ಜೆಜೆಎಂ ಅನುದಾನದಲ್ಲಿ ನೀರಿನ ಟ್ಯಾಂಕ್ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಚಾಲನೆ
ಜೆಜೆಎಂ ಅನುದಾನದಲ್ಲಿ ನೀರಿನ ಟ್ಯಾಂಕ್ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಚಾಲನೆ
ಕಲಬುರಗಿ: ತಾಲೂಕಿನ ಕಾಡನಾಳ ಗ್ರಾಮದಲ್ಲಿ ಜೆಜೆಎಂ ಅನುದಾನದಲ್ಲಿ ನೀರಿನ ಟ್ಯಾಂಕ್ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಚಾಲನೆ ನೀಡಿ ಮಾತನಾಡಿದ ಅವರು ಭೂಮಿಯಲ್ಲಿ ಜೀವಾಂಕುರವಾಗಲು ನೀರೇ ಮೂಲಾಧಾರ ಎಂಬುದು ಎಲ್ಲರಿಗೂ ತಿಳಿದೇ ಇದೆ. ಗಾಳಿ, ನೀರು, ಬೆಳಕು ಸಕಲ ಜೀವರಾಶಿಗೂ ಅತ್ಯಗತ್ಯ. ಭಾರತ ಭೌಗೋಳಿಕವಾಗಿ ವೈವಿಧ್ಯತೆಯಿಂದ ಕೂಡಿದೆ. ಕೆಲವು ಪ್ರದೇಶಗಳಲ್ಲಿ ನೀರು ಸಮೃದ್ಧವಾಗಿದ್ದರೆ, ಕೆಲವೆಡೆ ಸಾವಿರ ಅಡಿಗಳಷ್ಟು ಬೋರ್‌ವೆಲ್ ಕೊರೆದರೂ ನೀರಿನ ಸೆಲೆ ಕಾಣದು.ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಈ ಸಾಧನೆ ಮಾಡಿದೆ ಎಂದು ಹೇಳಿದರು
. ಈ ಸಂಧರ್ಭದಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ, ಜೆಇ ವಿಕಾಶ, ಗುತೇದಾರ ಅನೀಲಕುಮಾರ ಎಸ್.ಆರ್, ಶಿವುಕುಮಾರ, ಸುಭಾಷಚಂದ್ರ ಡೆಂಕಿ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.