ಜುಲೈ 10 ರಂದು ಗುರು ಪೂರ್ಣಿಮಾ

ಜುಲೈ 10 ರಂದು ಗುರು ಪೂರ್ಣಿಮಾ

ಜುಲೈ 10 ರಂದು ಗುರು ಪೂರ್ಣಿಮಾ

ಶಹಪುರ : ತಾಲೂಕಿನ ಸಗರ ಗ್ರಾಮದ ವಕ್ಕಲಿಗರ ಹಿರೇಮಠದ ಕರಿಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಪರಮಪೂಜ್ಯ ಮರುಳ ಮಹಾಂತ ಶಿವಾಚಾರ್ಯ ನೇತೃತ್ವದಲ್ಲಿ ಇದೇ ತಿಂಗಳು ಜುಲೈ 10ರಂದು ಬೆಳಗ್ಗೆ ಗುರುಪೂರ್ಣಿಮಾ ಕಾರ್ಯಕ್ರಮ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ ಮಠದ ಭಕ್ತಾದಿಗಳು ತಿಳಿಸಿದ್ದಾರೆ.

ಈ ಪವಿತ್ರ ದಿನದಂದು ಪರಮಪೂಜ್ಯರ ನೇತೃತ್ವದಲ್ಲಿ ಪ್ರಬಲ ಧ್ಯಾನ,ಪೂಜಾ, ಪುನಸ್ಕಾರ ಆಧ್ಯಾತ್ಮಿಕತೆ ನೆರವೇರುವುದು ಆದ್ದರಿಂದ ಶ್ರೀಗಳ ಕೃಪೆಗೆ ಪಾತ್ರರಾಗಿ ಆಂತರಿಕ ಶಾಂತಿಯನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಭಕ್ತಾದಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಈ ಬಾರಿ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಗೆ,ಆಶಾ ಕಾರ್ಯಕರ್ತರಿಗೆ ನಿವೃತ್ತ ಹೊಂದಿದ ನೌಕರರಿಗೆ ವಿಶೇಷ ಸನ್ಮಾನ ಹಮ್ಮಿಕೊಳ್ಳಲಾಗಿದೆ ಜೊತೆಗೆ 2025 ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.