ಗುಡಿಸಲಲ್ಲಿ ಬದುಕುತ್ತಿರುವ ಸಾಯಿಗಾಂವ ಗ್ರಾಮದ ಪರಿಶಿಷ್ಟ ಜಾತಿಜನ ಸೂರು ಕಲ್ಪಿಸಲು ಧನರಾಜ ರಾಜೋಳ ಆಗ್ರಹ
ಗುಡಿಸಲಲ್ಲಿ ಬದುಕುತ್ತಿರುವ ಸಾಯಿಗಾಂವ ಗ್ರಾಮದ ಪರಿಶಿಷ್ಟ ಜಾತಿಜನ ಸೂರು ಕಲ್ಪಿಸಲು ಧನರಾಜ ರಾಜೋಳ ಆಗ್ರಹ
ಬೀದರ ಜ.15: ಭಾಲ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಾಯಿಗಾಂವ ಗ್ರಾಮದ ಪರಿಶಿಷ್ಟ ಜಾತಿ ಮಾದಿಗ ಜನಾಂಗವು ತುಂಬ ಕಡು ಬಡವರಾಗಿದ್ದು ಆ ಜನಾಂಗಕ್ಕೆ ಇನ್ನೂ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಕ್ಕಿಲ್ಲ. ಮತ್ತು ಕಡು ಬಡವರಾದ ಅವರಿಗೆ ಅಂಬೇಡ್ಕರ್ ವಸತಿ ಯೋಜನೆಯಿಂದ ಯಾರಿಗೂ ಮನೆಗಳನ್ನು ನಿರ್ಮಾಣ ಮಾಡದೇ ಇರುವುದು ದುರಾದೃಷ್ಟರವಾಗಿದೆ ಎಂದು ಧನರಾಜ ರಾಜೋಳ ಕಳವಳ ವ್ಯಕ್ತಪಡಿಸಿದರು.
ಸಾಯಿ ಗಾಂವ್ ಗ್ರಾಮದಲ್ಲಿ ನೂರಾರು ಮನೆಗಳು ಗುಡಿಸಲು, ಮತ್ತು ತಗಡದ ಜೋಪಡಿಗಳನ್ನು ಜೀವನ ಸಾಗಿಸುತ್ತಿದ್ದಾರೆ, ಅವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಸರ್ಕಾರ ಯಾವಾಗ ಎಂದು ಅವರು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಅಧಿಕಾರಿಗಳು ಸಂಬಂಧಪಟ್ಟ ಜಿಲ್ಲೆಯ ಉಸ್ತುವಾರಿ ಸಚಿವರು ಕೂಡಲೇ ಸಾಯಿಗಾಂವ್ ಗ್ರಾಮದ ಪರಿಶಿಷ್ಟ ಎಸ್ ಸಿ ಮಾದಿಗ ಜನಾಂಗದವರಿಗೆ ಮನೆ ಕಟ್ಟಿಸಿ ಕೊಡಬೇಕು " ಎಂದು ಧನರಾಜ ರಾಜೋಳೆ ಅವರು ಆಗ್ರಹಿಸಿದ್ದಾರೆ.