ಅಧಿಕಾರದ ಅಮಲು ತಲೆಗೇರಿದ ಪ್ರಿಯಾಂಕ್ ಖರ್ಗೆ ವರ್ತನೆ ಒಪ್ಪುವಂಥದ್ದಲ್ಲ: ಬಿಜೆಪಿ

ಅಧಿಕಾರದ ಅಮಲು ತಲೆಗೇರಿದ ಪ್ರಿಯಾಂಕ್ ಖರ್ಗೆ ವರ್ತನೆ ಒಪ್ಪುವಂಥದ್ದಲ್ಲ: ಬಿಜೆಪಿ

ಅಧಿಕಾರದ ಅಮಲು ತಲೆಗೇರಿದ ಪ್ರಿಯಾಂಕ್ ಖರ್ಗೆ ವರ್ತನೆ ಒಪ್ಪುವಂಥದ್ದಲ್ಲ: ಬಿಜೆಪಿ

ಕಲಬುರಗಿ : ಜಿಲ್ಲಾ ಉಸ್ತುವಾರಿಗಳಾದ ಪ್ರಿಯಾಂಕ್ ಖರ್ಗೆಯವರು ಬೆಂಗಳೂರಿನಲ್ಲಿ ಟೆಕ್ ಸಮಾವೇಶವನ್ನು ಆಯೋಜನೆ ಮಾಡಿರುವುದು, ಎಲ್ಲರಿಗೂ ತಿಳಿದಿರುವ ಸಂಗತಿ. ಈ ಟೆಕ್ ಸಮಾವೇಶದಲ್ಲಿ ತಾವು ಪ್ರತಿನಿಧಿಸುತ್ತಿರುವ, ತಮ್ಮ ಕುಟುಂಬ ಕಳೆದ 50 ವರ್ಷಗಳಿಂದ ಪಾರುಪತ್ಯೆ ನಡೆಸುತ್ತಿರುವ ಕಲ್ಯಾಣ ಕರ್ನಾಟಕ ಮತ್ತು ವಿಶೇಷವಾಗಿ ಕಲಬುರಗಿಗೆ ಈ ಟೆಕ್ ಸಮಾವೇಶದ ಮೂಲಕ ಅಲ್ಲಿಯ ಯುವಕರಿಗೆ ಏನು ಕೊಡುವವರಿದ್ದೀರಿ? ಬರೀ ಅನಪೇಕ್ಷಿತ ಮಾತುಗಳನ್ನು ಆಡುತ್ತಾ, ತಾವು ಐಟಿ-ಬಿಟಿ ಸಚಿವರಾಗಿ ಈ ಭಾಗಕ್ಕೆ ಉದ್ಯೋಗ ಸೃಷ್ಟಿಗಾಗಿ ಯಾವ ರೀತಿ ಕ್ರಮವನ್ನು ವಹಿಸಿದ್ದೀರಿ ಮಿ., ಜೂನಿಯರ್ ಖರ್ಗೆ?

