ಡಾ. ಬಿ.ಡಿ. ಜತ್ತಿ ವಚನ ಸಂಗೀತ ವಿಭೂಷಣ ಪ್ರಶಸ್ತಿಗೆ ಶಾರದಾ ಜಂಬಲದಿನ್ನಿ ಆಯ್ಕೆ
ಡಾ. ಬಿ.ಡಿ. ಜತ್ತಿ ವಚನ ಸಂಗೀತ ವಿಭೂಷಣ ಪ್ರಶಸ್ತಿಗೆ ಶಾರದಾ ಜಂಬಲದಿನ್ನಿ ಆಯ್ಕೆ
ಕಲಬುರಗಿ ಬಸವ ಸಮಿತಿ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರ ಈ ಸಂಸ್ಥೆಗಳು 2018 ರಿಂದ ಸಂಕ್ರಾಂತಿಯ ಸಂದರ್ಭದಲ್ಲಿ 'ವಚನ ಸಂಕ್ರಾಂತಿ' ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ಒಬ್ಬರು ಪ್ರತಿಭಾವಂತ ಸಂಗೀತಗಾರರನ್ನು ಗುರುತಿಸಿ. "ಡಾ. ಬಿ.ಡಿ. ಜತ್ತಿ ವಚನ ಸಂಗೀತ ವಿಭೂಷಣ ಪ್ರಶಸ್ತಿ" ಕೊಡುತ್ತ ಬಂದಿದೆ. ಈಗಾಗಲೇ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ
ಪಂ. ಶಾಂತಲಿಂಗಪ್ಪ ದೇಸಾಯಿಕಲ್ಲೂರ, ಪಂ. ಸೋಮನಾಥ ಮರಡೂರ ಡಾ. ಮೃತ್ಯಂಜಯ ಶೆಟ್ಟರ, ಶ್ರೀ ಬಾಪು ಪದ್ಮನಾಭ, ಪಂ. ನರಸಿಂಹಲು ವಡವಾಟಿ, ಶ್ರೀ ಅಮರ ಹಿರೇಮಠ ಇವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ದಿನಾಂಕ 19-01-2025 ರಂದು, ಸಾಯಂಕಾಲ 6 ಗಂಟೆಗೆ ಅನುಭವ ಮಂಟಪ,ಜಯನಗರ ಕಲಬುರಗಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಶಾರದಾ ಜಂಬಲದಿನ್ನಿ ಇವರಿಗೆ ಲಿಂ. ಸೋಮನಾಥಪ್ಪ ಖೂಬಾ ಅವರ ಸ್ಮರಣಾರ್ಥವಾಗಿ ಕೊಡ ಮಾಡುವ . 2024 ನೇ ಸಾಲಿನ "ಡಾ. ಬಿ.ಡಿ. ಜತ್ತಿ ವಚನ ಸಂಗೀತ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ ಪ್ರಶಸ್ತಿಯ 25000/- ನಗದು ಹಣ, ಪ್ರಶಸ್ತಿ ಫಲಕ ಒಳಗೊಂಡಿದ್ದು ಎಂದು ಬಸವ ಸಮಿತಿ ಅಧ್ಯಕ್ಷರಾದ ವಿಲಾಸವತಿ ಖೂಬಾ ಹೇಳಿದರು.
ಲಿಂ. ಶ್ರೀ ಸೋಮನಾಥಪ್ಪ ಖೂಬಾ ಸ್ಮರಣಾರ್ಥ ದತ್ತಿ ಕಾರ್ಯಕ್ರಮವೂ ನಡೆಯಲಿದ್ದು ವಚನ ಗಾಯನವನ್ನು. ಡಾ. ರೇವಯ್ಯ ವಸ್ತ್ರದಮಠ ಅವರು ಹಾರರ್ಮೋನಿಯಂ ನುಡಿಸುವರು ಹಾಗೂ ಶ್ರೀ ಮಹಾಂತೇಶ ಹರವಾಳ ತಬಲಾ ಸಾಥ್ ನೀಡುವರು.
ಈ ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರೀ ಮಹಾಜಗದ್ಗುರು ಡಾ. ಮಾತೆ ಗಂಗಾದೇವಿ, ಪೀಠಾಧ್ಯಕ್ಷರು, ಬಸವಧರ್ಮಪೀಠ, ಕೂಡಲಸಂಗಮ ಇವರು ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಬಸವ ಸಮಿತಿ ಅಧ್ಯಕ್ಷರಾದ ಡಾ. ಅರವಿಂದ ಜತ್ತಿ ಅವರು ವಹಿಸಲಿದ್ದಾರೆ ಎಂದು ಹೇಳಿದರು
ಶಾರದಾ ಜಂಬಲದಿನ್ನಿ