ಬೌದ್ಧ ಭಿಕ್ಕುಗಳ ಕಾಲ್ನಡಿಗೆ ಮೂಲಕ ಮೆರವಣಿಗೆ

ಬೌದ್ಧ ಭಿಕ್ಕುಗಳ ಕಾಲ್ನಡಿಗೆ ಮೂಲಕ ಮೆರವಣಿಗೆ
ಕಲಬುರಗಿ : ಜಿಲ್ಲೆಯ ಐತಿಹಾಸಿಕ ಸನ್ನತಿಯಲ್ಲಿ ನಡೆಯುವ ಸದ್ಧಮ್ಮ ಸಜ್ಜಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ 28 ದೇಶದ ಬೌದ್ಧ ಭಿಕ್ಕುಗಳು ಹಾಗೂ ಭಿಕ್ಕುಣಿಯರು ಕಲಬುರಗಿ ನಗರದ ಸಿಐಬಿ ಕಾಲೊನಿಯಿಂದ ಬೌದ್ಧ ಭಿಕ್ಕುಗಳ ಕಾಲ್ನಡಿಗೆ ಮೂಲಕ ಮೆರವಣಿಗೆ ನಡೆಯಿತು, ಮೆರವಣಿಗೆಯು ಶಕ್ತಿನಗರ, ಜಿಡಿಎ ಬಡಾವಣೆ, ನ್ಯೂ ಘಾಟಗೆ ಲೇಔಟ್, ಸಿದ್ಧಾರ್ಥ ನಗರ ಮೂಲಕ ಡಾ.ಬಾಬಾಸಾಹೇಬ ಅಂಬೇಡ್ಕರ ವೃತ್ತ, ಹೀರಾಪುರ ಕ್ರಾಸ್‌ನಲ್ಲಿ ತ್ರೀಸರಣ ಪಂಚಶೀಲ ಪಟಿಸಿ ಚಾರಿಕಾ ಕಾರ್ಯಕ್ರಮವು ಮುಕ್ತಾಯಗೊಂಡಿತು. ಚಾರಿಕಾ ನಡೆದ ಮಾರ್ಗದುದ್ದಕ್ಕೂ ಬೌದ್ಧ ಉಪಾಸಕ ಉಪಾಸಿಕರೆಲ್ಲ ಬಿಳಿ ವಸ್ತ್ರ ಧರಿಸಿ, ದಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಸೂರ್ಯಕಾಂತ ನಿಂಬಾಳ್ಕರ, ರಮೇಶ ಪಟ್ಟೇದಾರ, ಸುರೇಶ ಕಾನೇಕರ್, ಪ್ರಕಾಶ ಔರಾದಕರ್, ಜೈ ಭಾರತ ಕಾಂಬ್ಳೆ, ಪ್ರಕಾಶ ಭಾಲೆ, ಲಕ್ಮಿಕಾಂತ ಹುಬ್ಬಳಿ, ಡಾ.ಕೆ.ಎಸ್.ಬಂಧು, ಶಶಿಕಾಂತ ಹೋಳ್ಕರ, ಅನಿಲ ಟೆಂಗಳಿ, ಸಂತೋಷ ಮೇಲ್ಮನಿ, ಅಲ್ಲಮಪ್ರಭು ನಿಂಬರಗಾ, ವಿಷ್ಣು ಹುಡಗಿಕರ, ಶಿವಕುಮಾರ ನಂದಿ, ರುಕಮೇಶ ಭಂಡಾರಿ ಹಾಗೂ ಅನೇಕ ಉಪಾಸಕರು ಪಾಲ್ಗೊಂಡಿದ್ದರು.