ಪಿತೃ ವಿಯೋಗ: ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರಿಗೆ ಆಘಾತ

ಪಿತೃ ವಿಯೋಗ: ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರಿಗೆ ಆಘಾತ

ಪಿತೃ ವಿಯೋಗ: ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರಿಗೆ ಆಘಾತ

ಅಫಜಲಪುರ: ಪಟ್ಟಣದ ಶ್ರೀ ಗುರು ಮಳೇಂದ್ರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಷ.ಬ್ರ. ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರವರ ತಂದೆ ಶ್ರೀ ವೇ.ಮೂ. ಚೆನ್ನಬಸಯ್ಯ ಹಿರೇಮಠ (ವಯಸ್ಸು 92) ರವಿವಾರದಂದು ಲಿಂಗೈಕ್ಯರಾಗಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

ಮೃತರಿಗೆ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಸೇರಿದಂತೆ ಮೂವರು ಪುತ್ರರು ಮತ್ತು ಆರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ಸೋಮವಾರ ಸಂಜೆ 4 ಗಂಟೆಗೆ ಅವರ ಸ್ವಗ್ರಾಮ ಸೊಲ್ಲಾಪುರ ತಾಲೂಕಿನ ವಳಸಂಗ ಗ್ರಾಮದ ಸ್ವಂತ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ ಸಂದೇಶಗಳು:

ಈ ದುಃಖದ ಸುದ್ದಿ ತಿಳಿದ ಶೋಕ ಸಂತ್ರಸ್ತರಿಗೆ ಶಾಸಕರಾದ ಎಂ.ವೈ. ಪಾಟೀಲ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ, ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ, ಮನ್ಸೂಲ್ ಪಟೇಲ್, ಮತೀನ ಪಟೇಲ್, ಮಳೇಂದ್ರ ಡಾಂಗೆ, ಪಪ್ಪು ಪಟೇಲ್, ಕೆಪಿಸಿಸಿ ಒಬಿಸಿ ಉಪಾಧ್ಯಕ್ಷ ಜೆ.ಎಂ. ಕೊರಬು, ಚಂದ್ರಶೇಖರ ಕರಜಗಿ, ನಿವೃತ್ತ ಶಿಕ್ಷಕರಾದ ಗುರುಸಿದ್ದಯ್ಯ ಹಿರೇಮಠ (ಸಿಂದಗಿ), ಸಿದ್ದಯ್ಯ ಹಿರೇಮಠ, ಶಿವಕುಮಾರ ನಾಟೀಕಾರ, ಪ್ರಕಾಶ ಜಮಾದಾರ ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.