ಸಂವಿಧಾನದ ಅರಿವು ಯುವಕರು ಪಡೆಯಲಿ; ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ
ಸಂವಿಧಾನದ ಅರಿವು ಯುವಕರು ಪಡೆಯಲಿ; ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ
ಮಚಳಂಬ: ಸರ್ವಜನರಿಗೂ ಸಮಾನತೆ,ಸ್ವಾತಂತ್ರ್ಯ, ಸರ್ವರಿಗೂ ಸಮಪಾಲು ಸಮಬಾಳು ನೀಡಿದ್ದು ಬಾಬಾಸಾಹೇಬ ಅಂಬೇಡ್ಕರ್.ಈ ದೇಶದ ಹಲವು ಧರ್ಮ,ಜಾತಿ,ಮತ,ಪಂಗಡಗಳು ಇರುವ ದೇಶದಲ್ಲಿ ಸಂವಿಧಾನ ರಚನೆ ಮಾಡುವುದು ಕಷ್ಟ ಇದ್ದಾಗ ಅದನ್ನ ಅರ್ಥಮಾಡಿಕೊಂಡು ಸರ್ವಜನಾಂಗದ ಸಂವಿಧಾನ ಕೊಟ್ಟಿದ್ದು ಡಾ.ಅಂಬೇಡ್ಕರ್ ಯುವಕರು ಸಂವಿಧಾನ ಅರಿವು ಪಡೆದು ನಡೆಯಬೇಕು ಎಂದು ಕಲಬುರಗಿ ಹಿರಿಯ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಅಭಿಮತ ವ್ಯಕ್ತಪಡಿಸಿದರು
ಯುವಕರ ನಡೆ ಸಂವಿಧಾನ ಕಡೆ ವಿಶೇಷ ಉಪನ್ಯಾಸ ಚೇತನ ಸಿರಿ ಪ್ರಶಸ್ತಿ ಪ್ರದಾನ ಸನ್ಮಾನ ಸಮಾರಂಭವ ನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನ ಸೂರ್ಯ-ಚಂದ್ರ ಇರುವ ತನಕ ಶಾಶ್ವತವಾಗಿ ಉಳಿಯ ಲಿದೆ ಎಂದರು.ಮಹಿಳೆಗೆ,ಶಿಕ್ಷಣ, ಸಮಾನತೆ ಕೊಟ್ಟ ಸಂವಿಧಾನ. ಕಡೆ ಮುಖ ಯುವಕರು ಮಾಡಲಿ ಎಂದರು.
ನಮಗೆ ದೇವರು ಅಂದ್ರೆ ಅಂಬೇಡ್ಕರ್ ಮಾತ್ರ.ಎಪ್ಪತ್ತೈದು ವರ್ಷ ಸಂವಿಧಾನದ ಆಶಯಗಳಿಗೆ ಅಪಾಯವೆಂದು ಅರಿತು ಯುವಕರು ಸಂವಿಧಾನ ಕಡೆ ಮುಖ ಮಾಡಬೇಕು.ಬೌದ್ಧ ಧರ್ಮದ ವೈಜ್ಞಾನಿಕ ಧರ್ಮ ಅಪ್ಪಿದವರು.ಅಂಬೇಡ್ಕರ್ ಒಂದು ಜಾತಿಗೆ ಸೀಮಿತರಲ್ಲ ಅವರೊಬ್ಬ ದೇಶದ ಆಸ್ತಿ ಎಂದು ಸರಕಾರಿ ಸ್ವಾಯತ್ತ ಮಹಾವಿದ್ಯಾಲಯ ಕಲಬುರಗಿ ಪ್ರಾಧ್ಯಾಪಕ ಪ್ರೊ.ಶ್ರೀಮಂತ ಹೋಳ್ಕರ್ ಅವರು ವಿಶೇಷ ಉಪನ್ಯಾಸ ನೀಡಿದರು.
