ಕೆಇಬಿ ಎಇಇ ಹಾಗೂ ಎಇ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಶ್ರೀಕಾಂತ ಜಾಧವ ಮನವಿ

ಕೆಇಬಿ ಎಇಇ ಹಾಗೂ ಎಇ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಶ್ರೀಕಾಂತ ಜಾಧವ  ಮನವಿ

ಕೆಇಬಿ ಎಇಇ ಹಾಗೂ ಎಇ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಶ್ರೀಕಾಂತ ಜಾಧವ ಮನವಿ

ಕಲಬುರಗಿ : ಜಿಲ್ಲೆಯ ಜೇವರ್ಗಿ ತಾಲೂಕಿನ ಹಿಪ್ಪರ್ಗಾ ಎಸ್.ಎನ್ ಗ್ರಾಮದ ತಾಂಡದಲ್ಲಿ ಜೆ.ಜೆ.ಎಂ ಯೋಜನೆಯ ಪೈಪ್ ಲೈನ್ ಕಾಮಗಾರಿಯನ್ನು ಮತ್ತು ಕಳಪೆ ಮಟ್ಟದ ಹಾಗೂ ಅಪೂರ್ಣ ಕಾಮಗಾರಿ ಮಾಡಿ ಹಣ ಲಪಟಾಯಿಸುತ್ತಿರುವ ಸಂಬಂಧಪಟ್ಟ ಎಇಇ ಹಾಗೂ ಎಇ ಮೇಲೆ ಕ್ರಿಮಿನಲ್ ಕೇಸನ್ನು ದಾಖಲಿಸಿ ಸೇವೆಯಿಂದ ವಜಾಗೊಳಿಸಿ ಮತ್ತು ಇನ್ನುಳಿದ ಹಣವನ್ನು ತಡೆಹಿಡಿಯಬೇಕು ಹಾಗೂ ಸಂಬಂಧಪಟ್ಟ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ವೀರ ಶಿವಾಜಿ ಸೇನೆ ಜಿಲ್ಲಾಧ್ಯಕ್ಷ ಶ್ರೀಕಾಂತ ಜಾಧವ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮನವಿ ಸಲ್ಲಿಸಿದರು. 

ಜೇವರ್ಗಿ ತಾಲೂಕಿನ ಹಿಪ್ಪರ್ಗಾ ಎಸ್.ಎನ್ ಗ್ರಾಮ ಪಂಚಾಯತಿಯ ಹಿಪ್ಪರಗಾ ಗ್ರಾಮದ ತಾಂಡದಲ್ಲಿ ಜೆ.ಜೆ.ಎಮ್ ಯೋಜನೆಯ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಸದರಿ ಪೈಪ್‌ಲೈನ್ ಕಾಮಗಾರಿಯು ಅತಿ ಕಳಪೆ ಮಟ್ಟದಲ್ಲಿ ಮಾಡುತ್ತಿದ್ದು, ಕೆಲವು ಕಡೆಗೆ ಪೈಪ್‌ಲೈನ್ ಹಾಕದೇ ಮತ್ತು ಈಗಾಗಲೇ ಇರುವ ಹಳೆಯ ಪೈಪ್‌ಗೆ ಜೋಡಣೆ ಮಾಡುವ ಮೂಲಕ ಅನುದಾನ ಲಪಟಾಯಿಸಲಾಗಿದೆ. ಮತ್ತು ಹೊಸ ಪೈಪ್‌ಲೈನ್ ಖರೀದಿಸದೆ ಇದ್ದರೂ ರಶೀದಿ ತೆಗೆದುಕೊಂಡು ಕಛೇರಿಗೆ ಸಲ್ಲಿಸಿ ಹಣ ಲಪಟಾಯಿಸುವ ಹುನ್ನಾರ ನಡೆಯುತ್ತಿದೆ.

ಈ ವಿಷಯದ ಬಗ್ಗೆ ಕುಲಂಕುಶವಾಗಿ ತನಿಖೆ ಮಾಡಿ ಸದರಿ ಸಂಬಂಧಪಟ್ಟ, ಎಇಇ ಮತ್ತು ಎಇ ಹಾಗೂ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಸೇವೆಯಿಂದ ವಜಾಗೊಳಿಸಿ ಬಿಡುಗಡೆಯ ಅನುದಾನವನ್ನು ತಡೆಹಿಡಿದು ಸಂಬಂಧಪಟ್ಟ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಇಲ್ಲವಾದರೆ ಮುಬಂರುವ ದಿನಗಳಲ್ಲಿ ಜಿಲ್ಲಾ ಪಂಚಾಯತ ಎದುರುಗಡೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಶ್ರೀಕಾಂತ ಜಾಧವ ಅವರು ಮನವಿಯಲ್ಲಿ ತಿಳಿಸಿದ್ದಾರೆ.