ಗಜಲ್ ರಚನೆ ಗೇಯತೆ ಹಾಗೂ ಹೃದಯ ಭಾವದಿಂದ ಬರೆಯಬೇಕು.ಡಾ.ಹೊನ್ಕಲ್.

ಗಜಲ್ ರಚನೆ ಗೇಯತೆ ಹಾಗೂ ಹೃದಯ ಭಾವದಿಂದ ಬರೆಯಬೇಕು.ಡಾ.ಹೊನ್ಕಲ್.

ಗಜಲ್ ರಚನೆ ಗೇಯತೆ ಹಾಗೂ ಹೃದಯ ಭಾವದಿಂದ ಬರೆಯಬೇಕು.ಡಾ.ಹೊನ್ಕಲ್

ಯಾದಗಿರಿ: ಇಂದು ನಗರದ ಕಸಾಪ ಭವನದಲ್ಲಿ ಬೆಳಿಗ್ಗೆ ೧೧ ಕ್ಕೆ ಕಸಾಪ ಯಾದಗಿರಿ ಹಾಗೂ ಸಗರನಾಡು ಸೇವಾ ಪ್ರತಿಷ್ಠಾನ ಸುರುಪುರ ಇವರ ಸಹಯೋಗದಲ್ಲಿ ನಡೆದ ಎ.ಕಮಲಾಕರ ಸುರುಪುರ ಅವರ "ಉತ್ಪಲ" ಗಜಲ್ ಸಂಕಲನ ಬಿಡುಗಡೆ, ಹಾಗೂ ಗಜಲ್ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು ಗಜಲ್ ಕಾವ್ಯ ಗೇಯತೆ ಹಾಗೂ ಹೃದಯವನ್ನು ಬಯಸುತ್ತದೆ.ಹೃದಯಭಾವವಿಲ್ಲದೆ ಕೇವಲ ತಾಂತ್ರಿಕ ಗಜಲ್ ಬರೆಯುವವರು ಬಹಳ ಆಗಿದ್ದಾರೆ.ಅವರು ಹಿರಿಯ ಗಜಲ್ ಕಾರರ ಗಜಲ್ ಅಭ್ಯಸಿಸಿ ಗಜಲ್ ಅನ್ನು ರಚಿಸಬೇಕೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿದ್ದರಾಮ ಹೊನ್ಕಲ್ ಗಜಲ್ ಕಾರರಿಗೆ ಕರೆ ನೀಡಿದರು.

ಗಜಲ್ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಹುಭಾಷಾ ಕವಿ ಮಹಮ್ಮದ ಬದ್ದೂರ ಅವರು “ಛಂದಸ್ಸು ಇಲ್ಲದ ಕಾವ್ಯ ಯಾವುದೇ ಕಾರಣಕ್ಕೂ ಕಾವ್ಯವಾಗುವುದಿಲ್ಲ” ಎಂಬ ಮಾತು ಶ್ರದ್ಧೆಯ ಹಾಗೂ ಚರ್ಚೆಯ ವಿಷಯವಾಗಿದೆ. ಈ ವಾದವು ಶ್ರಾವಣಿಕ ಕಾವ್ಯತತ್ತ್ವವನ್ನು ಪ್ರತಿನಿಧಿಸುತ್ತದೆ, ಛಂದಸ್ಸು (ಮಿತಿಗಳಾ ಗಿತಿಗಳು) ಕಾವ್ಯದ ಪ್ರಮುಖ ಅಂಶವೆಂದು ಪರಿಗಣಿಸಲಾಗುತ್ತದೆ ಎಂದರು 

ಕಲ್ಯಾಣ ಕಹಳೆ ಪತ್ರಿಕೆ ಸಂಪಾದಕರಾದ ಶರಣಗೌಡ ಪಾಟೀಲ ಪಾಳಾ ಮಾತನಾಡಿದ ಅವರು ಕಾರ್ಯಕ್ರಮವು ಪ್ರಕಾಶ ಅಂಗಡಿ ಅವರು ಒಳ್ಳೆ ಸಂಘಟಕರಾಗಿ ಸಾಹಿತಿಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ ಅವರ ಸಾಹಿತ್ಯ ಮೇಲಿನ ಪ್ರೀತಿ ಅಪಾರವಾಗಿದೆ ಎಂದು ಬಣ್ಣಿಸಿದರು 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶರಣಬಸಪ್ಪ ಯಾಳವಾರ,ಅಧ್ಯಕ್ಷರು, ತಾ. ಕ.ಸಾ.ಪ. ಸುರಪುರ, ವೆಂಕಟೇಶ ಕಲಕಂಭ,ಅಧ್ಯಕ್ಷರು, ತಾ. ಕ.ಸಾ.ಪ. ಯಾದಗಿರಿ, ಇದ್ದರು 

 ಗೋಷ್ಠಿಯಲ್ಲಿ ಕುತ್ಸುದ್ದೀನ್ ಅಮ್ಮಾಪುರ, ಮಹಾಂತೇಶ ಗೋನಾಲ, ಕನಕಪ್ಪ ವಾಗಣಗೇರಾ, ಹೆಚ್. ರಾಠೋಡ, ಶರಣಗೌಡ ಪಾಟೀಲ್ ಜೈನಾಪೂರ, ಎ. ಕಮಲಾಕರ ಸುರಪುರ, ಪಾರ್ವತಿ ದೇಸಾಯಿ, ಜ್ಯೋತಿ ಬಿ. ದೇವಣಗಾಂವ, ನೀಲಮ್ಮ ಮಲ್ಲೆ, ಸುವರ್ಣ ರಾಠೋಡ, ವೆಂಕಟೇಶ ಪಾಟೀಲ್ ಇದ್ದರು