ರೈಲ್ವೆ ನಿಲ್ದಾಣದ ಕುಂದುಕೊರತೆಗಳ ಮನವಿಗೆ ಇಲಾಖೆ ಯಿಂದ ಪತ್ರ

ರೈಲ್ವೆ ನಿಲ್ದಾಣದ  ಕುಂದುಕೊರತೆಗಳ ಮನವಿಗೆ ಇಲಾಖೆ ಯಿಂದ ಪತ್ರ

ರೈಲ್ವೆ ನಿಲ್ದಾಣದ ಕುಂದುಕೊರತೆಗಳ ಮನವಿಗೆ ಇಲಾಖೆ ಯಿಂದ ಪತ್ರ

ವಾಡಿ: ಪಟ್ಟಣದ ರೈಲ್ವೆ ಅಭಿವೃದ್ಧಿಗಾಗಿ ನೀಡಿದ ಮನವಿ ಪತ್ರಕ್ಕೆ ಮುಂಬಯಿ ರೈಲ್ವೆ ವಿಭಾಗದಿಂದ ಪತ್ರದ ಮೂಲಕ ಪ್ರತಿಕ್ರಿಯೆ ಬಂದಿದೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ತಿಳಿಸಿದ್ದಾರೆ.

ಕಳೆದ ನವೆಂಬರ್ 19ರಂದು ವಾಡಿ ಪಟ್ಟಣದ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ವೀಕ್ಷಣೆಎ ಬಂದಿದ್ದ ಮುಂಬಯಿ ವಿಭಾಗದ ರೈಲ್ವೆ ಮುಖ್ಯಸ್ಥರಾದ ಧರ್ಮವೀರ ಮೀನಾ ಅವರಿಗೆ ಪಕ್ಷದ ಮುಖಂಡರೊಂದಿಗೆ ಭೇಟಿ ಮಾಡಿ ಸಮಸ್ಯೆಗಳನ್ನು ವಿವರಿಸಲಾಗಿತ್ತು.

ರೈಲ್ವೆ ನಿಲ್ದಾಣದ ಕುಂದುಕೊರತೆಗಳಾದ 

1) ಪ್ಲೈಓರ ಹಾಗೂ ಬ್ರಿಡ್ಜ್‌ ಕಳಪೆ ಕಾಮಗಾರಿ ವಿರುದ್ಧ ಕ್ರಮಕೈಗೊಂಡು,ಗುಣಮಟ್ಟದೊಂದಿಗೆ ಆದಷ್ಟು ಬೇಗ ಪೂರ್ಣಗೊಳಿಸಿ.

2) ವಾಡಿ ಪಟ್ಟಣದ ಸುತ್ತಾ ರೈಲ್ವೆ ಗೇಟ್ ಗಳು ಆವರಿಸಿಕೊಂಡಿರುವುದರಿಂದ,ಜನರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು,ಒಳ ಸುತುವೆ ಅಥವಾ ಮೇಲ ಸೇತುವೆ ನಿರ್ಮಿಸಿ. ‌

3) ಹನುಮಾನ ನಗರ,ವಿಜಯ ನಗರ, ಸೋಮ್ಲಾ ತಾಂಡಾ ಹಾಗೂ ಇಂದಿರಾ ನಗರಕ್ಕೆ ಹೊಗಬೇಕಾದರೆ ರೈಲ್ವೆ ಹಳಿ ದಾಟಿಯೇ ಹೋಗಬೇಕು,

ಸುಮಾರು ಏಳು ಎಂಟು ಸಾವಿರ ಬಡ ಕುಟುಂಬ ವಾಸಿಸುವ ಬಡಾವಣೆಗಳಿವೆ.

ಇಲ್ಲಿನ ಜನರಿಗೆ ಸುರಕ್ಷಿತವಾಗಿ ಒಳ ಸೇತುವೆ ನಿರ್ಮಾಣ ಅತೀ ಅವಶ್ಯಕವಾಗಿದೆ.

4) ಕೊಲ್ಲಾಪುರ ರೈಲನ್ನು ವಾಡಿ ಯಿಂದ ಪ್ರಾರಂಭಿಸಿ, ತಲುಪುವಂತೆ ಮಾಡಿ,

ಕಾಚಿಗುಡಾ ಪ್ಯಾಸೆಂಜರ್ ರೈಲು ಕಲಬುರಗಿ ಯಿಂದ ಪ್ರಾರಂಭಿಸಿ,ತಲುಪುವಂತೆ ಹಾಗೂ ವಂದೇ ಭಾರತ ರೈಲನ್ನು ವಾಡಿ ನಿಲ್ದಾಣದಲ್ಲಿ ನಿಲ್ಲಿಸು ಸೂಚಿಸಿ ಇದ್ದರಿಂದ ಬಹಳಷ್ಟು ಜನತೆಗೆ ತುಂಬಾ ಅನುಕೂಲ ಆಗುತ್ತದೆ.

