ವಾಡಿ ಬಿಜೆಪಿ ಕಛೇರಿಯಲ್ಲಿ ಸವಿತಾ ಮಹರ್ಷಿ ಜಯಂತಿ
ವಾಡಿ ಬಿಜೆಪಿ ಕಛೇರಿಯಲ್ಲಿ ಸವಿತಾ ಮಹರ್ಷಿ ಜಯಂತಿ
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಸವಿತಾ ಮಹರ್ಷಿ ಅವರ ಜಯಂತಿ ಆಚರಿಸಲಾಯಿತು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ ಸವಿತಾ ಮಹರ್ಷಿಗಳು ಸಮಾಜಮುಖಿಯಾಗಿ ಬೆಳೆದು ದಾರಿದೀಪವಾಗಿದ್ದಾರೆ. ಇಂತಹ ಮಹಾತ್ಮರ ಜಯಂತಿಗಳನ್ನು ಆಚರಿಸುವ ಮೂಲಕ ಅವರ ಆದರ್ಶಗಳ ಹಾದಿಯಲ್ಲಿ ನಾವು ನಡೆಯಬೇಕಾಗಿದೆ ಎಂದರು.
ಧರ್ಮಜ್ಞಾನ ಹೊಂದಿದ್ದ ಸವಿತಾ ಮಹರ್ಷಿ, ಹಿಂದೂ ಧರ್ಮದ ಚತುರ್ವೇದದಲ್ಲಿ ಒಂದಾದ ಸಾಮವೇದವನ್ನು ಬರೆದವರು,ರಥಸಪ್ತಮಿ ದಿನದಂದು ಸೂರ್ಯನ ಆರಾಧನೆ ಜೊತೆಗೇ ಸವಿತಾ ಮಹರ್ಷಿಯ ಜಯಂತಿ ಆಚರಿಸುವುದರೊಂದಿಗೆ ಇಡೀ ಜಗತ್ತಿಗೆ ಒಳಿತನ್ನು ಬಯಸುವುದು ಇದರ ಹಿಂದಿನ ಉದ್ದೇಶವಾಗಿದೆ. ಸವಿತಾ ಸಮಾಜವೆಂದರೆ ಆದಿ ಕಾಲದಿಂದಲೂ ಯಾವುದೇ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನವಾಗಿ ಸೇವೆ ಸಲ್ಲಿಸುತ್ತ ಬಂದಿರುವ ಸಮುದಾಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಸಂಜಯ ಪವಾರ,ಬಸವರಾಜ ಕಲ್ಲಶೆಟ್ಟಿ,ಸವಿತಾ ಸಮಾಜದ ಅಧ್ಯಕ್ಷ ನಾಗರಾಜ ಚೌಣಿಕರ,
ಮಹಾಂತೇಶ್ ಚೌಣಿಕರ,ಅಂಬ್ರೆಷ ಕಡದರಾಲ, ಆಂಜನೇಯ,ದೇವರಾಜ,ಕಲ್ಲಪ್ಪ ಅರಕೇರಿ,ಬಾಬು ಅರಕೇರಿ, ಬಸವರಾಜ ಪಗಡಿಕರ,ರಾಜು ಶಿವಪುರ,ನಾಗು ಆನಪುರ ಸೇರಿದಂತೆ ಇತರರು ಇದ್ದರು.
