ಮೃತ ರೈತನ ನೆರವಿಗೆ ಬಾರದ ಶಾಸಕ ಡಾ ಅಜಯ್ ಸಿಂಗ್ ವಿರುದ್ಧ. ಮಲ್ಕಣ್ಣ ಹಿರೇ ಪೂಜಾರಿ ಆಕ್ರೋಶ...
ಮೃತ ರೈತನ ನೆರವಿಗೆ ಬಾರದ ಶಾಸಕ ಡಾ ಅಜಯ್ ಸಿಂಗ್ ವಿರುದ್ಧ. ಮಲ್ಕಣ್ಣ ಹಿರೇ ಪೂಜಾರಿ ಆಕ್ರೋಶ...
ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಸಾಲಗಾರರ ಕಿರುಕುಳಕ್ಕೆ ಮನನೊಂದು ತನ್ನ ಸ್ವಂತ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಲ್ಲಪ್ಪ ಭೀಮರಾಯ ಕಂಬಳಿ (55) ಅವರ ಕುಟುಂಬಕ್ಕೆ ತಾಲೂಕಿನ ಮತಕ್ಷೇತ್ರದ ಶಾಸಕರಾದ ಡಾ. ಅಜಯ ಸಿಂಗ್ ಅವರು ಕುಟುಂಬಸ್ಥರಿಗೆ ಭೇಟಿಯಾಗಿ ಸಾಂತ್ವಾನ ಹೇಳಿ ಪರಿಹಾರ ಧನ ವಿತರಿಸಬೇಕಾಗಿತ್ತು.ಆದರೆ ರೈತ ಮಲ್ಲಪ್ಪ ಅವರು ಮೃತಪಟ್ಟು ಇಂದಿಗೆ 14 ದಿವಸವಾದರೂ ಶಾಸಕರ ಸುಳ್ಳುವೇಯೇ ಇಲ್ಲ. ಚುನಾವಣೆಯ ಸಂದರ್ಭದಲ್ಲಿ ಪ್ರತಿ ಹಳ್ಳಿಯಲ್ಲಿ ಸಂಚಾರ ಮಾಡುವ ಶಾಸಕರು ಬಿಳವಾರ ಗ್ರಾಮದ ಕಡೆ ಯಾಕೆ ಕಣ್ಣೆತ್ತಿ ನೋಡುತ್ತಿಲ್ಲ. ಸಾಮಾನ್ಯ ರೈತನ ಜೀವಕ್ಕೆ ಬೆಲೆಯೆ ಇಲ್ಲವೇ ಅಥವಾ ನಿಮ್ಮ ಮತ ಕ್ಷೇತ್ರದ ವ್ಯಕ್ತಿ ಅಲ್ಲವೇ. ಆತ ನಿಮಗೆ ಮತದಾನ ಮಾಡಿ ಆಯ್ಕೆ ಮಾಡಿದ್ದಾರೆ. ಇದನಾದರೂ ಶಾಸಕರು ಅರ್ಥ ಮಾಡ್ಕೋಬೇಕು. ಆಯಾ ಕಾರ್ಯಕ್ರಮದಲ್ಲಿ ಬಿಜಿಯಾಗಿರುವ ತಾವು. ದೂರವಾಣಿ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗಲ್ಲ ಹೀಗಾದರೆ ತಾಲೂಕಿನಲ್ಲಿ ಹಲವಾರು ಸಮಸ್ಯೆಗಳಿವೆ ಅದನ್ನು ಬಗೆಹರಿಸುವುದಾದರೂ ಹೇಗೆ ಶಾಸಕರೆ. ಕೂಡಲೆ ಮೃತಪಟ್ಟ ಮಲ್ಲಪ್ಪನ ಕುಟುಂಬಸ್ಥರಿಗೆ ಭೇಟಿಯಾಗಿ ಸಾಂತ್ವಾನ ಹೇಳಿ ಪರಿಹಾರ ಧನ ವಿತರಿಸಬೇಕು ಒಂದು ವೇಳೆ ನಿರ್ಲಕ್ಷ ವಹಿಸಿದರೆ ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಬಿಳವಾರ ಗ್ರಾಮಸ್ಥರೊಂದಿಗೆ ಹಾಗೂ ನೊಂದ ಕುಟುಂಬಸ್ಥರೊಂದಿಗೆ ತಾಲೂಕ ಶ್ರೀರಾಮ ಸೇನಾ ವತಿಯಿಂದ ಉಗ್ರವಾದಂತಹ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜೇವರ್ಗಿ ತಾಲೂಕ ಅಧ್ಯಕ್ಷ ರಾಧ ಮಲ್ಕಣ್ಣ ಹಿರೇ ಪೂಜಾರಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಶಾಸಕರಿಗೆ ಆಗ್ರಹಿಸಿದ್ದಾರೆ
ವರದಿ ಜೆಟ್ಟಪ್ಪ ಎಸ್ ಪೂಜಾರಿ