ಕುಲಪತಿ ಡಾ. ವಿಜಯಾ ಬಿ ಕೋರಿಶೆಟ್ಟಿ ಅವರಿಂದ ಪುಸ್ತಕ ಲೋಕಾರ್ಪಣೆ

ಕುಲಪತಿ ಡಾ. ವಿಜಯಾ ಬಿ ಕೋರಿಶೆಟ್ಟಿ  ಅವರಿಂದ ಪುಸ್ತಕ ಲೋಕಾರ್ಪಣೆ

ಕುಲಪತಿ ಡಾ. ವಿಜಯಾ ಬಿ ಕೋರಿಶೆಟ್ಟಿ ಅವರಿಂದ ಪುಸ್ತಕ ಲೋಕಾರ್ಪಣೆ

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ವತಿಯಿಂದ ದಿನಾಂಕ 26/11/2025 ರಂದು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ವಿಜಯಾ ಬಿ ಕೋರಿಶೆಟ್ಟಿ ಅವರು ಬಿಎ, ಬಿಕಾಂ ಹಾಗೂ ಬಿ ಎಸ್ ಸಿ ಮೂರು ಹಾಗೂ ನಾಲ್ಕೈನೇ ಸೆಮಿಸ್ಟರ್ ಇಂಗ್ಲಿಷ್ ಭಾಷೆಯ ಪಠ್ಯ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ ಈ ಪುಸ್ತಕಗಳು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಅಧ್ಯಯನಕ್ಕೆ ತುಂಬಾ ಅನುಕೂಲಕರವಾಗಿದ್ದು ಅವುಗಳ ಸದ್ಬಳಕೆ ಮಾಡಿಕೊಳ್ಳಲು ಕರೆ ನೀಡಿದರು.ಇದೆ ಸಂದರ್ಭದಲ್ಲಿ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಬಿ.ಎಲ್.ಲಕ್ಕಣನವರ, ಪ್ರದಾನ ಸಂಪಾದಕರಾದ ಡಾ. ದೀಪಕ್ ಶಿಂದೆ,ಸಂಪಾದಕರಾದ ಸಂಯೋಜಕರು ಇಂಗ್ಲೀಷ್ ವಿಭಾಗ, ಅಕ್ಕಮಹಾದೇವಿ ಡಾ.ಬಿ ಎಂ.ಬಡಿಗೇರ,ಸಹ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಾಗಲಕೋಟೆ, ಬಿ. ಎಸ್. ಸಿ SOLSTICE ಪುಸ್ತಕದ ಸಂಪಾದಕರಾದ ಪ್ರೊ. ನಿತೀಶ್ ಭೂಶೆಟ್ಟಿ, ಸಹ ಪ್ರಾಧ್ಯಾಪಕರು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಲಬುರ್ಗಿ, ಬಿ.ಕಾಂ CADENCE ಪುಸ್ತಕದ ಸಂಪಾದಕರಾದ ಪ್ರೊ. ಎಸ್ ಸಿ ಜಕಾತಿ, ಪ್ರಾಂಶುಪಾಲರು, ಸಿಟಿಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜು ಚಿಕ್ಕೋಡಿ, ಸಂಪಾದಕ ಸದಸ್ಯರಾದ ಡಾ. ಪಿ. ಎ ಘಂಟಿ, ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬೆಳಗಾವಿ ಹಾಗೂ ಪ್ರಕಾಶಕರಾದ ಡಾ ಬಸವರಾಜ ಕೊನೇಕ ಅವರು ಉಪಸ್ಥಿತರಿದ್ದರು