a) ಕಲಬುರಗಿ ಯಿಂದ ಕೊಲ್ಲಾಪುರ ಇರುವ ರೈಲನ್ನು ವಾಡಿ ಯಿಂದ ಮಾಡುವುದು,

b) ಕಾಚಿಗುಡ ದಿಂದ ವಾಡಿ ವರೆಗೆ ಇದ್ದ ರೈಲನ್ನು ಕಲಬುರಗಿ ವರೆಗೆ ಮಾಡುವುದು.

c) ವಂದೇ ಭಾರತ ವಾಡಿ ಯಲ್ಲಿ ನಿಲ್ಲಿಸುವುದು.

5) ರೈಲ್ವೆ ನಿಲ್ದಾಣದ ಕೊಳಚೆ ನೀರು ವಾರ್ಡ್ ಸಂಖ್ಯೆ 20ರಲ್ಲಿ ಹರಿದು ಹೊಗುತ್ತಿರುವುದರಿಂದ,ಮಳೆಗಾಲದಲ್ಲಿ ಜನರು ಸಂಕಟಕ್ಕೆ ಸಿಲುಕುತ್ತಿದ್ದು ಇದನ್ನು ಪರಿಹರಿಸಿ.

6) ನಿಲ್ದಾಣದಲ್ಲಿ ಶೌಚಾಲಯ ಮತ್ತು ವೇಟಿಂಗ್‌ ಹಾಲ ಸಮರ್ಕವಾದ ನಿರ್ವಾಣೆ ಇಲ್ಲದೇ ಇರುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

7) ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸೆ ಗಾಗಿ ವೈದ್ಯರೊಂದಿಗೆ

ಔಷಧ ಅಂಗಡಿ, ಸ್ವದೇಶಿ ಮಳಿಗೆ ಪ್ರಾರಂಭಕ್ಕೆ ಒತ್ತು ನೀಡಿ.

ಗುಟುಕಾ,ದೊಮ್ರಪಾನ ಹಾಗೂ ಪ್ಲಾಸ್ಟಿಕ್ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ.

8)ಜನರ ಮತ್ತು ಜಾನುವಾರುಗಳ ಸುರಕ್ಷಿತೆಗಾಗಿ ನಿಲ್ದಾಣದ 3 ಕಿ ಮಿ ಸುತ್ತಲೂ ಬೇಲಿ ಹಾಕಿಸುವುದು.

9) ನಿಲ್ದಾಣದಲ್ಲಿ ಎಕ್ಸಲೇಟರ್ ಅಳವಡಿಸಿ, ತುರ್ತು ಸಂಧರ್ಭದಲ್ಲಿ ಅಂಬುಲೇನ್ಸ ಸಂಚಾರಿಸುವಂತೆ ಮಾಡುವುದು.

10) ಹಳಿಗಳ ಮಧ್ಯ ಇರುವ ಸಾರ್ವಜನಿಕ ರುಧ್ರಭೂಮಿಗೆ ರಸ್ತೆ ಸಂಪರ್ಕ ಕಲ್ಪಸುವುದು.ಪಟ್ಟಿಯನ್ನು ನೀಡಲಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸದ ಮುಂಬಯಿ ವಿಭಾಗ ಪ್ರಯಾಣಿಕರ ಸಂಚಾರದ ವ್ಯವಸ್ಥಾಪಕರಾದ ಜೈ ಜಾರ್ಜ್‌ ಅವರು ಕ್ರಮ ಸಂಖ್ಯೆ 02 ರಿಂದ 03ರ ವರೆಗೆ ಹಾಗೂ 06 ರಂದ 10ರ ವರೆಗಿನ ಸಮಸ್ಯೆ ರೈಲ್ವೆ ಇಲಾಖೆದೆ ಸಂಭದಿಸಿದ್ದಾಗಿದೆ.

ಕಲಬುರಗಿ - ಕೊಲ್ಲಾಪುರ ವಾಡಿ ಯಿಂದ, ಕಾಚಿಗುಡ - ವಾಡಿ ಕಲಬುರಗಿ ವರೆಗೆ ರೈಲು ಸಂಚಾರ ಹಾಗೂ ವಂದೇ ಭಾರತ ನಿಲ್ಲುಗಡೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಮೂಲ ಸೌಲಭ್ಯಗಳ ಕೊರತೆ ಯಿಂದ ನಿಮ್ಮ ಸಮಸ್ಯೆಗಳನ್ನು ‌ಪರಿಹರಿಸಲು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಪತ್ರಿಕೆಗೆ

ಎಂದು ವಿವರಿಸಿದರು.