ಶ್ರೀರಾಮ ಫೈನಾನ್ಸ್ ವತಿಯಿಂದ 100 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ

ಶ್ರೀರಾಮ ಫೈನಾನ್ಸ್ ವತಿಯಿಂದ 100 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ
ಆಳಂದ :ಪಟ್ಟಣದಲ್ಲಿ ಶ್ರೀರಾಮ ಫೈನಾನ್ಸ್ ವತಿಯಿಂದ ಪ್ರತಿಭಾವಂತ 100 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ಸನ್ಮಾನ ಸಮಾರಂಭ ನಡೆಯಿತು.
ಕಾರ್ಯ ಕ್ರಮದ ದಿವ್ಯಸಾನಿಧ್ಯವನ್ನು
ಶ್ರೀ. ಷ. ಬ್ರ.ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ 100 ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ಧನ ನೀಡಿ ಸನ್ಮಾನಿಸುತ್ತಿರುವುದು ಶ್ರೀರಾಮ ಫೈನಾನ್ಸ್ ನ ಕಾರ್ಯ ಶ್ಲಾಘನೀಯ ವಿದ್ಯಾರ್ಥಿಗಳು ಮೊಬೈಲ್ ಮತ್ತು ದುಶ್ಚಟಗಳಿಂದ ದೂರವಿರಬೇಕು ಚೆನ್ನಾಗಿ ಓದಬೇಕು ತಂದೆ ತಾಯಿ ಸಮಾಜದ ಕೀರ್ತಿ ತರಬೇಕೆಂದು ಹೇಳಿದರು.
ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಶ್ರೀ ಪಂಚಾಕ್ಷರಪ್ಪ. ಜೆ . (ವೈಸ್ ಪ್ರೆಸಿಡೆಂಟ್ ಸ್ಟೆಟ್ ಬಿಸಿನೆಸ್ ಹೆಡ್ಸ) ವಹಿಸಿ ಶ್ರೀರಾಮ ಫೈನಾನ್ಸ್ ಮೊಟ್ಟ ಮೊದಲಿಗೆ 1974 ರಲ್ಲಿ ಶ್ರೀ ರಾಮ್ ಚಿಟ್ ಎಂಬ ಹೆಸರಿನಲ್ಲಿ ಸ್ಥಾಪನೆಯಾಗಿ ನಂತರ 1979 ರಲ್ಲಿ ಶ್ರೀ ರಾಮ ಟ್ರಾನ್ಸ್ಪೋರ್ಟ್ ಫೈನಾನ್ಸ್ ಕಂಪನಿ ಲಿಮಿಟೆಡ್ ಎಂಬ ಹೆಸರಿನಿಂದ ಗುರುತಿಸಿಕೊಂಡು ಇಲ್ಲಿಯವರೆಗೆ ವ್ಯವಹಾರ ಮಾಡಿದ್ದು ಈಗ 5 ನೇ ಡಿಸೆಂಬರ್ 2022 ರಿಂದ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಎಂದು ಗುರುತಿಸಿಕೊಂಡು ಸದರಿ ಶ್ರೀರಾಮ ಫೈನಾನ್ಸ್ ನನ್ನು ಗೌರವಾನ್ವಿತ ಶ್ರೀ ತ್ಯಾಗರಾಜನ್ ರವರು ಸ್ಥಾಪನೆ ಮಾಡಿದರು. ಎಂದು ಶ್ರೀರಾಮ ಫೈನ್ಸಾ ನ ನ ಪರಿಚಯ ನೀಡಿದರು .
ಈ ಸಂದರ್ಭದಲ್ಲಿ
ಮಧು ಕಾಂತ ಜೆ ವ್ಯವಹಾರ ಮುಖ್ಯಸ್ಥರು. ಮುಖ್ಯ ಅತಿಥಿಗಳಾಗಿ
ಶ್ರೀ ಮೊಹ್ಮದ್ ಶಫಿಯೋದ್ಧಿನ್ ನ್ಯೂ ನೊಬಲ್ ಟ್ರಾನ್ಸ್ ಫೋರ್ಟ್ ಆಳಂದ
ಗೋವಿಂದ ರಾಠೋಡ
ಸುಭಾಷ ರೆಡ್ಡಿ ಬ್ರ್ಯಾಂಚ್ ಮ್ಯಾನೇಜರ
ಶರಣಪ್ಪ ಹಳಿಯಾಳ ಮ್ಯಾನೇಜರ್ (TPG)
ರಮೇಶ ಕವಲಗಾ
ಅಮರ ಬುದಾರಪ
ಶಶಿಕುಮಾರ ಗೌಳಿ
ಮಹಾ ದೇವಿ
ವರ್ಷಾ
ಶ್ರೀರಾಮ ಫೈನಾನ್ಸ್ ನ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು
ರಮೇಶ ಕವಲಗಾ
ನಿರೂಪಿಸಿದರು
ಶಶಿಕುಮಾರ ಗಾವಡೆ ವಂದಿಸಿದರು
ವರದಿ ಡಾ .ಅವಿನಾಶ S ದೇವನೂರ