ಜಮುನಾ ಗುತ್ತೇದಾರ್ ಗೆ ಕರ್ನಾಟಕ ಕಲಾ ರಂಗದ "ಕನ್ನಡ ಶ್ರೀ " ಪ್ರಶಸ್ತಿಗೆ ಅಭಿನಂದನೆ
ಜಮುನಾ ಗುತ್ತೇದಾರ್ ಗೆ ಕರ್ನಾಟಕ ಕಲಾ ರಂಗದ "ಕನ್ನಡ ಶ್ರೀ " ಪ್ರಶಸ್ತಿಗೆ ಅಭಿನಂದನೆ
ಕಲಬುರಗಿ : ಕರ್ನಾಟಕ ವಿಕಾಸ ರಂಗದ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ನವೆಂಬರ್ 21ರಂದು ವಿಶೇಷ ಸಾಧನೆಗಾಗಿ "ಕನ್ನಡ ಶ್ರೀ" ಪ್ರಶಸ್ತಿ ಸ್ವೀಕರಿಸುತ್ತಿರುವ ಸಮಾಜ ಸೇವಕಿ ಶ್ರೀಮತಿ ಜಮುನಾ ಅಶೋಕ ಗುತ್ತೇದಾರ್ ಅವರಿಗೆ ಬ್ರಹ್ಮಶ್ರೀ ನಾರಾಯಣ ಗುರು ಟ್ರಸ್ಟ್ ಅಭಿನಂದನೆ ಸಲ್ಲಿಸಿದೆ.
ನವೆಂಬರ್ 21 ರಂದು ಹಾರಕೂಡದ ಪೂಜ್ಯ ಡಾ. ಚೆನ್ನವೀರ ಶಿವಾಚಾರ್ಯರು ಕೃಷಿ, ಶಿಕ್ಷಣ ,ಹಾಗೂ ಸಮಾಜಸೇವೆಗಾಗಿ ಜಮುನಾ ಗುತ್ತೇದಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿಕೆಜಿ ಅಸೋಸಿಯೇಷನ್ ಮೂಲಕ ಸಾಮಾಜಿಕ ಸೇವೆ ನಡೆಸುತ್ತಿರುವ ಅವರು ಗ್ರಾಮೀಣ ಪ್ರದೇಶದವರಿಗೂ ಆಂಗ್ಲ ಮಾಧ್ಯಮ ಶಿಕ್ಷಣ ಕೈಗೆಟಬೇಕು ಎಂಬ ನೆಲೆಯಲ್ಲಿ ಸ್ಟೇಷನ್ ಗಾಣಗಾಪುರದಲ್ಲಿ ಅಶೋಕ್ ವಿ ಗುತ್ತೇದಾರ್ ಶಾಂತಿನಿಕೇತನ ಇಂಗ್ಲೀಷ್ ಮಾಧ್ಯಮ ಶಾಲೆ ನಡೆಸುತ್ತಿದ್ದಾರೆ. 2017 ರಿಂದ ಪ್ರಾರಂಭಗೊಂಡ ಈ ಶಾಲೆ ಎಲ್ ಕೆ ಜಿ ಯಿಂದ ಐದನೇ ತರಗತಿ ವರೆಗೆ ಕಳೆದ 8 ವರ್ಷಗಳಿಂದ ನಡೆಯುತ್ತಿದೆ. ಕಾಮಧೇನು ಆರ್ಯ ಈಡಿಗ ಮಹಿಳಾ ಸಂಘದ ಸ್ಥಾಪಕ ಸದಸ್ಯರಾಗಿ ಮಹಿಳೆಯರ ಸಬಲೀಕರಣಕ್ಕಾಗಿ ಅಹರ್ನಿಶಿ ದುಡಿಯುತ್ತಿದ್ದಾರೆ. ಬಹುಮುಖಿ ವ್ಯಕ್ತಿತ್ವದ ಜಮುನಾ ಗುತ್ತೇದಾರ್ ಅವರಿಗೆ ಶರಣಬಸವೇಶ್ವರ ಸಂಸ್ಥಾನದ ಅವ್ವಾಜಿ ಸಂಸ್ಥೆಯಿಂದ ಕೃಷಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ವಿಶೇಷ ಕಾಯಕಕ್ಕಾಗಿ ಈಗಾಗಲೇ "ಕೃಷಿ ಶಿರೋಮಣಿ" ಪ್ರಶಸ್ತಿ, ಶಿಕ್ಷಣ ರಂಗದ ಸೇವೆಗಾಗಿ ಯಾದಗಿರಿ ಜಿಲ್ಲೆಯ "ಶಿಕ್ಷಣ ಶ್ರೀ" ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕವನ, ಲೇಖನಗಳನ್ನು ಬರೆಯುವ ಹವ್ಯಾಸ ರೂಡಿಸಿಕೊಂಡ ಇವರು ಉತ್ತಮ ಗಾಯಕಿ ಕೂಡ ಆಗಿದ್ದಾರೆ.
