ಕಬ್ಬು ತುಂಬಿದ ಲಾರಿ ಹರಿದು ಕುರಿಗಳ ಸಾವು ಕಲಬುರಗಿ ತಾಲೂಕಿನ ಹಾರುತಿಹಡಗಿಲ ಕ್ರಾಸ್ ಬಳಿ ದುರ್ಘಟನೆ

ಕಬ್ಬು ತುಂಬಿದ ಲಾರಿ ಹರಿದು ಕುರಿಗಳ ಸಾವು  ಕಲಬುರಗಿ ತಾಲೂಕಿನ ಹಾರುತಿಹಡಗಿಲ ಕ್ರಾಸ್ ಬಳಿ ದುರ್ಘಟನೆ

ಕಬ್ಬು ತುಂಬಿದ ಲಾರಿ ಹರಿದು ಕುರಿಗಳ ಸಾವು

ಕಲಬುರಗಿ ತಾಲೂಕಿನ ಹಾರುತಿಹಡಗಿಲ ಕ್ರಾಸ್ ಬಳಿ ದುರ್ಘಟನೆ 

ಕಲಬುರಗಿ:ಕಲಬುರಗಿ ತಾಲೂಕಿನ ಹಾರುತಿಹಡಗಿಲ ಕ್ರಾಸ್ ಬಳಿ ಕಬ್ಬು ತುಂಬಿದ ಲಾರಿ ಹರಿದು ಹಲವು ಕುರಿಗಳು ಮೃತಪಟ್ಟ ಘಟನೆ ನಡೆದಿದೆ.

ಹಾರುತಿ ಹಡಗಿಲ ಗ್ರಾಮದ ಮಲ್ಲಪ್ಪ ಪೂಜಾರಿ ಎಂಬುವರಿಗೆ ಸೇರಿದ ಕುರಿಗಳು ರಸ್ತೆ ಬದಿಯಲ್ಲಿ ಹೋಗುತ್ತಿದ್ದ ವೇಳೆ, ಕಲಬುರಗಿಯಿಂದ ಅಫಜಲಪುರದ ಕಡೆಗೆ ತೆರಳುತ್ತಿದ್ದ ಕಬ್ಬು ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕುರಿಗಳ ಮೇಲೆ ಹರಿದಿದೆ. ಪರಿಣಾಮವಾಗಿ ಸ್ಥಳದಲ್ಲೇ ಹಲವು ಕುರಿಗಳು ಸಾವನ್ನಪ್ಪಿವೆ.

ಘಟನೆಯ ಸುದ್ದಿ ತಿಳಿದ ತಕ್ಷಣ ಕಲಬುರಗಿ ಸಂಚಾರಿ ಒನ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿಸಿಕೊಂಡಿದ್ದಾರೆ. ಈ ದುರ್ಘಟನೆಯಿಂದ ಕುರಿ ಸಾಕಾಣಿಕೆದಾರ ಮಲ್ಲಪ್ಪ ಪೂಜಾರಿ ಅವರಿಗೆ ಭಾರಿ ನಷ್ಟ ಉಂಟಾಗಿದೆ.