ಸಮತೋಲನದ ಬಜೆಟ್: ರವಿ ಸಿಂಗೆ ಹರ್ಷ
ಸಮತೋಲನದ ಬಜೆಟ್: ರವಿ ಸಿಂಗೆ ಹರ್ಷ
ಕಲಬುರಗಿ: ಬಡತನ ನಿರ್ಮೂಲನೆ,ಆರೋಗ್ಯ,ಗ್ರಾಮೀಣ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.ತೆರಿಗೆ ಸ್ಕ್ಯಾಬ್ ಬದಲಾವಣೆ ಮಾಡಿ ದರ ಕಡಿಮೆ ಮಾಡಲಾಗಿದೆ.ವಿತ್ತೀಯ ಕೊರತೆಯನ್ನು ಶೇ 4.4 ಕಾಯ್ದುಕೊಂಡು ಸಮತೋಲನದ ಮುಂಗಡಪತ್ರ ಮಂಡಿಸಿದ್ದು ಸಂತಸದ ವಿಷಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕೇಂದ್ರದ ಬಜೆಟ್,ಕೃಷಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿದೆ.ಔಷಧಿಗಳಲ್ಲಿ ಕರ ಇಳಿಸಿದೆ.ಉದ್ಯೋಗ ಸೃಷ್ಟಿಸಿದ್ದು ಇದು ಜನಪರ ಬಜೆಟ ಆಗಿದೆ.ಮಧ್ಯಮ ವರ್ಗದವರಿಗೆ ಕೇಂದ್ರ ಸರಕಾರ ಕಾಳಜಿ ತೋರಿದೆ.ಪ್ರತಿ ಜಿಲ್ಲೆಗೂ ಕ್ಯಾನ್ಸರ ಚಿಕಿತ್ಸಾ ಕೇಂದ್ರ,ಹತ್ತಿ ಉತ್ಪಾದಕತೆಗಾಗಿ 5 ವರ್ಷಗಳ ಮಿಷನ್ ಘೊಷಣೆ ಮಾಡಲಾಗಿದೆ.ಕಿಸಾನ ಕ್ರೆಡಿಟ್ ಕಾರ್ಡ್ ಸಾಲ ಮಿತಿಯನ್ನು 3 ರಿಂ 5 ಲಕ್ಷಕ್ಕೆ ಏರಿಕೆ ಮಾಡಿದೆ. ವೈದ್ಯಕೀಯ ಕ್ಷೇತ್ರದಲ್ಲಿ 10 ಸಾವಿರ ಹೊಸ ವೈದ್ಯಕೀಯ ಸೀಟು, 6 ಸಾವಿರ ಹೊಸ ಐಐಟಿ ಸೀಟು ಒದಗಿಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ ಎಂದರು. ಮುಂದಿನ ದಿನಗಳಲ್ಲಿ ಮೋದಿ ಆಡಳಿತದಲ್ಲಿ ಭಾರತ ಜಗತ್ತಿಗೆ ಶಕ್ತಿಶಾಲಿ ರಾಷ್ಟ್ರವಾಗಲಿದೆ ಎಂದು ಅವರು ಹೇಳಿದರು.