ಇವರ ಸಾಧನೆಯನ್ನು ಗಮನಿಸಿ ಕನ್ನಡ ಶ್ರೀ ಪ್ರಶಸ್ತಿ ಗೌರವ ಪ್ರದಾನ ಮಾಡಲು ಆಯ್ಕೆ ಮಾಡಿದ ಕರ್ನಾಟಕ ವಿಕಾಸ ರಂಗದ ಜಿಲ್ಲಾ ಅಧ್ಯಕ್ಷರಾದ ಡಾ. ಚಿ.ಸಿ ನಿಂಗಣ್ಣ ಮತ್ತು ಆಯ್ಕೆ ಸಮಿತಿಗೆ ಕಲಬುರಗಿಯ ನಾರಾಯಣ ಗುರು ಟ್ರಸ್ಟ್ ಅಧ್ಯಕ್ಷರಾದ ವೆಂಕಟೇಶ್ ಕಡೇಚೂರ್, ನಾರಾಯಣ ಗುರು ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷರಾದ ಡಾ. ವಿನಯ ಗುತ್ತೇದಾರ್ ಗಾರಂಪಳ್ಳಿ, ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ, ಹಿರಿಯ ಸಾಹಿತಿ ಡಾ. ಹನುಮಂತ ರಾವ್ ದೊಡ್ಡಮನಿ, ಬ್ರಹ್ಮಶ್ರೀ ನಾರಾಯಣ ಗುರು ಸಂಗೀತ ವಿದ್ಯಾಲಯದ ಅಧ್ಯಕ್ಷರಾದ ಬಸಯ್ಯ ಗುತ್ತೇದಾರ್ ತೆಲ್ಲೂರ್ , ಕಲಬುರಗಿ ಜಿಲ್ಲಾ ಬಿಲ್ಲವ ಸಂಘದ ಪದಾಧಿಕಾರಿಗಳಾದ ದಯಾನಂದ ಪೂಜಾರಿ ಮೈಕಾನಾ, ಪ್ರವೀಣ್ ಜತ್ತನ್, ಸಂತೋಷ್ ಪೂಜಾರಿ, ಉದ್ಯಮಿ ರಾಜೇಶ್ ದತ್ತು ಗುತ್ತೇದಾರ್, ಅಂಬಯ್ಯ ಗುತ್ತೇದಾರ್ ಶಾಬಾದಿ, ಲತಾ ಚಂದ್ರಕಾಂತ್ ಗುತ್ತೇದಾರ್ ,ಸವಿತಾ ಸತೀಶ್ ಗುತ್ತೇದಾರ್, ಕಾಮಧೇನು ಆರ್ಯ ಈಡಿಗ ಮಹಿಳಾ ಸಂಘದ ಪದಾಧಿಕಾರಿಗಳಾದ ಶೋಭಾ ಆನಂದ ಗುತ್ತೇದಾರ್, ಜ್ಯೋತಿ ರಾಜು ಗುತ್ತೇದಾರ್ ಸಿಂಧಗಿ, ಕಲಬುರಗಿ ಮಹಾನಗರಪಾಲಿಕೆ ಸದಸ್ಯರಾದ ಯಂಕಮ್ಮ ಜೆ ಗುತ್ತೇದಾರ್, ಕಲಾವಿದೆ ಮೀನಾಕ್ಷಿ ಅಂಬಯ್ಯ ಗುತ್ತೇದಾರ್,ಲತಾ ಶ್ರೀನಿವಾಸ ಆಚಾರ್ಯ, ವನಿತಾ ಚಂದ್ರಕಾಂತ್ ಗುತ್ತೇದಾರ್, ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ನರಸಿಂಹ ಮೆಂಡನ್, ಜಗದೇವ ಗುತ್ತೇದಾರ್ ಕಲ್ ಬೇನೂರ್, ಜಯಶ್ರೀ ಗುತ್ತೇದಾರ್ ಮತ್ತಿತರರು ಶುಭ ಹಾರೈಸಿದ್ದಾರೆ.