ಆಶೀರ್ವಚನ ನೀಡಿದ ಪೂಜ್ಯ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ ಅಂಬೇಡ್ಕರ್ ಈ ದೇಶದ ಸಂವಿಧಾನ ಬರೆಯಲು ತಮ್ಮ
ದೇವರಗುಡ್ಡದ ಅಮಾತೇಶ್ವರ ಮಠದ ಪೂಜ್ಯ ಬಸವರಾಜ ಸ್ವಾಮೀಜಿ, ಮುಚಳಂಬ ಉರಿಲಿಂಗಪೆದ್ದಿ ಮಠದ ಶಾಖಾಮಠದ ಪೂಜ್ಯ ಚಿದಾನಂದ ಸ್ವಾಮೀಜಿ ನೇತೃತ್ವ ವಹಿಸಿ ಉಪಸ್ಥಿತಿ ವಹಿಸಿದ್ದರು. ಗ್ರಾ.ಪಂ.ಉಪಾಧ್ಯಕ್ಷೆ ಶಾಲಿನ ಅನೀಲ ಸೋನಫುಲೆ, ಪಿ.ಡಿ.ಓ. ಅರ್ಜುನ ಸಿಂಧೆ ವೇದಿಕೆ ಮೇಲಿದ್ದರು. ಗ್ರಾ.ಪಂ.ಅಧ್ಯಕ್ಷೆ ಸೋನಿಯಾ ಸಿದ್ಧಾರೂಢ ಪಾಟೀಲ ಅಧ್ಯಕ್ಷತೆಯನ್ನು ವಹಿಸಿದ್ದರು.
ದಾಸೋಹ ರತ್ನ ಪ್ರಶಸ್ತಿಯನ್ನು ಶ್ರೀ ವೈಜನಾಥ ಫುಲೆ ದಂಪತಿಗಳಿಗೆ ಪ್ರದಾನ ಮಾಡಲಾಯಿತು.
ನಿವೃತ್ತಿ ಹೊಂದಿದ ಹಲವರಿಗೆ ಸನ್ಮಾನಿಸಲಾಯಿತು.
ಚೇತನ ಸಿರಿ ಪ್ರಶಸ್ತಿ ಪುರಸ್ಕೃತರು:
ಶಿವಾನಂದ ಮೇತ್ರೆ,ತಹಸೀಲ್ದಾರರು,ಹುಲಸೂರ
ಸಿದ್ಧವೀರಯ್ಯ ರುದ್ನೂರಮಠ ಬಿ.ಇ.ಓ
ದಿಲೀಪಕುಮಾರ ಉತ್ತಮ,ಸಮಾಜ ಕಲ್ಯಾಣಾಧಿಕಾರಿ
ಡಾ.ಗೌತಮ ಸಿಂಧೆ,ಮಕ್ಕಳ & ಮಹಿಳಾ ಅಭಿವೃದ್ಧಿ ಅಧಿಕಾರಿಗಳು,ಪಂಡಿತ ಎಂ.ಪಿ.ಎಸ್.ಐ,ಹುಲಸೂರ
ಸಂಜೀವಕುಮಾರ ಕಾಂಗೆ ಕ್ಷೇತ್ರ ಸಮನ್ವಯಾಧಿಕಾರಿ ಅವರಿಗೆ ಪ್ರದಾನ ಮಾಡಲಾಯಿತು.
ಅಮ್ರಪಾಲಿ ಮಹಿಳಾ ಭಜನಾ ಸಂಘ ಪ್ರಾರ್ಥಿಸಿ ದರು, ಶಾಖಾಮಠದ ಪೂಜ್ಯ ಮಹಾಲಿಂಗ ದೇವರು ಸ್ವಾಗತಿ ಸಿ ಪ್ರಾಸ್ತಾವಿಕ ನುಡಿ ಆಡಿದರು.ಭೀಮಶಾ ವಾಘಮಾರೆ ಮತ್ತು ನಿತ್ಯಾನಂದ ಮಂಠಾಳಕರ ನಿರೂಪಿಸಿದರು ಗಣೇಶ ಸಾಧು ವಂದಿಸಿದರು ವಿಜಯಲಕ್ಷ್ಮಿ ಚಂದ್ರ ಕಾಂತ ರಾಧು,ಗುರುನಾಥ ಗಡ್ಡೆ,ಬೀದಿ ವ್ಯಾಪಾರಿ ಸಂಘದ ರಾಜಕುಮಾರ,ಯುವ ನಾಯಕ ದತ್ತುಬೆಂಡೆ ಇತರರು ಇದ್ದರು.