ಕಥಾ ಬಿಂದು ಪ್ರಕಾಶನದ ರಾಜ್ಯ ಮಟ್ಟದ ಕವಿಗೋಷ್ಠಿ ಅಧ್ಯಕ್ಷಭಾಷಣ

ಕಥಾ ಬಿಂದು ಪ್ರಕಾಶನದ ರಾಜ್ಯ ಮಟ್ಟದ ಕವಿಗೋಷ್ಠಿ ಅಧ್ಯಕ್ಷಭಾಷಣ

ಕಥಾ ಬಿಂದು ಪ್ರಕಾಶನದ ರಾಜ್ಯ ಮಟ್ಟದ ಕವಿಗೋಷ್ಠಿ ಅಧ್ಯಕ್ಷಭಾಷಣ

ಎಲ್ಲರಿಗೂ ನಮಸ್ಕಾರ ಶುಭ ಸಂಜೆ

ನಾವು ನಮ್ಮ ರಾಜಧಾನಿಯ ರವೀಂದ್ರ ಕಲಾ ಕ್ಷೇತ್ರದಂತಹ ಮಹತ್ವಪೂರ್ಣ ಸ್ಥಳದಲ್ಲಿ ಕವಿಗೋಷ್ಠಿ ಯಲ್ಲಿ ಪಾಲ್ಗೊಂಡಿರುವುದು ಸುಯೋಗ. ಇದೆಲ್ಲ ಸಾಧ್ಯವಾಗಿರುವುದು ನಮ್ಮೆಲ್ಲರ ನೆಚ್ಚಿನ ಗೌರವನ್ವಿತ ಪ್ರದೀಪ್ ಸರ್, ಇವರಿಗೆ ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 ಈದಿನ ಕವಿಗೋಷ್ಠಿ ಯಲ್ಲಿ ಕವಿತೆಗಳನ್ನು ವಾಚನ ಮಾಡಿದ ಕವಿಮಿತ್ರರಿಗೆಲ್ಲ ಅಂತಾರಾಳದ ಅಭಿನಂದನೆಗಳು.

*ಈಗ ಕವಿತೆ ಬಗ್ಗೆ ನಾನು ಬರೆದಿರುವ ಒಂದು ಲಿಮೆರಿಕ್ ಕವಿತೆಯನ್ನ ಮೊದಲಿಗೆ ಹೇಳುತ್ತೇನೆ.

ಮನಸ್ಸಿನ ಭಾವಭಿವ್ಯಕ್ತಿಯ ಕವಿಯ ಕೂಸೆ ಕವಿತೆ

ಕಿರಿದರೋಳ್ ಹಿರಿದು ಅದರ ವಿಶೇಷತೆ 

ಎಲ್ಲವು ಅದರ ವಸ್ತು ವಿಷಯವು

ಪ್ರಾಸ ಲಯ ಗೇಯತೆ ಅದರ ಛ0ದೋಬಂಧವು 

ರಸಾನುಭವವಾದರೆ ಅದು ಸಾರ್ಥಕತೆ

ಇನ್ನು ಕವಿತೆ ಏಕೆ ಬರೆಯಬೇಕು ಅನ್ನೋದ್ರ ಬಗ್ಗೆ ಹೇಳೋದಾದ್ರೆ :

ನಾವು ಕವಿತೆಯನ್ನು ಬರಿ ಪ್ರಶಸ್ತಿಗಾಗಿ ಯೋ,

ಮತ್ತೊಬ್ಬರಿಗಿಂತ ಚನ್ನಾ ಗಿರಬೇಕೆಂದು ಬರೆಯಬಾರದು

*ಮನಸ್ಸಿನಲ್ಲಿ ವಿಷಯವನ್ನು ಮಥಿಸಿ ಬರೆಯಬೇಕು 

*ಮುಕ್ತ ಮನಸ್ಸಿನಿಂದ ಬರೆಯಬೇಕು

*ನಮ್ಮ ಪೂರ್ವ ಕವಿಗಳ ಹಾಗೂ ಸಮಕಾಲಿನ ಕವಿಗಳ ಕವಿತೆಗಳನ್ನು ಓದಬೇಕು.

