ಕನ್ಯಾಡಿ ಶ್ರೀಗಳಿಗೆ ಬಾಲರಾಜ ಗುತ್ತೇದಾರ್ ಅಭಿನಂದನೆ
ಕನ್ಯಾಡಿ ಶ್ರೀಗಳಿಗೆ ಬಾಲರಾಜ ಗುತ್ತೇದಾರ್ ಅಭಿನಂದನೆ
ಕಲಬುರಗಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಖ್ಯಾತ ಶ್ರೀರಾಮ ಕ್ಷೇತ್ರದ ಪೂಜ್ಯಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ "ಮಹಾಮಂಡಲೇಶ್ವರ"ಸಂತ ಪರಂಪರೆಯ ಶ್ರೇಷ್ಠ ಗೌರವ ನೀಡಿದ್ದಕ್ಕಾಗಿ ಜೆಡಿಎಸ್ ನ ಜಿಲ್ಲಾಧ್ಯಕ್ಷರು ಹಾಗೂ ಈಡಿಗ ಸಮಾಜದ ಮುಖಂಡರಾದ ಬಾಲರಾಜ್ ಗುತ್ತೇದಾರ್ ಅಭಿನಂದನೆ ವ್ಯಕ್ತಪಡಿಸಿದ್ದಾರೆ
ಕನ್ನಡ ನಾಡಿನ ಸ್ವಾಮೀಜಿಯವರು ಉತ್ತರ ಭಾರತದ ನಾಗಸಾಧುಗಳ ಸನ್ಯಾಸಿ ಪರಂಪರೆಯಲ್ಲಿ ಅತ್ಯುನ್ನತ ಹುದ್ದೆಯಾದ ಮಹಾಮಂಡಲೇಶ್ವರ ಪದವಿಯನ್ನು ಅಲಂಕರಿಸಿರುವುದು ಕನ್ನಡ ನಾಡಿಗೆ ಮಹಾಕುಂಭ ಮೇಳದಲ್ಲಿ ನೀಡಿದ ಶ್ರೇಷ್ಠ ಗೌರವವಾಗಿದೆ ಹಾಗೂ ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳಿಗೆ ಅಭಿಮಾನದ ಸಂಗತಿಯಾಗಿದೆ. ಕನ್ಯಾಡಿ ಶ್ರೀಗಳು ಹಿಂದೂ ಸಂಪ್ರದಾಯದ ಸಾಧು ಪರಂಪರೆಯ ತತ್ವಗಳನ್ನು ಪಾಲಿಸಿಕೊಂಡು ಸಮಾಜಮುಖಿಯಾಗಿ ಬೆಳೆದು ಕನ್ಯಾಡಿ ಶ್ರೀ ಕ್ಷೇತ್ರವನ್ನು ಭಾವೈಕ್ಯತೆಯ ಮಠವಾಗಿ ಬೆಳೆಸಿ ಕನ್ನಡ ನಾಡಿನ ಶ್ರೇಷ್ಠ ಪರಂಪರೆಯಾದ ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವ ಧಾರ್ಮಿಕ ಕಾರ್ಯವನ್ನು ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಕನ್ಯಾಡಿ ಶ್ರಿಗಳ ಧಾರ್ಮಿಕ ನಡೆಗೆ ಸಮಾಜವು ಶಕ್ತಿ ನೀಡಲಿ ಇನ್ನಷ್ಟು ಸಮಾಜಮುಖಿ ಚಿಂತನೆಗಳು ನಾಡಿಗೆ ಸಿಗಲಿ ಎಂದು ಬಾಲರಾಜ್ ಗುತ್ತೇದಾರ್ ಹಾರೈಸಿದ್ದಾರೆ.