ಗಂಗಾನಗರದಲ್ಲಿ ಆ.12ರಿಂದ ಗುಡ್ಡಾಪೂರ ದಾನಮ್ಮ ದೇವಿಯ ಪುರಾಣ ಪ್ರಾರಂಭ

ಗಂಗಾನಗರದಲ್ಲಿ  ಆ.12ರಿಂದ ಗುಡ್ಡಾಪೂರ ದಾನಮ್ಮ ದೇವಿಯ ಪುರಾಣ ಪ್ರಾರಂಭ

ಗಂಗಾನಗರದಲ್ಲಿ ಆ.12ರಿಂದ ಗುಡ್ಡಾಪೂರ ದಾನಮ್ಮ ದೇವಿಯ ಪುರಾಣ ಪ್ರಾರಂಭ         

ಕಲಬುರಗಿ - ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಸತ್ಸಂಗ ಸೇವಾ ಸಮಿತಿ ವತಿಯಿಂದ ದಿನಾಂಕ 12-08-2024 ರಂದು ಸೋಮವಾರ ಸಾಯಂಕಾಲ 7-00 ಘಂಟೆಗೆ ನಗರದ ಗಂಗಾನಗರದ ಶ್ರೀ ಹನುಮಾನ್ ದೇವಸ್ಥಾನದ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದಂಗವಾಗಿ ಗುಡ್ಡಾಪುರ ದಾನಮ್ಮ ದೇವಿಯ ಪುರಾಣ ಉದ್ಘಾಟನೆಗೊಳ್ಳಲಿದೆ ಎಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಸತ್ಸಂಗ ಸೇವಾ ಸಮಿತಿಯ ಅಧ್ಯಕ್ಷರಾದ ಅನಿಲ್ ಎನ್ . ಕೂಡಿ ಪ್ರಧಾನ ಕಾರ್ಯದರ್ಶಿ ಅಶೋಕ್ ಎಸ್ ಬಿದನೂರ್ ಅವರು ಜಂಟಿಯಾಗಿ ತಿಳಿಸಿದ್ದಾರೆ   

ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿಯವರು ಕಾರ್ಯಕ್ರಮ ಉದ್ಘಾಟಿ ಸಲಿದ್ದು , ಶ್ರೀ ವರಲಿಂಗೇಶ್ವರ ಮಹಾಸ್ವಾಮಿಗಳು ಗೊರಗುಂಡಗಿ ಹಾಗೂ ರೇವಣಯ್ಯ ಮಹಾಸ್ವಾಮಿಗಳು ಸುಂಟನೂರು ಸಾನಿಧ್ಯ ವಹಿಸಲಿದ್ದು ಅಧ್ಯಕ್ಷತೆಯನ್ನು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಅನುಪಮಾ ಆರ್. ಕಮಕನೂರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ, ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಜೈಪ್ರಕಾಶ್ ಕಮಕನೂರ್, ಜಿಲ್ಲಾ ಕಾಂಗ್ರೆಸ್ ಪಕ್ಷದ ಯುವ ಘಟಕದ ಅಧ್ಯಕ್ಷರಾದ ಶ್ರೀ ಶಿವಾನಂದ ಹೊನಗುಂಟಿ, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಭೀಮಾಶಂಕರ್ ಫಿರೋಜಬಾದ್, ಪಂಚಪೀಠದ ವಾರ್ತಾಧಿಕಾರಿಗಳಾದ ಶ್ರೀ ಸಿದ್ದರಾಮಪ್ಪ ಆಲ್ಗೂಡಕರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ, ದಿನಾಂಕ 12-08-2024ರಿಂದ ಗುಡ್ಡಾಪುರ ದಾನಮ್ಮ ದೇವಿಯ ಪುರಾಣ ಪ್ರಾರಂಭವಾಗಲಿದ್ದು ದಿನಾಂಕ 03-09-2024ರ ವರೆಗೆ 21 ದಿನಗಳಕಾಲ ರಾತ್ರಿ 8-00 ಗಂಟೆಯಿಂದ 10 ಗಂಟೆಯವರೆಗೆ ನಡೆಯಲಿದ್ದು, ವೈದ್ಯ ಶ್ರೀ ಷ, ಬ್ರ, ಸದ್ಯೋಜಾತ ರೇಣುಕ ಶಿವಾಚಾರ್ಯರು ಮುದ್ದಡಗಿ ಅವರು ಪುರಾಣ ನಡೆಸಿಕೊಡಲಿದ್ದು , ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಬಾಬುರಾವ್ ಕೋಬಾಳ್ ಅವರು ಸಂಗೀತ ಸೇವೆ ಹಾಗೂ ಆಕಾಶವಾಣಿ ಕಲಾವಿದ ಮಹಾಂತೇಶ್ ಹರವಾಳ್ ತಬಲಾ ಸಾತ್ ನೀಡಲಿದ್ದಾರೆ ಆದ್ದರಿಂದ ಬಡಾವಣೆಯ ನಾಗರಿಕರು ಗಣ್ಯರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದ್ದಾರೆ