ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದ ಜವರೇಗೌಡ : ಬೈರಮಂಗಲ ರಾಮೇಗೌಡ
ಬೆಂಗಳೂರು: 'ದೇ. ಜವರೇಗೌಡ ಅವರು ಕುವೆಂಪು ಅವರಿಂದ ದೀಕ್ಷೆ ಪಡೆದುಕೊಂಡು ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ಭಾಷೆಯನ್ನು ಕಟ್ಟಿ ಉಳಿಸಿ ಬೆಳೆಸಿ, ಕನ್ನಡಕ್ಕಿರುವ ಆತಂಕಗಳ ಬಗ್ಗೆ ಜಾಗೃತಿ ಮೂಡಿಸಿದ್ದರು' ಎಂದು ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಹೇಳಿದರು.
ಕರ್ನಾಟಕ ವಿಕಾಸ ರಂಗ ಹಾಗೂ ಕನ್ನಡ ಗೆಳೆಯರ ಬಳಗದಮತಿಯಿಂದ ಮಂಗಳವಾರ ಆಯೋಜಿಸಿದ್ದ 'ಕನ್ನಡ ಬಾವುಟ ಹಾರಿಸಿದವರು ಮಾಲಿಕೆ-17' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಜವರೇಗೌಡರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿದ್ದ ಸಂದರ್ಭದಲ್ಲಿ ಎಲ್ಲ ಜ್ಞಾನ ಶಿಸ್ತುಗಳನ್ನು ಕನ್ನಡದಲ್ಲಿ ತರುವ ಉದ್ದೇಶದಿಂದ ವಿಶ್ವಕೋಶಗಳು, ಕರ್ನಾಟಕ ವಿಷಯ ವಿಶ್ವಕೋಶ, ಬೃಹತ್ ನಿಘಂಟು, ವಿಜ್ಞಾನ ಪಠ್ಯಗಳನ್ನು ಕನ್ನಡದಲ್ಲಿ ಪ್ರಕಟಿಸಿದರು. ಕನ್ನಡಿಗರು ವಿಶ್ವದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡಿದ ಕೀರ್ತಿ ಜವರೇಗೌಡರಿಗೆ ಸಲ್ಲುತ್ತದೆ' ಎಂದರು.
ಲೇಖಕ ರಾ.ನಂ. ಚಂದ್ರಶೇಖರ, ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ಭಾಗವಹಿಸಿದ್ದರು.
ರಫಾಯಲ್ ರಾಜ್ˌಕುವೆಂಪು ಪ್ರಕಾಶ್ˌ ಕೆ.ಎಂ.ರೇವಣ್ಣ ˌಕೆ.ಎನ್.ಭಗವಾನ್ˌ ಆನಂದರಾಮ್ˌ ರುದ್ರೇಶ್ ಜೆ.ಎಚ್.,ಸವಿತಾ ರಾಮು ಮುಂತಾದವರು ಉಪಸ್ಥಿತರಿದ್ದರು.