ಶಶೀಲ್ ಜಿ ನಮೋಶಿಯವರ ಮನವಿಗೆ ಸ್ಪಂದಿಸಿದ ಸರ್ಕಾರಬಡ್ತಿ ಪ್ರಕ್ರಿಯೆ ಆರಂಭ

ಶಶೀಲ್ ಜಿ ನಮೋಶಿಯವರ ಮನವಿಗೆ ಸ್ಪಂದಿಸಿದ ಸರ್ಕಾರ ಬಡ್ತಿ ಪ್ರಕ್ರಿಯೆ ಆರಂಭ
ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶಾಲಾ ಶಿಕ್ಷಣ ಇಲಾಖೆಯ ವಿವಿಧ ಘಟಕಗಳಲ್ಲಿನ ಪ್ರೌಢ ಶಾಲಾ ಶಿಕ್ಷಕರುಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಹುದ್ದೆಗೆ ಬಡ್ತಿ ನೀಡುವ ವಿಷಯವನ್ನು ಶಿಕ್ಷಕ ಸಂಘಟನೆಗಳು ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿಯವರಿಗೆ ಮನವಿ ಮಾಡಿದ್ದರು. ನಂತರ ವಿಧಾನ ಪರಿಷತ್ ಸದಸ್ಯರು
ಪ್ರೌಢಶಾಲೆ ಶಿಕ್ಷಕರುಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗಳಿಗೆ ಬಡ್ತಿ ನೀಡುವ ಸಂಬಂಧ ದಿನಾಂಕ 25/02/2025 ರಂದು ಸರ್ಕಾರದ ಗಮನ ಸೆಳೆದು ದಿನಾಂಕ 10/03/2025 ರಂದು ನಡೆಯುವ ಅಧಿವೇಶನದಲ್ಲಿ ಉತ್ತರಿಸಲು ಸರ್ಕಾರಕ್ಕೆ ಕೋರಿದ್ದರು. ವಿಧಾನ ಪರಿಷತ್ ಸದಸ್ಯರ ಮನವಿ ಇಲಾಖೆಗೆ ತಲುಪಿದ ದಿನದಿಂದಲೇ ಎಚ್ಚೆತ್ತುಕೊಂಡ ಇಲಾಖೆ ತರಾತುರಿಯಲ್ಲಿ ಅದೆ ದಿನದಂದು ಸಾಯಂಕಾಲ ಜೇಷ್ಠ ತಾ ಪಟ್ಟಿ ತಯಾರಿಸಲು ಸಭೆ ಕರೆಯಲು ಆದೇಶಿಸಿದೆ. ಈ ಆದೇಶ ಹೊರಡಿಸಲು ಕಾರಣಿ ಕರ್ತರಾದ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಯವರನ್ನು ಶಿಕ್ಷಕರ ಸಂಘಟನೆಗಳು ಕೊಂಡಾಡಿವೆ