ಮಹಾಪುರುಷ ಸಿದ್ದರಾಮೇಶ್ವರರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು : ಆನಂದ ಟೈಗರ್

ಮಹಾಪುರುಷ ಸಿದ್ದರಾಮೇಶ್ವರರ  ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು : ಆನಂದ ಟೈಗರ್

ತಾಲೂಕ ಆಡಳಿತ ವತಿಯಿಂದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ 12ನೇ ಶತಮಾನದ ವಚನಕಾರರಲ್ಲಿ ಒಬ್ಬರಾಗಿದ್ದವರು ಸಿದ್ದರಾಮೇಶ್ವರರು, ಮಹಾಪುರುಷನ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು : ಆನಂದ ಟೈಗರ್ 

ಚಿಂಚೋಳಿ : 12 ನೇ ಶತಮಾನದ ವಚನಕಾರರಲ್ಲಿ ಸೋಲ್ಲಾಪೂರ ಶಿವಯೋಗಿ ಸಿದ್ದರಾಮೇಶ್ವರರು ಒಬ್ಬರಾಗಿದ್ದರು. ಅವರು ಅಂತರಜಾತಿ ವಿವಾಹಗಳಿಂದ ಕ್ರಾಂತಿಯನ್ನು ಮಾಡಿದರು ಎಂದು ಪುರಸಭೆ ಅಧ್ಯಕ್ಷ ಆನಂದ ಟೈಗರ್ ಅವರು ಹೇಳಿದರು. 

ಇಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ತಾಲೂಕ ಆಡಳಿತ ವತಿಯಿಂದ ಹಮ್ಮಿಕೊಂಡ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದ ಮುಖ್ಯಅತಿಥಿ ಸ್ಥಾನ ಅಲಂಕರಿಸಿ ಮಾತನಾಡಿದರು. 

ಸೋಲ್ಲಾಪೂರ ಸಿದ್ದರಾಮೇಶ್ವರ ಶಿವಯೋಗಿಗಳು ಸಾರ್ವಜನಿಕ ಕುಲ ವೃತ್ತಿ ಜೀವನದಲ್ಲಿ ತೊಡಗಿಸಿಕೊಂಡು, ಕೆರೆ, ದೇವಸ್ಥಾನಗಳನ್ನು ನಿರ್ಮಾಣಗೊಳುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದರು. ಅವರ ಆದರ್ಶ, ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕೆಂದರು. 

ಇಒ ಶಂಕರ ರಾಠೋಡ ಅವರು ಮಾತನಾಡಿ, ಮಹಾನ ನಾಯಕರ ಜಯಂತಿ ಕೇವಲ ಆಚರಣೆಗೆ ಸೀಮಿತಗೊಳಿಸದೇ ಅವರ ಇತಿಹಾಸವನ್ನ ಅರೆತು, ತತ್ವ ಆದರ್ಶಗಳನ್ನು ಚಾಚು ತಪ್ಪದೇ ಮೈಗೋಡಿಸಿಕೊಂಡು ನಡೆದಲ್ಲಿ ಮಾತ್ರ ಮಹಾನ ಪುರುಷರ ಜಯಂತಿ ಆಚರಗೆ ಅರ್ಥಸಿಗಲಿದೆ. ಸಿದ್ದರಾಮೇಶ್ವರರು 58 ಸಾವಿರ ವಚನಗಳು ಬರೆದಿದ್ದಾರೆ ಎಂದು ಹೇಳಲಾಗುತ್ತದೆ. 12ನೇ ಶತಮಾನದ ಸಮಕಾಲಿನ ವಚನಕಾರರ ಸಾಲಿಗೆ ಸೇರಿ, ಸಾಮಾಜಕ್ಕೆ ಉತ್ತಮ ಸಂದೇಶ ಸಾರಿದ ಮಹಾನ ನಾಯಕರು ಎಂದರು. 

