ಸರ್ದಾರ್ ವಲ್ಲಭಭಾಯ್ ಪಟೇಲ್ ಗೆ ನಮನ
ಸರ್ದಾರ್ ವಲ್ಲಭಭಾಯ್ ಪಟೇಲ್ ಗೆ ನಮನ
31 ರಂದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ರ ಜಯಂತಿ ನಿಮಿತ್ತ ಪಟೇಲ್ ವೃತ್ತದಲ್ಲಿ ನಮನ ಕಾರ್ಯಕ್ರಮ.
ಭಾರತ ದೇಶದ ಮೊದಲನೇ ಉಪ ಪ್ರಧಾನಿ ಮತ್ತು ಗೃಹ ಮಂತ್ರಿಗಳಾದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ರ ಜನ್ಮದಿನದ ನಿಮಿತ್ಯ ನಾಳೆ ದಿನಾಂಕ 31.10.25 ರಂದು ಶುಕ್ರವಾರ ಬೆಳಗ್ಗೆ 10.30 ಗಂಟೆಗೆ ಸರ್ದಾರ್ ಪಟೇಲ್ ವೃತ್ತದಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ.
ಭಾರತದ ಎಕತಾ ಪುರುಷ್ಯ ವಿಶೇಷವಾಗಿ ಕಲ್ಯಾಣ ಕರ್ನಾಟಕ ಮತ್ತು ಹೈದ್ರಾಬಾದ ಸಂಸ್ಥಾನಕ್ಕೆ ನಿಜಾಂ ರಾಜ್ಯಶಾಹಿ ವ್ಯವಸ್ಥೆಯಿಂದ ಪ್ರಜಾಶಾಹಿ ವಿಶಾಲ ಭಾರತ ದೇಶದಲ್ಲಿ ವಿಲೀನಗೊಳಿಸಲು ದಿಟ್ಟತನದ ಧೋರಣೆ ಅನುಸರಿಸಿದ ಮಹಾನ ಧೀಮಂತ ನಾಯಕ ಸರ್ದಾರ್ ವಲ್ಲಭಭಾಯ್ ಪಟೇಲ್ ರಿಗೆ ಭಾರತದ ಅದರಲ್ಲೂ ಕಲ್ಯಾಣ ಕರ್ನಾಟಕದ ಜನಮಾನಸ ಉಕ್ಕಿನ ಮನುಷ್ಯನ ದಿಟ್ಟತನದ ಮಹಾನ್ ಐತಿಹಾಸಿಕ ಕಾರ್ಯಕ್ಕೆ ಮರೆಯಲು ಸಾಧ್ಯವೇ ಇಲ್ಲ.
ನಾಳೆ ದಿನಾಂಕ 31.10.25 ರಂದು ಶುಕ್ರವಾರ ಬೆಳಗ್ಗೆ 10.30 ಗಂಟೆಗೆ ಪಟೇಲ್ ವೃತ್ತದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಜಯಂತಿಯ ನಿಮಿತ್ಯ ಆಯೋಜಿಸಿರುವ ನಮನ ಕಾರ್ಯಕ್ರಮಕ್ಕೆ ಸಚಿವರು, ಜನಪ್ರತಿನಿಧಿಗಳು,ಆಯಾ ಪಕ್ಷಗಳ,ಸಂಘ ಸಂಸ್ಥೆಗಳ ಪ್ರಮುಖರು, ಗಣ್ಯರು ಭಾಗವಹಿಸಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ರಿಗೆ ನಮನ ಸಲ್ಲಿಸಲು ಸರ್ದಾರ್ ವಲ್ಲಭಭಾಯ್ ಪಟೇಲ್ ಜಯಂತೋತ್ಸವ ಸಮಿತಿಯ ಮತ್ತು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ
.