* ಎಲ್ಲ ಪ್ರಕಾರದ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಬೇಕು

*ಪರಿಸರ ಹಾಗೂ ಸಮಾಜವನ್ನು ಸೂಕ್ಷ್ಮವಾಗಿ ಗ್ರಹಿಸಬೇಕು 

*ವಿಭಿನ್ನವಾಗಿ ಬರೆದು ನಮ್ಮದೇ ಅದ ಸ್ವಂತಿಕೆಯ ಛಾಪು ಮೂಡಿಸಬೇಕು.

*ನಾವು ಕವಿತೆ ಬರೆದ ನಂತರ ನಾವು ಮತ್ತೊಮ್ಮೆ ಓದಿ ತಪ್ಪುಗಳಿದ್ದರೆ ತಿದ್ದಿ ಬರೆಯಬೇಕು

*ಸಮರ್ಪಣಾ ಭಾವದಿಂದ ಬರೆದರೆ ನಮ್ಮ ಮನಸ್ಸಿನಲ್ಲಿ ಸಂತೃಪ್ತ ಭಾವ ಒಡಮೂಡುತ್ತದೆ.

* ಕವಿತೆಗಳು ಮೌಲ್ಯಯುತ ಸಂದೇಶಗಳನ್ನು ತಿಳಿಸಬೇಕು

* ಕವಿತೆ ಓದುಗರ ಮನಸ್ಸಿಗೆ ಪರಮಾನಂದ ನೀಡುವುದರೊಂದಿಗೆ ಮನ ಪರಿವರ್ತತಗೊಂಡು ಸಂತೃಪ್ತ ಜೀವನಕ್ಕೆ ಕಾರಣವಾಗಿ ಸ್ವಾಸ್ತ್ಯ ಸಮಾಜಕ್ಕೆ ಹಾಗೂ ವಿಶ್ವಶಾಂತಿ ನೆಲೆಸಲು ಪ್ರೆರೇಪಿಸುವಂತಿರಬೇಕು.

*ಕವಿತೆಗಳನ್ನು ಭಾವಪೂರ್ಣವಾಗಿ ವಾಚಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು 

*ಕವಿತೆಗಳನ್ನು ಪುಸ್ತಕ ರೂಪದಲ್ಲಿ ತಂದರೆ ಶಾಶ್ವತವಾಗಿ ಉಳಿಯುತ್ತವೆ.

*ನಾನು ಒಬ್ಬ ಕವಯಿತ್ರಿಯಾಗಿ ನನ್ನನ್ನು

ಸೇರಿಸಿಕೊಂಡು ಈ ಎಲ್ಲಾ ವಿಚಾರಗಳನ್ನು ಹೇಳಿದ್ದೇನೆ 

ಪುಸ್ತಕವನ್ನು ಕೊಂಡು ಓದಿ ಕನ್ನಡ ಸಾಹಿತ್ಯ ವನ್ನು ಬೆಳೆಸೋಣ

 ಎಲ್ಲೆಲ್ಲೂ ಎಂದೆಂದಿಗೂ ಕನ್ನಡಿಗರಾಗಿರೋಣ

ಕನ್ನಡದ ಏಳ್ಗೆಗೆ ಸದಾ ಶ್ರಮಿಸೋಣ

ನಿರಂತರ ಕನ್ನಡ ಸೇವೆಯ ಮಾಡೋಣ 

ಕನ್ನಡವ ಚಿರಂತನ ಬೆಳೆಸುತ ಬೆಳಗಿಸುತ್ತಿರೋಣ

ಜೈ ಕರ್ನಾಟಕ ಮಾತೆ

ಉತ್ತಮ ಅವಕಾಶ ಮಾಡಿಕೊಟ್ಟ ಪ್ರದೀಪ್ ಸರ್ ಹಾಗೂ ಸಂಯಮದಿಂದ ನನ್ನ ಮಾತುಗಳನ್ನು ಆಲಿಸದ್ದಕ್ಕೆ ಎಲ್ಲರಿಗೂ ಧನ್ಯವಾದಗಳು 

ಸ್ಥಳ : ರವೀಂದ್ರ ಕಲಾ ಕ್ಷೇತ್ರ

ಬೆಂಗಳೂರು

ದಿನಾಂಕ :21/ಜನವರಿ /2024

ಇಂತಿ ನಿಮ್ಮ ನಂಬುಗೆಯ ಕನ್ನಡತಿ ಕವಯಿತ್ರಿ

ಲೋಕ ರತ್ನ ಭವ್ಯ ಸುಧಾಕರ ಜಗಮನೆ.