ಪ್ರಾಚಾರ್ಯ ಮಲ್ಲಿಕಾರ್ಜುನ ಪಾಲಮೂರ ಅವರು ಉಪನ್ಯಾಸ ನೀಡಿದರು. ಸರಕಾರಿ ನೌಕರರ ಸಂಘದ ಅಧ್ಯಕ್ಷ ದೇವೀಂದ್ರಪ್ಪ ಹೋಳ್ಕರ್, ವೆಂಕಟೇಶ ದುಗ್ಗನ್ ಅವರು ಮಾತನಾಡಿದರು.

ಶಿಕ್ಷಣ ಸಂಯೋಜಕ ಅಶೋಕ ಹೂವಿನಬಾವಿ ಕಾರ್ಯಕ್ರಮ ನಿರೂಪಿಸಿದರು. ಅಕ್ಷರದಾಸೋಹ ನಿರ್ದೇಶಕ ಜಯಪ್ಪ ಚಾಪೆಲ್ ವಂದಿಸಿದರು.

ಈ ಸಂದರ್ಭದಲ್ಲಿ ತಾಲೂಕ ಭೋವಿ ಸಮಾಜದ ಗೌರವ ಅಧ್ಯಕ್ಷರು ಹಾಗೂ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ನಾಥ ಗುತ್ತೇದಾರ, ಅಧ್ಯಕ್ಷ ಜಗನ್ನಾಥ ರಾಜಾಪೂರ, ಪುರಸಭೆ ಸದಸ್ಯ ಲಕ್ಷ್ಮಿಕಾಂತ ಸುಂಕದ, ಸೈಯದ್ ಶಬ್ಬೀರ್, ಶಿವಕುಮಾರ ಪೋಚಾಲಿ, ಮುಖ್ಯ ಅಧಿಕಾರಿ ಕಾಶಿನಾಥ ಧನ್ನಿ, ಗ್ರೇಡ್ -2 ತಹಸೀಲ್ದಾರ್ ವೆಂಕಟೇಶ ದುಗ್ಗನ್, ಇಓ ಶಂಕರ ರಾಠೋಡ್, ಬಿಇಒ ವೀ. ಲಕ್ಷ್ಮಯ್ಯ, ಟಿಎಚ್ ಒ ಡಾ. ಗಫಾರ, ಬಿಸಿಎಂ ಅಧಿಕಾರಿ ಅನುಸೂಯ ಚವ್ಹಾಣ, ಬಸವರಾಜ ಬೈನೂರ್, ಜಯಪ್ಪ ಚಾಪೆಲ್, ಮಲ್ಲಿಕಾರ್ಜುನ ಪಾಲಾಮೂರ್, ದೇವೀಂದ್ರಪ್ಪ ಹೋಳ್ಕರ್, ಅಶೋಕ ಹೊವಿನಭಾವಿ, ಪ್ರಭುಲಿಂಗ ಬುಳ್ಳ, ರಾಜಕುಮಾರ ಭೋವಿ, ಹಣಮಂತ ಭೋವಿ, ವಿಠಲ್ ಕುಸಾಳೆ, ಬಸವರಾಜ ವಾಡಿ, ವಿಜಯಕುಮಾರ ಚೆಂಗಟೇ, ಶ್ರೀಮಂತ ಕಟ್ಟಿಮನಿ, ಕೆ. ಎಂ. ಬಾರಿ, ಅಶೋಕ ಚವ್ಹಾಣ, ರಾಜು ಪವಾರ, ಶ್ರೀಕಾಂತ ಪಿತ್ತಲ್, ರಾಜಶೇಖರ ಹಿತ್ತಲ್, ಶಂಕರ ಅಲ್ಲಾಪೂರ, ಶ್ರೀಕಾಂತ ಜಾನಕಿ ಸೇರಿ ಸಮಾಜದ ಅನೇಕರು ಉಪಸ್ಥಿತರಿದ್ದರು.