ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸೇನೆಯ ಜಿಲ್ಲಾಧ್ಯಕ್ಷ ಪ್ರಶಾಂತಗೌಡ ಮಾಲಿಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ಮನವಿ
ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸೇನೆಯ ಜಿಲ್ಲಾಧ್ಯಕ್ಷ ಪ್ರಶಾಂತಗೌಡ ಮಾಲಿಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ಮನವಿ
ಕಲಬುರಗಿ ಜಿಲ್ಲೆಯಲ್ಲಿ ಸಾವಿರಾರು ರೈತರ ಪಹಣಿಯಲ್ಲಿ ವಕ್ಷ ಬೋರ್ಡ ಹೆಸರು ಉಲ್ಲೇಖವಾಗುತ್ತಿದ್ದು ಇದರಿಂದ ಜಿಲ್ಲೆಯ ರೈತರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಕೂಡಲೆ ಪಕ್ಕದ ರಾಜ್ಯ ಆಂಧ್ರ ಪ್ರದೇಶ ಸರಕಾರದ ಮಾದರಿಯಲ್ಲಿ ವಕ್ಷ ಬೋರ್ಡ ರದ್ದು ಪಡಿಸಬೇಕು. ಜಿಲ್ಲೆಯಲ್ಲಿ ಮುಂಗಾರು ಬೆಳೆಗಳು ಅತೀವೃಷ್ಠಿಯಿಂದ ಹಾಳಾಗಿದ್ದು ಆ ಬೆಳೆಗಳಿಗೆ ಪರಿಹಾರ ನೀಡಬೇಕು. ಎಂದು ಕಲಬುರಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಹಾಗೂ ಜಿಲ್ಲಾಧ್ಯಕ್ಷ ಪ್ರಶಾಂತಗೌಡ ಮಾಲಿಪಾಟೀಲ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಸಚಿವ ದೀನೆಶ ಗುಂಡುರಾವ ಅವರಿಗೆ ಮನವಿ ಸಲ್ಲಿಸಿದ್ದರು.
ತೊಗರಿ ಬೆಳೆಗೆ ನೆಟ್ ರೋಗ ಆವರಿಸುತ್ತಿದ್ದು ಸಂಭAದಪಟ್ಟ ಇಲಾಖೆಯವರು ನಾಶವಾದ ಬೆಳೆ ಪರೀಶಿಲಿಸಿ ಸೂಕ್ತ ಪರಿಹಾರ ನೀಡಬೇಕು. ನೆನೆಗುದಿಗೆ ಬಿದ್ದಿರುವ ಮಲ್ಲಬಾದ ಏತ ನೀರಾವರಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು.
ಬೇಡಿಕೆಗಳಾದ ಪಕ್ಕದ ರಾಜ್ಯ ಆಂಧ್ರ ಪ್ರದೇಶ ಸರಕಾರದ ಮಾದರಿಯಲ್ಲಿ ವಕ್ಷ ಬೋರ್ಡ ರದ್ದು ಪಡಿಸಬೇಕು, ತೊಗರಿ ಬೆಳೆಗೆ ನೆಟ್ ರೋಗ ಅವರಿಸುತ್ತಿದು, ಸಂಬAಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಹಾಳಾದ ತೊಗರಿ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು, ಜಿಲ್ಲೆಯಲ್ಲಿ ಮುಂಗಾರು ಬೆಳೆಗಳು ಆತೀವೃಷ್ಠಿಯಿಂದ ಹಾಳಾಗಿದ್ದು ಆ ಬೆಳೆಗಳಿಗೆ ಪರಿಹಾರ ನೀಡಬೇಕು, ನೆನೆಗುದಿಗೆ ಬಿದ್ದಿರುವ ಮಲ್ಲಬಾದ ಏತ ನೀರಾವರಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕವಿತಾ ಹಿರೇಮಠ, ಪಂಚಯ್ಯಾ, ಶಿವುಕುಮಾರ, ಪ್ರವೀಣ, ಸದಾಶೀವ ಸೇರಿದಂತೆ ಇತರರು ಇದ್ದರು.