ್ನು ನೀಡಿ ಶುಭ ಕೋರಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಟಿ.ಗುರುಬಸಪ್ಪಾಸರ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಸಾಧನೆಯ ಹಾದಿಯಲ್ಲಿ ಸೋಲುಗಳೆಂದರೆ ಊಟದಲ್ಲಿ ಸಿಗುವ ಕಲ್ಲಿನ ಹಾಗೆ ಕಲ್ಲು ತೆಗೆದಿಟ್ಟು ಊಟ ಮಾಡಬೇಕು ಹೊರತು ಊಟ ಬಿಡಬಾರದು” ಎನ್ನುವದನ್ನು ಅರಿತರೆ ಮಾತ್ರ ವಿದ್ಯಾರ್ಥಿಗಳ ಬದುಕು ಹಸನು ಸಾಧನೆ ಸಾಧ್ಯ ಎಂದು” ವಿದ್ಯಾರ್ಥಿಗಳಿಗೆ ಬುದ್ದುವಾದ ಮಾತನ್ನು ಹೆಳಿದರು. ಪ್ರತಿ ವಿದ್ಯಾರ್ಥಿ ಸಮಾಜದಲ್ಲಿ ಪ್ರಬುದ್ಧ ಹಾಗೂ ಜವಾಬ್ದಾರಿ ಮೌಲ್ಯ ಯುಳ್ಳವ್ಯಕ್ತಿಯಾಗಿ ಬೆಳೆಯಬೇಕು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಟ್ಟು ವಿದ್ಯಾ ಭ್ಯಾಸ ಮಾಡಬೇಕೆಂದು ಹೇಳಿದರು.
ಮುಖ್ಯ ಗುರು ಪರಮೆಶ್ವರ ವಡ್ಡರಗಿ ಅವರು ಕೂಡಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ “ಮನಸನ್ನು ಬೆಳಗುವ, ಹೃದಯವನ್ನು ಪರಿಶುದ್ಧ ಗೊಳಿಸುವ ಮತ್ತು ಆತ್ಮೋನ್ನತಿಯನ್ನು ತಂದುಕೊಡುವ ಶಿಕ್ಷಣವನ್ನುನಿಜವಾದ ಶಿಕ್ಷಣ” ಎಂದು ಹೆಳಿದರು. ಮಕ್ಕಳಿಗೆ ಆಸ್ತಿಮಾಡುವದಕಿಂತಲು ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡುವದು ಉತ್ತಮ. ಸಂತೋಷ ಹಾಗೂ ಯಶಸ್ಸಿಗೆ ಬುನಾದಿ ಅಮೂಲ್ಯವಾದ ಸಮಯದ ಸದುಪಯೋಗ ಮಾಡುವದು ವಿದ್ಯಾರ್ಥಿಗಳ ಕರ್ತವ್ಯ ಅಂಥಹ ವಿದ್ಯಾರ್ಥಿಗಳನ್ನು ರೂಪಿಸುವ ಶಕ್ತಿ “ವಿಶ್ವಭಾರತಿ ಶಿಕ್ಷಣ ಸಂಸ್ಥೆಗೆ” ಇದೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಸಂಯುಕ್ತ ಪಿ.ಯು.ಕಾಲೇಜಿನ ಪ್ರಾಚಾರ್ಯ ಶ್ರೀಬಿ.ಎಸ್.ಮಾಲಿಪಾಟಿಲ ಇವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಪರೀಕ್ಷೆಯು ಸಮಿಪಿಸುತ್ತಿರುವದರಿಂದ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಮಾಹಿತಿನಿಡಿದಿದರು. ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜಿ.ಕೆ.ಸುತಾರ ಅವರು ಕಾಲೇಜು ಬೆಳೆದುಬಂದರಿತಿ ಮತ್ತು ಕಾಲೇಜಿನ ಸಾಧನಾವರದಿಯನ್ನು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಷ್ಟೆ ಅಲ್ಲದೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮತ್ತು ಭವಿಷ್ಯದ ಸೂಕ್ಷ್ಮತೆಗಳನ್ನು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ನಿವೃತ ಪ್ರಾಧ್ಯಾಪಕ ಡಾ.ಟಿ.ಗುರುಬಸಪ್ಪಾ, ಪ್ರಾಂಶುಪಾಲ ಪ್ರೊ.ಜಿ.ಕೆ.ಸುತಾರ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರಾಘವೇಂದ್ರ ಸುತಾರ, ಉಪಾಧ್ಯಕ್ಷ ಸುಧಾಕರ ರೇಗೋಡಕರ್, ಕಾರ್ಯದರ್ಶಿ ಡಾ.ಮಂಜುನಾಥ ಸುತಾರಸರ್, ಸಲಹೆಗಾರರಾದ ಡಾ.ಜಿ.ಆರ್.ಬಡಿಗೆರ ಸೇರಿದಂತೆ ಕಾಲೇಜಿನ ಉಪನ್ಯಾಸಕವೃಂದದವರು, ಸಿಬ್ಬಂದಿವೃಂದದವರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪಾಲಕರು ಇದ್ದರು. ನಂತರ 2023-24ರ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚಿನ ಅಂಕಗಳು ತೆಗೆದು ಕೊಂಡ ಕಾಲೇಜಿಗೆ ಕಿರ್ತಿಯನ್ನು ತಂದು ಕೊಟ್ಟಿರುವ ವಿದ್ಯಾರ್ಥಿಗಳಿಗೆ ಗಣ್ಯರಿಂದಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮಗಳು ಮಾಡಲಾಯಿತು. ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.