ವಯೋನಿವೃತ್ತಿ ಜೀವನದ ಮಹತ್ವದ ಘಟ್ಟ'

ವಯೋನಿವೃತ್ತಿ ಜೀವನದ ಮಹತ್ವದ ಘಟ್ಟ'

ವಯೋನಿವೃತ್ತಿ ಜೀವನದ ಮಹತ್ವದ ಘಟ್ಟ'

ಕಲಬುರಗಿ: ವಯೋನಿವೃತ್ತಿಯು ಜೀವ ನದ ಮಹತ್ವದ ಮೈಲಿಗಲ್ಲಾಗಿದ್ದು ವೃತ್ತಿ ಜೀವನದ ಅಂತ್ಯ ಹಾಗೂ ಹೊಸ ಜೀವನದ ಆರಂಭ ಸೂಚಿಸುತ್ತದೆ ಎಂದು ಸೇಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಮಾತೆ ಸಿಸ್ಟರ್ ಸಜನ ಹೇಳಿದರು.

ವಯೋನಿವೃತ್ತಿ ಹೊಂದಿರುವ ಸಂಪತ್ತುಕುಮಾರಿ ಡೇವಿಡ್ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಪತ್ತುಕುಮಾರಿ ಅವರು ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪಠ್ಯ ಪುಸ್ತಕ ಕೊಡಿಸಿದ್ದು, ಅವರು ಮಕ್ಕಳ ಬಗ್ಗೆ ಇಟ್ಟಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದರು.

ಸಂಪತ್ತುಕುಮಾರಿ ಡೇವಿಡ್ ಮಾತನಾಡಿ, 'ಒಟ್ಟು ಮೂವತ್ತೇಳು ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದೇನೆ. ಅಂದಿನ ಮುಖ್ಯ ಶಿಕ್ಷಕಿ ಸಿಸ್ಟ‌ರ್ ಜೋಕ್ಸನ್ ಅವರ ಸಹಕಾರ ಮರೆಯಲಾರೆ. ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದು ತೃಪ್ತಿ ತಂದಿದೆ. ನಾನು ನಿವೃತ್ತಿ ಹೊಂದಿದ ಕಲಬುರಗಿಯ ಸೇಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಂಪತ್ತುಕುಮಾರಿ ಡೇವಿಡ್ ಅವರನ್ನು ಮುಖ್ಯ ಶಿಕ್ಷಕಿ ಸಜನ ಹಾಗೂ ಸಿಬ್ಬಂದಿ ಸನ್ಮಾನಿಸಿ ಬೀಳ್ಕೊಟ್ಟರು

ಅನೇಕ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಮಾಡಿಸಿದ್ದೇನೆ' ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಸಿಸ್ಟರ್ ಪ್ರಾನ್ಸನ್, ಚೇತನಾ, ಹರ್ಷಿತಾ, ಫ್ಲೋರಿನ್, ಸೇಂಟ್ ಜೋಸೆಫ್ ಪಿಯು ಕಾಲೇಜಿನ ಉಪ ಪ್ರಾಂಶುಪಾಲ ಚಿ.ಸಿ. ಲಿಂಗಣ್ಣ, ಸಂಯೋಜಕ ಸಾಮುವೇಲ್, ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಅಧೀಕ್ಷಕ ಡಿ.ಕೆ. ಸಾಮುವೇಲ್,

ರಾಯಚೂರು ಕೋ ಎಡ್ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಾಣಿಕ್ಯ, ಅಫಜಲಪುರ ತಾಲ್ಲೂಕು ಸಾಗನೂರ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಪ್ರಭಾಕರ ಬೆಳ್ಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಾರ್ತಾ ಸಹಾಯಕ ಡಿ.ಕೆ.ರಾಜರತ್ನ, ಸೇಂಟ್ ಮೇರಿ ಪ್ರೌಢಶಾಲೆಯ ಶಿಕ್ಷಕಿ ಶೋಭಾ ತಿಮೋಥಿ ಇತರರು ಭಾಗವಹಿಸಿದ್ದರು.

ಕಲ್ಬುರ್ಗಿ ವರದಿ ನಾಗರಾಜ್ ದಂಡಾವತಿ