ಗ್ರಾಮೀಣ ಕೂಲಿಕಾರರಿಗೆ ನರೇಗಾ ಯೋಜನೆ ಆರ್ಥಿಕ ಸಧೃಡತೆಗೆ ದಾರಿ: ಹಣಮಂತರಾಯ ಕೌಟಗೆ
![ಗ್ರಾಮೀಣ ಕೂಲಿಕಾರರಿಗೆ ನರೇಗಾ ಯೋಜನೆ ಆರ್ಥಿಕ ಸಧೃಡತೆಗೆ ದಾರಿ: ಹಣಮಂತರಾಯ ಕೌಟಗೆ](https://kalyanakahale.com/uploads/images/202502/image_870x_67a4c002c9856.jpg)
ಗ್ರಾಮೀಣ ಕೂಲಿಕಾರರಿಗೆ ನರೇಗಾ ಯೋಜನೆ ಆರ್ಥಿಕ ಸಧೃಡತೆಗೆ ದಾರಿ: ಹಣಮಂತರಾಯ ಕೌಟಗೆ
ಕಮಲನಗರ.: ಮಹಾತ್ಮಾ ಗಾಂಧಿ ನರೇಗಾ ಯೋಜನೆಯಿಂದ ಗ್ರಾಮೀಣ ಕೂಲಿಕಾರರಿಗೆ ಕೂಲಿ ಕೆಲಸದಿಂದ ದೊರೆಯುವ ಕೂಲಿ ಹಣವು ಆರ್ಥಿಕ ಸಧೃಡತೆಗೆ ದಾರಿಯಾಗಿದೆ ಎಂದು ಕಮಲನಗರ ತಾಲೂಕಿನ ಸಹಾಯಕ ನಿರ್ದೇಶಕರಾದ ಹಣಂತರಾಯ ಕೌಟಗೆ ಹೇಳಿದರು.
ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ಅವರ ಆದೇಶದಂತೆ ಭಾನುವಾರ ಕಮಲನಗರ ತಾಲೂಕಿನ ತೋರಣಾ ಗ್ರಾಮದ ವ್ಯಾಪ್ತಿಯಲ್ಲಿ ಕಾಮಗಾರಿ ಸ್ಥಳದಲ್ಲಿ ಆಯೋಜಿಸಿದ್ದ ನರೇಗಾ ದಿವಸ ಆಚರಣೆ ಕಾರ್ಯಕ್ರಮಕ್ಕೆ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೇವಲ ಸಾಮುದಾಯಿಕ ಕಾಮಗಾರಿ ಮಾತ್ರವಲ್ಲದೇ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿರುತ್ತದೆ. ವೈಯಕ್ತಿಕ ಕಾಮಗಾರಿಗಳಾದ ದನದ ಶೆಡ್, ಕುರಿಶೆಡ್, ಕೋಳಿಶೆಡ್, ಹಂದಿಶೆಡ್, ತೋಟಗಾರಿಕೆ ಬೆಳೆ, ರೇಷ್ಮೆ ಬೆಳೆ ಕಾಮಗಾರಿ ಅನುಷ್ಠಾನ ಮಾಡಿಕೊಂಡು ಆರ್ಥಿಕ ಸಬಲರಾಗಿರಿ ಎಂದರು.
ಗ್ರಾ.ಪಂ. ಅಧ್ಯಕ್ಷರಾದ ಸುನೀಲ ಶಿಗರೆ* ಮಾತನಾಡಿ ನರೇಗಾ ಯೋಜನೆಯು ಗ್ರಾಮೀಣ ಭಾಗದ ಕುಟುಂಬಗಳಿಗೆ ವರದಾನವಾಗಿದೆ. ಪ್ರತಿಯೊಂದು ಕುಟುಂಬವು 100 ದಿನಗಳ ಕೂಲಿ ಕೆಲಸ ನಿರ್ವಹಿಸಿ ಸಬಲರಾಗಬೇಕೆಂದು ಕರೆ ನೀಡಿದರು.
