ಲಿಂಗವಂತರು ಅಭಿಮಾನ ಶೂನ್ಯರು

ಲಿಂಗವಂತರು ಅಭಿಮಾನ ಶೂನ್ಯರು
ಕಲಬುರ್ಗಿ ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ ಒಂಬತ್ತನೇ ದಿನದಂದು ಮಾತನಾಡಿದ ಬೆಳಗಾವಿಯ ಬಸವ ಬೆಳವಿಯ ಚರಂತಿಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಮಾತನಾಡುತ್ತಾ , ಲಿಂಗಾಯತರಿಗೆ ಶರಣ ಪರಂಪರೆಯ ಅಭಿಮಾನವೇ ಇಲ್ಲ .
ಅವರಲ್ಲಿ ಬಹುಪಾಲು ಜನ ಮನುವಾದಿಗಳಾಗಿದ್ದಾರೆ .ಲಿಂಗಾಯಿತರಿಗೆ ವಸ್ತುನಿಷ್ಠತೆಯ ವಾಸ್ತವಿಕತೆಯ ಕೊರತೆ ಇದೆ .ಲಿಂಗಾಯಿತರು ಇಷ್ಟಲಿಂಗ ನಿಷ್ಠರಾಗಬೇಕು . ಏಕದೇವ ಉಪಾಸಕರಾಗಬೇಕು . ನಂಬಿದ ಹೆಂಡತಿಗೆ ಗಂಡನೊಬ್ಬ ಕಾಣಿರೋ ನಂಬಬಲ್ಲ ಭಕ್ತನಿಗೆ ದೇವನೊಬ್ಬ ಕಾಣಿರೋ ಎಂದು ಶರಣರು ಹೇಳಿದ್ದಾರೆ ಆದರೆ ಇಂದಿನ ಲಿಂಗಾಯತರು ಬಹುದೇವ ಉಪಾಸಕರಾಗಿದ್ದಾರೆ ಎಂದು ತಮ್ಮ ಮನದಳಲು ತೋಡಿಕೊಂಡರು .
ಚನ್ನಬಸವಣ್ಣನವರ ಕರಣ ಹಸಿಗೆ ಬರೀ ಲಿಂಗಾಯತರಿಗೆ ಅಷ್ಟೇ ಸಂಬಂಧಿಸಿದಲ್ಲ ಅದು ಜಗತ್ತಿನ ಎಲ್ಲಾ ಮಾನವರಿಗೆ ಅನ್ವಯಿಸುವಂಥದ್ದು .ಲಿಂಗವಂತ ಧರ್ಮಕ್ಕೆ ಇದುವರೆಗೆ ಇಪ್ಪತ್ತೆರಡು ಸಾವಿರ ಲಿಂಗವಂತ ಧರ್ಮ ಸಿದ್ದಾಂತವಿದೆ .ಲಿಂಗವಂತರು ಶರಣ ದರ್ಶನದ ಪ್ರಕಾರ ನಡೆದುಕೊಳ್ಳಬೇಕು .ಶರಣರು ಅನುಭವ ಪ್ರಧಾನವಾದದ್ದನ್ನು ಒಪ್ಪಿಕೊಂಡರು .770 ಅಮರ ಗಣಗಳು ಅದ್ವಿತೀಯರಾಗಿದ್ದರು .ಅವರಲ್ಲಿ ಪ್ರತಿಯೊಬ್ಬರಿಗೆ ತಮ್ಮದೇ ಆದ ಸ್ವಂತ ಸಿದ್ದಾಂತ ಪ್ರತಿಪಾದಿಸುವಷ್ಟು ಪ್ರಭುತ್ವ ಇತ್ತು ಆದರೂ ಸಹ ಅವರೆಲ್ಲರೂ ಬಸವ ಸಿದ್ದಾಂತ ಒಪ್ಪಿ ಅನುಭವಿಸಿ ಹೊಸ ಧರ್ಮ ಕಟ್ಟಿದರು .
ನವನಾಥರಲ್ಲಿ ಅಲ್ಲಮನೂ ಕೂಡ ನಾಥಪಂಥದಲ್ಲಿದ್ದವನು ಆದರೆ ಆತ ಬಸವ ಮಾರ್ಗಕ್ಕೆ ಬಂದು ಅನುಭವ ಮಂಟಪದ ಅಧ್ಯಕ್ಷನಾದ .ಸಿದ್ದರಾಮ ಯೋಗಿ ಎಲ್ಲವನ್ನು ತೊರೆದು ಬಸವಣ್ಣನವರ ತತ್ವ ಸಿದ್ಧಾಂತ ಒಪ್ಪಿ ಬಸವಮಾರ್ಗಿಯಾದನು .ಕಾಶ್ಮೀರದ ಮೋಳಿಗೆ ಮಾರಯ್ಯ ಅಗರ್ಭ ಶ್ರೀಮಂತ ಎಲ್ಲವನ್ನು ತೊರೆದು ಬಸವಮಾರ್ಗಿಯಾದನು . ಇವರೆಲ್ಲರ ನಡವಳಿಕೆಯಿಂದ ನಮಗೆ ತೋರುತ್ತದೆ ಬಸವಣ್ಣನವರ ವ್ಯಕ್ತಿತ್ವ ಎಂಥ ಅಪೂರ್ವವಾದದ್ದು ಎಂದು . ಬಸವಣ್ಣ ಒಬ್ಬ ಮಹಾನ್ ದರ್ಶನಿಕರಾಗಿದ್ದರು ಎಂದು ನುಡಿದರು .
ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸ್ವತಿ khooba, ಡಾ. ವೀರಣ್ಣ ದಂಡೆ ಡಾ.ಜಯಶ್ರೀ ದಂಡೆ ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ . ಶರಣಗೌಡ ಪಾಟೀಲ್ ಪಾಳ ,ಡಾ . ಕೆ ಎಸ್ ವಾಲಿ , ಡಾ. ಎ. ಎಸ್ ಪಾಟೀಲ್ ,ಬಂಡಪ್ಪ ಕೇಸುರ್ ಅವರು ಹಾಜರಿದ್ದರು .