ಸದಾ ವಿವಾದದ ವಿಚಾರವನ್ನು ಹಿಡಿದುಕೊಂಡು ಪ್ರಚಾರಪ್ರಿಯರಾದಂತಹ ತಾವುಗಳು ಈ ಭಾಗದ ಶೈಕ್ಷಣಿಕ ಪರಿಸ್ಥಿತಿ, ಈ ಭಾಗದ ಮಹಿಳೆಯರ ಅಭಿವೃದ್ಧಿಗೆ, ಈ ಭಾಗದ ಮಹಿಳೆಯರ ಸುರಕ್ಷತೆಗೆ ತಾವು ಏನೆಲ್ಲಾ ಕ್ರಮವಹಿಸಿದ್ದೀರಿ, ದಯವಿಟ್ಟು ತಿಳಿಸಿ. ಕಲ್ಯಾಣ ಕರ್ನಾಟಕದಲ್ಲಿ ಶಿಶುಗಳ ಸಾವುಗಳು, ಅಪೌಷ್ಟಿಕತೆಯ ಸಮಸ್ಯೆ, ಕಾನೂನು ಸುವ್ಯವಸ್ಥೆ, ಪ್ರತಿನಿತ್ಯ ನಡೆಯುವ ರೈತರ ಆತ್ಮಹತ್ಯೆಗಳು, ಜತೆಗೆ ಮಹಿಳೆಯರ ಮೇಲೆ ನಡೆಯುವಂತಹ ಅಮಾನುಷ ದೌರ್ಜನ್ಯ, ಇವೆಲ್ಲಕ್ಕೂ ತಾವು ಏನು ಪರಿಹಾರ ಒದಗಿಸಿದ್ದೀರಿ? ಶಿಕ್ಷಣದಲ್ಲಿ ಕಟ್ಟಕಡೆಯ ಸ್ಥಾನದಲ್ಲಿ ಇರುವಂತಹ ಕಲಬುರಗಿಯ ಪ್ರಗತಿಗೆ, ಗ್ರಾಮೀಣ ಅಭಿವೃದ್ಧಿಗೆ ತಮ್ಮ ಕೊಡುಗೆ ಏನು? ಬರೀ ಮಾತನಾಡುವುದನ್ನೇ ಕಾಯಕ ಮಾಡಿಕೊಂಡಿರುವ ತಾವು ಈ ಭಾಗದ ಅಭಿವೃದ್ಧಿಗೆ ಈ ಟೆಕ್ ಸಮಾವೇಶದ ಮೂಲಕ ಏನೇನು ನೀಡುವವರಿದ್ದೀರಿ? ಹಾಗೆಯೇ ತಮ್ಮ 50 ವರ್ಷಗಳ ಸುದೀರ್ಘ ರಾಜಕಾರಣದ ಜೀವನದಲ್ಲಿ ತಮ್ಮ ಮನೆತನ- ತಾವು ಮತ್ತು ತಮ್ಮ ಕುಟುಂಬ- ಈ ಭಾಗದಲ್ಲಿ ಯಾವ ಬಗೆಯ ಉದ್ಯೋಗ ಸೃಷ್ಟಿಸಿದೆ? ಯಾವಾಗ ನೀವು ಇಲ್ಲಿನ 15,000 ಹುದ್ದೆಗಳನ್ನು ತುಂಬುವವರಿದ್ದೀರಿ? ಇಲ್ಲಿನ ತೊಗರಿ ಬೆಳೆಗೆ ವಿಶ್ವಮಾನ್ಯತೆ ಕೊಡಿಸಲು ತಮ್ಮದೇನು ಪ್ರಯತ್ನ ಇದೆ? ಬರೀ ಬೂಟಾಟಿಕೆ ಮಾತನಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ದ್ವೇಷ- ಅಸೂಯೆಗಳಿಂದ ಸಮಾಜದ ಒಳಗೆ ಸುಧಾರಣೆಯನ್ನು ತರಲಾಗುವುದಿಲ್ಲ. ಪೂಜ್ಯ ಬಸವೇಶ್ವರರ ಪಾಸ್ಪರ್ಶದಿಂದ ಪವಿತ್ರವಾಗಿರುವ ಕಲ್ಯಾಣ ಕರ್ನಾಟಕದಲ್ಲಿ ಮತ್ತೊಮ್ಮೆ ಬಸವೇಶ್ವರರೇ ಅವತಾರ ತಾಳಬೇಕೇನೋ? ತಮ್ಮ ಕುಚೋದ್ಯ, ದ್ವೇಷ, ಅಸೂಯೆಯ ಮನಸ್ಥಿತಿಯಿಂದ ಹೊರಗೆ ಬರಬೇಕಾದರೆ ಸಿದ್ಧಪುರುಷರು ಮತ್ತೆ ಹುಟ್ಟಿಬರಬೇಕಾದ ಅವಶ್ಯಕತೆ ಇದೆ. ಅವರು ಮತ್ತೊಮ್ಮೆ ಹುಟ್ಟಿಬಂದ ನಂತರವಾದರೂ ತಮ್ಮಲ್ಲಿ ಒಂದು ಸಮಾಜಮುಖಿ ಹಾಗೂ ಮಾನವತಾವಾದದ ಸದ್ಗುಣಗಳು ಮೈಗೂಡಲಿ ಎಂದು ಹಾರೈಸುತ್ತೇನೆ.

ಅಸೂಯೆ, ದ್ವೇಷದ ನೀತಿಯಿಂದಲೇ ಸದಾ ಪ್ರಚಾರಕ್ಕೆ ಹಾತೊರೆಯುವ ತಾವು, ಮಾನಸಿಕ ತಜ್ಞರ ಸಲಹೆ ಪಡೆದುಕೊಳ್ಳುವುದು ಅಗತ್ಯವಿದೆ. ನಿಮ್ಮ ಹತಾಶ ಮನೋಭಾವ ನಿಮ್ಮ ಮಾತುಗಳಲ್ಲಿ ಕಂಡುಬರುತ್ತಿದೆ. ಸಮಾಜದ ಸಾಮರಸ್ಯವನ್ನು ಹದಗೆಡಿಸುವ ಸನ್ನಿವೇಶವನ್ನು ನಿಮ್ಮ ಮಾತುಗಳ ಮೂಲಕ ತಾವೇ ಮಾಡ್ತಾ ಇದ್ದೀರಿ. ಪೂಜ್ಯ ಅಂಬೇಡ್ಕರರ ಆಶಯದಂತಹ ಸಂವಿಧಾನಬದ್ಧ ಭಾರತ ಇಲ್ಲಿಯ ಶ್ರೇಷ್ಠ ಸಂಗತಿ. ಅಂತಹ ಭಾರತೀಯ ಗುಣಗಳನ್ನು ಮೈಗೂಡಿಸಿಕೊಳ್ಳಿ ಎಂದು ಬಿಜೆಪಿ ಕರ್ನಾಟಕ ರಾಜ್ಯ ವಕ್ತಾರರಾದ ಡಾ. ಸುಧಾ ಆರ್ ಹಲ್ಕೈ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

.