ಕಥಾಸಂಕಲನಗಳು ಜನರ ಉತ್ತಮ ಬದುಕಿಗೆ ಪ್ರೇರಣೆ ನೀಡುತ್ತವೆ | ವೀರಣ್ಣ ಗಣಜಲಖೇಡ

ಕಥಾಸಂಕಲನಗಳು ಜನರ ಉತ್ತಮ ಬದುಕಿಗೆ ಪ್ರೇರಣೆ ನೀಡುತ್ತವೆ | ವೀರಣ್ಣ ಗಣಜಲಖೇಡ

ಕಥಾಸಂಕಲನಗಳು ಜನರ ಉತ್ತಮ ಬದುಕಿಗೆ ಪ್ರೇರಣೆ ನೀಡುತ್ತವೆ | ವೀರಣ್ಣ ಗಣಜಲಖೇಡ

ಕಲಬುರಗಿ : ಕಥಾ ಸಂಕಲನಗಳು ಕವನಗಳು ಮತ್ತು ಕಾದಂಬರಿಗಳು ಜನರ ಅತ್ಯುತ್ತಮ ಬದುಕಿಗೆ ಪ್ರೇರಣೆ ನೀಡುತ್ತವೆ ಎಂದು ಕಲ್ಬುರ್ಗಿ ತಾಲೂಕಿನ ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕ ವೀರಣ್ಣ ಗಣಜಲಖೇಡ್ ಅಭಿಪ್ರಾಯಪಟ್ಟರು. 

ನಗರದ ಭೂಮಾಪನ ಕಚೇರಿಯಲ್ಲಿ ಸರಳವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೂಮಾಪಕ ಹಾಗೂ ಉದಯೋನ್ಮುಖ ಕಥೆಗಾರ ಅನಿಲ್ ಗುನ್ನಾಪುರ ಅವರ "ಸರ್ವೆ ನಂಬರ್ - 97" ಎಂಬ ದ್ವಿತೀಯ ಕಥಾ ಸಂಕಲನವನ್ನು ಲೇಖಕರ ಅನುಪಸ್ಥಿತಿಯಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಈ ಕಥಾ ಸಂಕಲನದಲ್ಲಿ ಬರುವ ಲಿಂಗಾಯತ ಖಾನಾವಳಿ, ಸರ್ವೆ ನಂಬರ್ -97, ಕಸ್ತೂರಿ ಕ್ಯಾಂಟೀನ್, ಆತ್ಮಸಾಕ್ಷಿ, ಗೋಲ್ ಗುಂಬಜ್ ಎಕ್ಸ್ಪ್ರೆಸ್, ಹಳದಿ ಬಣ್ಣದ ಹರಳಿನುಂಗುರ ಎನ್ನುವಂತಹ ಕಥೆಗಳು ಬಹಳ ಸೊಗಸಾಗಿ ಮತ್ತು ಓದುಗರ ಮನ ಮುಟ್ಟುವಂತೆ ನಿರೂಪಿಸಲಾಗಿದೆ. ಎಲ್ಲರೂ ಈ ಪುಸ್ತಕವನ್ನು ಖರೀದಿಸಿ ಓದಬೇಕೆಂದು ಸಾಹಿತ್ಯಾಸಕ್ತರಿಗೆ ಗಣಜಲಖೇಡ್ ಕರೆ ನೀಡಿದರು.

ಭೂಮಾಪಕ ನಿಜಲಿಂಗ ಅವರು ಕಥಾ ಸಂಕಲನವನ್ನು ಪರಿಚಯಿಸಿ, ಇದರಲ್ಲಿ ಬಹಳ ವಿಶೇಷವಾಗಿ ಭೂಮಾಪಕರ ಕುರಿತು ಬರೆದಿರುವ ಸರ್ವೇ ನಂಬರ್ 97 ಹಾಗೂ ಲಿಂಗಾಯತ ಖಾನಾವಳಿ ಕಥೆಗಳ ಕುರಿತು ವಿವರವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಿಬ್ಬಂದಿ ವರ್ಗದ ಮೌನೇಶ್ವರಿ ನಾಯಕ, ಶರ್ಪುದ್ದೀನ, ಪಂಡರಿನಾಥ ಪಾಟೀಲ್, ವಿನೋದ್ ಗೋಳಾ, ಅನುರಾಗ,ರಾಜು ರಾಠೋಡ, ಶ್ವೇತಾ, ಶರಣಬಸವ ಮಂಠಾಳೆ, ಸಂತೋಷ , ರೇವಣಸಿದ್ಧ,ಕಾಂತು , ರೇವತಿ , ಅಶ್ವಿನಿ ಮತ್ತು ಶಾಲಿನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಯುವ ಕಥೆಗಾರ ಅನಿಲ್ ಗುನ್ನಾಪುರ ಅವರಿಂದ ಇನ್ನು ಹೆಚ್ಚಿನ ಕಥೆ ಕಾದಂಬರಿ ನಾಟಕ ಹಾಗೂ ವಿಮರ್ಶಾ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಬರಲಿ ಹಾಗೆಯೇ ಕನ್ನಡ ಪುಸ್ತಕ ಓದುಗರ ಸಂಖ್ಯೆ ಇನ್ನಷ್ಟು ಹೆಚ್ಚಲಿ -ವೀರಣ್ಣ ಗಣಜಲಖೇಡ್ 

ಸಹಾಯಕ ನಿರ್ದೇಶಕ, ಭೂಮಾಪನ ಇಲಾಖೆ, ಕಲಬುರಗಿ