ಕನ್ನಡ ನಾಡು ಲೇಖಕರ: ಆರು ಕೃತಿಗಳ ಲೋಕಾರ್ಪಣೆ, ಸಾಹಿತಿಗಳಿಗೆ“ಕನ್ನಡ ನಾಡು ಸಾಹಿತ್ಯ ಶ್ರೀ” ಪ್ರಶಸ್ತಿ

ಕನ್ನಡ ನಾಡು ಲೇಖಕರ: ಆರು ಕೃತಿಗಳ ಲೋಕಾರ್ಪಣೆ, ಸಾಹಿತಿಗಳಿಗೆ“ಕನ್ನಡ ನಾಡು ಸಾಹಿತ್ಯ ಶ್ರೀ” ಪ್ರಶಸ್ತಿ

ಕನ್ನಡ ನಾಡು ಲೇಖಕರ: ಆರು ಕೃತಿಗಳ ಲೋಕಾರ್ಪಣೆ, ಸಾಹಿತಿಗಳಿಗೆ“ಕನ್ನಡ ನಾಡು ಸಾಹಿತ್ಯ ಶ್ರೀ” ಪ್ರಶಸ್ತಿ

ಕಲಬುರಗಿ, ಫೆ. 22: ನಗರದ ವೀರಮ್ಮ ಗಂಗ ಶ್ರೀ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ವತಿಯಿಂದ 2025ನೇ ಸಾಲಿನ ಆರು ಕೃತಿಗಳ ಲೋಕಾರ್ಪಣೆ ಹಾಗೂ 2024ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ವಿಜೃಂಭಣೆಯಿಂದ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚನ್ನಪ್ಪ ಕಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ರಮೇಶ್ ಲಂಡನ್‌ಕರ್, ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ದಾಕ್ಷಾಯಿಣಿ ಅವ್ವ ಅವರು, ಸಂಘದ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣಿ, ಸ್ವಾಮಿರಾವ ಕುಲಕರ್ಣಿ ಹಾಗೂ ವಿಜಿ ಕಾಲೇಜಿನ ಪ್ರಾಂಶುಪಾಲರಾದ ಡಾ ರಾಜೇಂದ್ರ ಕೊಂಡಾ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಚನ್ನಪ್ಪ ಕಟ್ಟಿ, “ಏಷ್ಯಾ ಖಂಡದಲ್ಲೇ ಪ್ರಥಮಸಂಘ ಮೊದಲ ಬಾರಿಗೆ ಪುಸ್ತಕ, ಸಾಹಿತ್ಯ, ಸೃಜನ, ಸ್ಪಂದನ ಮತ್ತು ಪ್ರಕಾಶನ ಆಯಾಮಗಳನ್ನು ಒಳಗೊಂಡ ಸಹಕಾರ ಸಂಘ ಕರ್ನಾಟಕದಲ್ಲಿ ಸ್ಥಾಪನೆಯಾಗಿರುವದು ಹೆಮ್ಮೆಯ ಸಂಗತಿ. . ಓದುಗರಿಂದಲೇ ಸಾಹಿತ್ಯಕ್ಕೆ ಜೀವ ಸಿಗುತ್ತದೆ. ಆದರೆ ಮೊಬೈಲ್ ಬಳಕೆಯಿಂದ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ,” ಎಂದು ಅಭಿಪ್ರಾಯಪಟ್ಟರು.

2025ರ ಆರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿಮರ್ಶೆ, ಜಾನಪದ, ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟದ ಕೊಡುಗೆ, ಜಾತ್ರೆಗಳಲ್ಲಿ ಸಮಾನತೆಯ ತತ್ವ, ಜೀವನಚರಿತ್ರೆ ಸೇರಿದಂತೆ ವಿಭಿನ್ನ ಸಾಹಿತ್ಯ ಪ್ರಕಾರಗಳ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕೃತಿಗಳ ವೈಶಿಷ್ಟ್ಯತೆ ಕುರಿತು ಗಣ್ಯರು ವಿವರಿಸಿದರು.

200ಕ್ಕೂ ಹೆಚ್ಚು ಕೃತಿಗಳನ್ನು ಮುದ್ರಿಸಿರುವ ಲಿಂ. ಪೂಜೆ ಶರಣಬಸವಪ್ಪ ಅಪ್ಪ ಅವರ ಕಾರ್ಯವನ್ನು ಸ್ಮರಿಸಿದ ಡಾ. ದಾಕ್ಷಾಯಿಣಿ ಅವ್ವ, ಅವರು “ಪುಸ್ತಕಗಳು ಕಾಲಘಟ್ಟವನ್ನು ಹಿಡಿದ ಕನ್ನಡಿಯಂತೆ. ಅವುಗಳು ಮುಂದಿನ ಪೀಳಿಗೆಗೆ ಶಾಸನವಾಗಿ ಉಳಿಯುತ್ತವೆ. ಪುಸ್ತಕ ಓದುವರಿಂದ ಜ್ಞಾನ ಹೆಚ್ಚಿಸುವಲ್ಲಿ ಹಾಗೂ ಮನಸ್ಸು ಪ್ರಪ್ಪುಲವಾಗುತ್ತದೆ. ಎಂದು ಹೇಳಿದರು.

ಇದೇ ಸಂದರ್ಭದಲ್ಲಿ 2024ನೇ ಸಾಲಿನ “ಕನ್ನಡ ನಾಡು ಜೀವಮಾನ ಸಾಹಿತ್ಯ ಶ್ರೀ” ಪ್ರಶಸ್ತಿಯನ್ನು ಡಾ. ಎಸ್.ಎಂ. ಹಿರೇಮಠ್, ಡಾ. ಶ್ರೀದೇವಿ ರಾಠೋಡ್, ಪ್ರಭಾಕರ್ ಜೋಶಿ, ಶರಣಬಸಪ್ಪ ಕೋಲ್ಕಾರ್, ಹಳೆಮನೆ ರಾಜಶೇಖರ್, ಡಾ. ಎಚ್.ಟಿ ಪೋತೆ ಹಾಗೂ ಕಪಿಲ ಪಿ. ಹುಮನಾಬಾದ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬಸವರಾಜ ಕೊನೇಕ, ಶರಣ ಸಂಸ್ಥಾನದ ಡಾ . ಅಲ್ಲಮಪ್ರಭು ದೇಶಮುಖ, ಮಲ್ಲಿಕಾರ್ಜುನ ವಡ್ಡನಕೇರಿ, ಸಿ.ಎಸ್. ಮಾಲಿ ಪಾಟೀಲ, ಕಿರಣ ಪಾಟೀಲ, ಶರಣಗೌಡ ಪಾಟೀಲ ಪಾಳಾ, ಚಿ.ಸಿ. ನಿಂಗಣ್ಣ, ಸೂರ್ಯಕಾಂತ್ ಸುಜಾತ, ಬಿ.ಎಚ್. ನಿರಗುಡಿ, ಸಿದ್ದಪ್ಪಾ ಹೊಟ್ಟಿ, ಸಂಗಣ್ಣ ಆನೇಗುಂದಿ ಎಸ್.ಕೆ.ಬಿರಾದಾರ ಶಾಂತಾ ಸಿ, ಡಾ ಮಂಗಳಾ ಡಾ ಇಂದುಮತಿ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು.

ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ಸಮಾರಂಭ ಯಶಸ್ವಿಯಾಗಿ ನೆರವೇರಿತು.