ಹಾರಕೂಡ ಶ್ರೀಮಠದ ರಾಜ್ಯಮಟ್ಟದ ಗೌರವ ಪ್ರಶಸ್ತಿಗೆ : ಬಿ. ಎಸ್. ಮಾಲಿ ಪಾಟೀಲ್ ಆಯ್ಕೆ

ಹಾರಕೂಡ ಶ್ರೀಮಠದ ರಾಜ್ಯಮಟ್ಟದ ಗೌರವ ಪ್ರಶಸ್ತಿಗೆ :  ಬಿ. ಎಸ್. ಮಾಲಿ ಪಾಟೀಲ್ ಆಯ್ಕೆ

ಹಾರಕೂಡ ಶ್ರೀಮಠದ ರಾಜ್ಯಮಟ್ಟದ ಗೌರವ ಪ್ರಶಸ್ತಿಗೆ : ಬಿ. ಎಸ್. ಮಾಲಿ ಪಾಟೀಲ್ ಆಯ್ಕೆ

ಕಲಬುರಗಿ : ಪ್ರೊ. ಸೂಗಯ್ಯ ಹಿರೇಮಠ ಸಾಹಿತ್ಯ ಹಾಗೂ ಸಾಂಸ್ಕೃತಿಕ ಟ್ರಸ್ಟ್ ಕಲಬುರಗಿ ಇವರು ಪ್ರೊ ಸೂಗಯ್ಯ ಹಿರೇಮಠ ಇವರ ಸ್ಮರಣಾರ್ಥ ಕೊಡಲ್ಪಡುವ 2024 ನೇ ಸಾಲಿನ ರಾಜ್ಯ ಮಟ್ಟದ ಗೌರವ ಪ್ರಶಸ್ತಿಗೆ ಕಲಬುರಗಿಯ ಮಹಾತ್ಮ ಜ್ಯೋತಿಬಾಪುಲೆ ಶಿಕ್ಷಣ ಸಂಸ್ಥೆಯ ಮಲ್ಲಿಕಾರ್ಜುನ ಖರ್ಗೆ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಬಸವರಾಜ ಎಸ್ ಮಾಲಿ ಪಾಟೀಲ್ ಅವರು ಆಯ್ಕೆಯಾಗಿದ್ದಾರೆ. 

ಪಾಟೀಲರು ಕರ್ನಾಟಕ ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಒಕ್ಕೂಟದ ಕಾರ್ಯಧ್ಯಕ್ಷರಾಗಿ, ಅನುದಾನಿತ ನೌಕರರ ಸಮಸ್ಯೆಗಳ ನಿವಾರಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಶಿಕ್ಷಣ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಸದಾ ತೊಡಗಿಸಿಕೊಂಡಿರುವ ಇವರ ಶೈಕ್ಷಣಿಕ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜ. 24 ರಂದು ಬೆಳಿಗ್ಗೆ 11 ಗಂಟೆಗೆ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಿರೇಮಠ ಸಂಸ್ಥಾನ ಹಾರಕೂಡ ಮಠದಲ್ಲಿ ನಡೆಯಲಿದೆ. ಬೀದರ್ ಜಿಲ್ಲೆ ಕರ್ನಾಟಕ ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಓಂಕಾಂತ ಸೂರ್ಯವಂಶಿ, ರಮೇಶ್ ಪಾಟೀಲ್, ಗುಣವಂತ ಮಾಲಶೆಟ್ಟಿ, ಆರ್ ಪಿ ಮಠ,ಅಶೋಕ್ ಕಾಸಾರೆ, ರಾಮಚಂದ್ರ ಗೋಖಲೆ ಸೂರ್ಯಕಾಂತ್ ಮೇಟಿ, ಬಾಲಾಜಿ ವಡೇಕರ್, ಭಜರಂಗ ಲೋಹಾರ್, ಸಂಜಯ್ ಗಾದಿಗೆ, ಪ್ರಭು ಶೆಟ್ಟಿ ಬುಳ್ಳಾ,ಶಿವರಾಜ್ ಪಾಟೀಲ್, ಖಾಜಾ ಪಟೇಲ್, ಅಲ್ -ಅಮೀನ್, ಪ್ರಸಾದ್,ಶಿವಕುಮಾರ್ ಖೇಡ್, ಶಿವಶಂಕರ್ ಮನ್ನಳ್ಳಿ, ಸ್ನೇಹಿತರ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ.