ಕಲಬುರಗಿಯಲ್ಲಿ "ಬಯಲಲ್ಲಿ ಬಾನಾಡಿ" ಕೃತಿ ಲೋಕಾರ್ಪಣೆ
ಕಲಬುರಗಿಯಲ್ಲಿ "ಬಯಲಲ್ಲಿ ಬಾನಾಡಿ" ಕೃತಿ ಲೋಕಾರ್ಪಣೆ
ಕಲಬುರಗಿ: ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ವೀರಮ್ಮ ಗಂಗಸಿರಿ ಮಹಿಳಾ ಪದವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ "ಬಯಲಲ್ಲಿ ಬಾನಾಡಿ" ಕೃತಿಯ ಲೋಕಾರ್ಪಣೆ ಸಮಾರಂಭವು ಭಾನುವಾರ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಸಿದ್ದಾರಾಮ ಹೊನ್ಕಲ್ ಅವರು "ಹೆಚ್ಚು ಹೆಚ್ಚು ಸೃಜನಶೀಲ ಸಾಹಿತ್ಯ ಹೊರಬರಬೇಕು, ಓದುಗರಿಗೆ ಉತ್ತಮ ಸಾಹಿತ್ಯ ದೊರೆಯಲಿ" ಎಂದು ಹಾರೈಸಿದರು.
ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಪ್ರಕಾಶಕರು ಡಾ. ಬಸವರಾಜ ಕೊನೇಕ ಅವರು "ನಮ್ಮ ಸಂಸ್ಥೆ ಸದಾ ಕೈಗೆಟುಕುವ ದರದಲ್ಲಿ ಪುಸ್ತಕ ಮುದ್ರಿಸಿ ಪ್ರಕಟಿಸುವುದಕ್ಕೆ ಆದ್ಯತೆ ನೀಡುತ್ತದೆ" ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಕೊಂಡಾ ಅವರು ಕೃತಿಯ ಮಹತ್ವವನ್ನು ವಿವರಿಸಿದರು. ಶೈಲಜಾ ಬಾಗೇವಾಡಿ ಅವರು "ಬಯಲಲ್ಲಿ ಬಾನಾಡಿ ಕೃತಿ ಅತ್ಯಂತ ಸುಂದರವಾಗಿ ಹೊರಬಂದಿದ್ದು, ಡಾ. ಪರುತೆ ಅವರ ಈ ಕೃತಿಯಲ್ಲಿ 455 ಹೈಕುಗಳು ಅಳವಡಿಸಲ್ಪಟ್ಟಿವೆ. ಹೈಕು ಪ್ರಕಾರ ಭಾರತಕ್ಕೆ 1919 ರಲ್ಲಿ ಪರಿಚಯವಾಗಿದ್ದು, ಕರ್ನಾಟಕಕ್ಕೆ 1960 ರಲ್ಲಿ ಪರಿಚಿತವಾಯಿತು" ಎಂದು ಹೇಳಿದರು.
ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು. ಸ್ವಾಗತ ಭಾಷಣವನ್ನು ಡಾ. ಪ್ರೇಮಚಂದ ಚವ್ಹಾಣ ಸಲ್ಲಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಬಿ. ಎಚ್. ನಿರಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ ಸುಜಾತಾ ಪಾಟೀಲ ಅವರು ಡಾ ಎಸ್ ರಾಧಾಕೃಷ್ಣನ್ ಕೃತಿ ಕುರಿತು ಮಾತನಾಡಿ, ರಾಧಾಕೃಷ್ಣನ್ ಶಿಕ್ಷಕ ವೃತ್ತಿಯಿಂದ ಅವರು ಉಪರಾಷ್ಟ್ರಪತಿ ಮತ್ತು ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಮಹನೀಯರು ಇವರನ್ನು ಸ್ಮರಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.
ಲೇಖಕ ವಿಜಯಕುಮಾರ ಪರುತೆ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಾಹಿತಿಗಳಾದ ಪ್ರಭಾಕರ ಜೋಶಿ, ಮೈಹಿಪಾಲ ರೆಡ್ಡಿ ಮುನ್ನೂರ, ಡಾ. ವೀರಶೇಟ್ಟಿ ಗಾರಂಪಳ್ಳಿ, ಶರಣಗೌಡ ಪಾಟೀಲ ಪಾಳಾ, ಎಸ್. ಎಲ್. ಪಾಟೀಲ, ಸಿದ್ದರಾಮ ರಾಜಮಾನೆ, ಕಿರಣ ಪಾಟೀಲ, ಬಿ. ಎಸ್. ಪಾಟೀಲ, ಶಿವಾನಂದ ಕಶೇಟ್ಟಿ, ಸಂಗಮನಾಥ ರೇವತ್ತಗಾಂವ, ಅಂಬಾರಾಯ ಕೋಣೆ,ಡಾ ಶಿವಶರಣಪ್ಪ ಧಾಭಾ, ಪ್ರೊ.ಗುರುಬಸಪ್ಪ ಪಾಟೀಲ್ ವೆಂಕಟೇಶ್ ನೀರಡಗಿ ಶಿವಾನಂದ ಸ್ವಾಮಿ ಹಾಗೂ ಅನೇಕರು ಉಪಸ್ಥಿತರಿದ್ದರು.