ಎಇಇ ಶ್ರೀಧರ ಭರವಸೆ ಕುಂದುಕೊರತೆ ಆಲಿಕೆ ಸಭೆ

ಎಇಇ ಶ್ರೀಧರ ಭರವಸೆ ಕುಂದುಕೊರತೆ ಆಲಿಕೆ ಸಭೆ
ಕಲಬುರಗಿ : ಅಘೋಷಿತ ಸ್ಲಂ ಘೋಷಿಸಲು ಸಂಬಂಧಿಸಿದ ಎಲ್ಲ ದಾಖಲೆ ಸಂಗ್ರಹಿಸಿದ್ದು, ಶೀಘ್ರದಲ್ಲಿ ಘೋಷಣೆ ಮಾಡಿಸಲಾಗುವುದು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀಧರ ಹೇಳಿದರು.
ನಗರದ ಪತ್ರಿಕಾ ಸಾಂಸ್ಕೃತಿಕ ಭವನದಲ್ಲಿ ಸ್ಲಂ ಜನಾಂದೋಲನದಿಂದ ಏರ್ಪಡಿಸಿದ್ದ ಸಂವಿಧಾನ ಖಾತ್ರಿ ಸಾಮಾಜಿಕ ನ್ಯಾಯಕ್ಕಾಗಿ ಸ್ಲಂ ಜನರ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಎಲ್ಲ ಸ್ಲಂ ಜನರಿಗೆ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಸ್ಲಂ ಜನಾಂದೋಲನದಿಂದ ಏರ್ಪಡಿಸಿದ್ದ ಕುಂದುಕೊರತೆ ಸಭೆಯಲ್ಲಿ ಸ್ಲಂ ಜನರ ಬೇಡಿಕೆಗಳ ಕುರಿತು ಮನವಿ ಪತ್ರವನ್ನು ಕಾಂಗ್ರೆಸ್ ಮುಖಂಡ ಶರಣು ಅಲ್ಲಮಪ್ರಭು ಪಾಟೀಲ್ ಅವರಿಗೆ ಸಲ್ಲಿಸಲಾಯಿತು. ನಂತರ ಪಾಟೀಲ ಮನವಿ ಸ್ವಿಕರಿ ಮಾತನಾಡುತ್ತಾ ಸ್ಲಂ ಜನರಲ್ಲಿ ಶಿಕ್ಷಣ ಕೊರತೆ ಕಾಣುತ್ತಿದೆ. ಅದನ್ನು ತಾಯಂದಿರುವ ನೀಗಿಸಬೇಕು. ಕುಂದುಕೊರತೆಗಳು ನೀಗಲು ಸಂವಿಧಾನದಿಂದ ಮಾತ್ರ ಸಾಧ್ಯ ಎಂದರು.
ಸಂಘಟನಾ ಸಂಚಾಲಕ ಜನಾರ್ಧನ ಹಳ್ಳಿಬೆಂಚಿ ಮಾತನಾಡಿ, ಅಧಿಕಾರಿಗಳು ಸ್ಲಂ ಜನರ ಕುಂದುಕೊರತೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ತಕ್ಷಣ ಸ್ಪಂದಿಸಬೇಕು. ಜನರ ಸಮಸ್ಯೆ ನೇರ ತಿಳಿಸಲು ಕಾರ್ಯಕ್ರಮ ರೂಪಿಸಿದ್ದು, ಸಮಸ್ಯೆ ಅರಿತು ಪರಿಹಾರ ಒದಗಿಸಬೇಕು ಎಂದರು.
ದಲಿತ ಮತ್ತು ಹಿಂದುಳಿದವರ ಮೇಲೆ ಮನು ಸಂಸ್ಕೃತಿ ಪ್ರಯೋಗ ಮಾಡಲು ಹೊರಟಿದ್ದು, ಸಂವಿಧಾನ ಉಳಿಸಿಕೊಳ್ಳಲು ಹೋರಾಡಬೇಕು ಎಂದರು. ರೇಣುಕಾ ಸರಡಗಿ ಪ್ರಾಸ್ತಾವಿಕ ನುಡಿದರು. ಶರಣು ಸ್ವಾಗತಿಸಿದರು.
ಸ್ಲಂ ಜನಾಂದೋಲನದಿಂದ ಏರ್ಪಡಿಸಿದ್ದ ಕುಂದುಕೊರತೆ ಸಭೆಯಲ್ಲಿ ಸ್ಲಂ ಜನರ ಬೇಡಿಕೆಗಳ ಕುರಿತು ಮನವಿ ಪತ್ರವನ್ನು ಶರಣು ಪಾಟೀಲ್ ಅವರಿಗೆ ಸಲ್ಲಿಸಲಾಯಿತು.