ಪಂಚಾಯತ ಅಭಿವೃದ್ಧಿ ಅಧಿಕಾರಿ ಮಲ್ಲೇಶ ಮಾತನಾಡಿ ಗಿಡ ಸದೃಢವಾಗಿರಲು ಬೇರು ಗಟ್ಟಿಯಾಗಿರಬೇಕು, ಗ್ರಾಮೀಣ ಜನರು ಪ್ರಗತಿಯಾಗಲು ನರೇಗಾ ಯೋಜನೆಯ ಬಲವಿರಬೇಕು. ಅಂತರ್ಜಲ ಮಟ್ಟ, ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳಾದ ಅಮೃತ ಸರೋವರ ಕೆರೆಗಳ ನಿರ್ಮಾಣ, ಕಂದಕ ಬದು ನಿರ್ಮಾಣ, ಕೃಷಿ ಹೊಂಡ, ನಾಲಾ ಅಭಿವೃದ್ಧಿಯಿಂದ ತಾಲೂಕಿನ ರೈತರ ಹೊಲಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಗೊಂಡಿದೆ. ಹೊಲದಲ್ಲಿ ತೇವಾಂಶ ಮತ್ತು ಫಲವತ್ತತೆ ಹೆಚ್ಚಿಸಲಾಗಿದೆ. ರೈತರು ಆರ್ಥಿಕ ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಪ್ರೋತ್ಸಾಹಿಸಲಾಗಿದೆ ಎಂದು ನರೇಗಾ ಯೋಜನೆ ನಡೆದು ಬಂದ ದಾರಿ ಕುರಿತು ಪ್ರಾಸ್ತಾವಿಕ ಮಾತನಾಡಿದರು.
ಕೆಕ್ ಕತ್ತರಿಸಿ ಸಂಭ್ರಮಿಸಿದ ಕೂಲಿಕಾರರು :-ಗ್ರಾಮ ಪಂಚಾಯತಿಯಿಂದ ಆಯೋಜಿಸಿದ ನರೇಗಾ ದಿವಸವನ್ನು ಕೂಲಿಕಾರರು ಕೇಕ್ ಕತ್ತರಿಸಿ ಸಂತಸ ಪಟ್ಟು. ನರೇಗಾ ದಿವಸ ಕೂಲಿಕಾರರ ದಿನವೆಂದು ಖುಷಿಪಟ್ಟರು.
ಕೂಲಿಕಾರರಿಗೆ ಸನ್ಮಾನ:- 100 ದಿನಗಳ ಕೂಲಿ ಕೆಲಸ ನಿರ್ವಹಿಸಿದ ಕುಟುಂಬಗಳಿಗೆ ಹಾಗೂ ಕಾಯಕ ಬಂಧುಗಳಿಗೆ ಶಾಲು, ಹೂವಿನ ಹಾರ ಹಾಕುವದರ ಮೂಲಕ ಕಾಯಕ ಸನ್ಮಾನ ಮಾಡಿ ಗೌರವಿಸಿದರು. ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಉದ್ಯೋಗ ಚೀಟಿಯನ್ನು ಮಾನ್ಯ ಸಹಾಯಕ ನಿರ್ದೇಶಕರು, ಅಧ್ಯಕ್ಷರು, ಪಿಡಿಓ ಅವರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷರು, ಸದಸ್ಯರಾದ ಮಾಧವ ಭೋಸಲೆ, ತಾಂತ್ರಿಕ ಸಹಾಯಕರಾದ ಅರ್ಜುನ, ಕಾರ್ಯದರ್ಶಿ ಸಂಜು, ಡಿಇಓ ರಾಜಕುಮಾರ, ಬಿಲ್ ಕಲೆಕ್ಟರ್ ಸಂಜು, ಕೂಲಿಕಾರರಾದ ರೇಣುಕಾ, ಮೇಹರೂನಬಿ, ಪರತಾಬಾಯಿ ಸೇರಿದಂತೆ ಇತರ ಕೂಲಿಕಾರರು ಹಾಗೂ ಗ್ರಾ.ಪಂ.ಸಿಬ್ಬಂದಿಗಳು ಇದ್ದರು.