ಸಂಪನ್ನಗೊಂಡ ಹಂಸ ಜ್ಯೋತಿ ಟ್ರಸ್ಟ್ ಸುವರ್ಣ ಸಂಭ್ರಮಾಚರಣೆ
ಸಂಪನ್ನಗೊಂಡ ಹಂಸ ಜ್ಯೋತಿ ಟ್ರಸ್ಟ್ ಸುವರ್ಣ ಸಂಭ್ರಮಾಚರಣೆ
ರವೀಂದ್ರ ಕಲಾಕ್ಷೇತ್ರದಲ್ಲಿಹಲವು ಸಾಧಕೋತ್ತಮರಿಗೆ 'ಹಂಸ ಸಮ್ಮಾನ್' 2026 ಪ್ರಶಸ್ತಿ ಪ್ರದಾನ
ಬೆಂಗಳೂರು: ನಾಡಿನ ಸಾಂಸ್ಕೃತಿಕ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿರುವ ಹಂಸ ಜ್ಯೋತಿ ಟ್ರಸ್ಟ್ (ರಿ), ಬೆಂಗಳೂರು ಸಂಸ್ಥೆಯ ಸುವರ್ಣ ಸಂಭ್ರಮಾಚರಣೆಯ ಅಂಗವಾಗಿ ‘ಹಂಸ ಜ್ಯೋತಿ ಸುವರ್ಣ ಸಂಭ್ರಮಾಚರಣೆ’ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಸಾಧಕೋತ್ತಮರಿಗೆ ‘ಹಂಸ ಸಮ್ಮಾನ್ – 2026’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಭಾರತದ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಉದ್ಘಾಟಿಸಿದರು . ಸಮಾರಂಭಕ್ಕೆ ಹಿರಿಯ ರಂಗಸಂಘಟಕ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ. ಕಪ್ಪಣ್ಣ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಸಿ. ರಾಮಚಂದ್ರ, ಅಬಕಾರಿ ಉಪ ಆಯುಕ್ತ ಡಾ. ಬಿ.ಆರ್. ಹಿರೇಮಠ, ನಮ್ಮ ಆಶ್ರಮ ಸಂಸ್ಥಾಪಕ ಅಧ್ಯಕ್ಷ ಮೊಳಕಾಲ್ಮೂರು ಶ್ರೀನಿವಾಸಮೂರ್ತಿ, ಸಮಾಜಸೇವಕ ಎಸ್.ಟಿ. ಉದಯಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ. ಶಶಿಕಲಾ, ಗರುಡ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಫರ್ನಿಚರ್ಸ್ ಪ್ರೈ.ಲಿ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆ. ಗುರುಪ್ರಸಾದ್ ಭಾಗವಹಿಸಿದ್ದರು.
ವಿಶೇಷ ಆಹ್ವಾನಿತರಾಗಿ ನಿವೃತ್ತ ಪೊಲೀಸ್ ಅಧೀಕ್ಷಕ ಎನ್. ಜಗದೀಶ, ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದ ಧರ್ಮದರ್ಶಿ ಎಸ್. ಶ್ರೀಪ್ರಸಾದ್ ಮೊದಲಾದವರು ಉಪಸ್ಥಿತರಿದ್ದ ರು
‘ಹಂಸ ಸಮ್ಮಾನ್ – 2026’ ಪ್ರಶಸ್ತಿ ಪುರಸ್ಕೃತರು
ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿದ ಕೆಳಗಿನ 15 ಸಾಧಕೋತ್ತಮರನ್ನು ಈ ಸಂದರ್ಭದಲ್ಲಿ ‘ಹಂಸ ಸಮ್ಮಾನ್ – 2026’ ಪ್ರಶಸ್ತಿ ನೀಡಿ ಗೌರವಿಸಲಾಯಿತು .
ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ
ಕೋಲಾರಮ್ಮ ದೇವಾಲಯದ ಪ್ರಧಾನ ಅರ್ಚಕ ಸಿ. ಸೋಮಶೇಖರ ದೀಕ್ಷಿತ್
ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಮೋಹನ್ ಕುಮಾರ್
ಜ್ಯೋತಿಷ್ಯ ಪ್ರವೀಣ ಡಾ. ಎನ್. ಕೃಷ್ಣ
ವಂದೇ ಭಾರತಂ ಫೌಂಡೇಶನ್ ಅಧ್ಯಕ್ಷ ಬಿಜ್ಜವರ ಎಚ್. ಲೋಕೇಶ್
ಮಂತಣಿ ಮಾಸಿಕದ ಸಂಪಾದಕಿ ಸುನಂದ ರು. ಬಸಪ್ಪ
ಚೈತನ್ಯ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕಿ ಸರಸ್ವತಮ್ಮ
ಗರುಡ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಫರ್ನಿಚರ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕಿ ಎಸ್. ಅನೀತಾ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್. ಗೀತಾ
ಪದ್ಮಿನಿಪ್ರಿಯಾ ನೃತ್ಯ ಕಲಾ ಅಕಾಡೆಮಿಯ ನಿರ್ದೇಶಕಿ ವಿದುಷಿ ಉಷಾ ಬಸಪ್ಪ
ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ಎ.ವಿ. ರವಿ
ಆರಾಧ್ಯ ವಿಶುಯಲ್ಸ್ ಮಾಲೀಕ ಎಂ.ಎಸ್. ಚೆನ್ನಬಸವ ಆರಾಧ್ಯ
ಸಂಗಂ ಸಿಲ್ಕ್ಸ್ ಪಾಲುದಾರ ಎಂ.ಎಚ್. ಮಾರೇಗೌಡ
ಮಹಾಲಕ್ಷ್ಮೀ ವೃದ್ಧಾಶ್ರಮದ ಡಾ. ಗೋವಿಂದರಾಜು ಟಿ.
ಹಂಸ ಸಾಂಸ್ಕೃತಿಕ ಸಂಭ್ರಮ
ಕಾರ್ಯಕ್ರಮದ ಅಂಗವಾಗಿ ಖ್ಯಾತ ಕಲಾವಿದರಿಂದ ಮಧುರ ಗೀತ ಮಂಜರಿ – ಹಳೆಯ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಹಾಗೂ ಸಾಮೂಹಿಕ ಶಾಸ್ತ್ರೀಯ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಹಂಸ ಜ್ಯೋತಿ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಎಂ. ಮುರಳಿಧರ ಮತ್ತು ಕಾರ್ಯನಿರ್ವಾಹಕ ಟ್ರಸ್ಟಿ ವಿಜಯ ಮುರಳಿಧರ ಉಪಸ್ಥಿತರಿದ್ದರು.
