ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಅದ್ದೂರಿಯಾಗಿ ಆಚರಿಸಲು ನಿರ್ಧಾರ

ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಅದ್ದೂರಿಯಾಗಿ ಆಚರಿಸಲು ನಿರ್ಧಾರ 

ಹೆಚ್ಚಿನ ಸಂಖ್ಯೆಯಲ್ಲಿ ಕುಲಭಾಂದವರು ಭಾಗವಹಿಸಿ, ಯಶಸ್ವಿಗೊಳಿಸಲು ಜಮಾದಾರ ಮನವಿ 

ಚಿಂಚೋಳಿ : ಜ. 21 ರಂದು ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತಿಯನ್ನು ಕಲಬುರಗಿಯಲ್ಲಿ ಅದ್ದೂರಿಯಾಗಿ, ವೈಭವಿಕರಣದಿಂದ ಆಚರಿಸಲಾಗುತ್ತಿದೆ ಎಂದು ತಾಲೂಕ ಕೋಲಿ ಸಮಾಜದ ಅಧ್ಯಕ್ಷ ಅನೀಲ ಜಮಾದಾರ ಹುಡುದಳ್ಳಿ ಅವರು ತಿಳಿಸಿದರು.

ಪಟ್ಟಣದ ಚಂದಾಪೂರದ ಕೋಲಿ ಸಮಾಜ ಭವನದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, 

ಪ್ರತಿ ವರ್ಷ ಅಂಬಿಗರ ಜಯಂತಿ ಚಿಂಚೋಳಿ ತಾಲೂಕ ಆಡಳಿತ ನಡೆಸುವ ಕಾರ್ಯಕ್ರಮದಲ್ಲಿ ಕೋಲಿ ಸಮಾಜದ ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಯಂತಿ ಯಶಸ್ವಿಗೊಳಿಸಲಾಗಿದೆ. ಈ ವರ್ಷ ಜಿಲ್ಲಾ ಕೋಲಿ ಸಮಾಜದ ಪ್ರಮುಖರು ಜಿಲ್ಲಾ ಮಟ್ಟದಲ್ಲಿ ವೈಭವಿಕರಣದಿಂದ ಅಂಬಿಗರ ಜಯಂತಿ ಆಚರಿಸಲು ಜಿಲ್ಲಾ ಸಮಿತಿ ನಿರ್ಧರಿಸಿದೆ ಮತ್ತು ಜಿಲ್ಲಾ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಯುವಕರನ್ನು ಆಯ್ಕೆ ಮಾಡಲಾಗಿದೆ. 

ಹೀಗಾಗಿ ಜಿಲ್ಲಾ ಮಟ್ಟದಲ್ಲಿ ಅಂಬಿಗರ ಜಯಂತಿ ವೈಭವಿಕರಣದಿಂದ ಮಾಡೋಣ, ತಾಲೂಕ ಮಟ್ಟದಲ್ಲಿ ಜಯಂತಿ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ಕಲಬುರಗಿ ನಗರೇಶ್ವರ ಶಾಲೆಯಿಂದ ರಂಗ ಮಂದಿರದವರೆಗೆ ನಡೆಯುವ ಜಯಂತಿ ಮೆರೆವಣಿಗೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಲಬುರಗಿ ಜಿಲ್ಲಾ ಸಮಿತಿಯವರು ತಿಳಿಸಿರುವ ಹಿನ್ನಲೆಯಲ್ಲಿ ತಾಲೂಕಿನ ಕುಲಬಾಂಧವರು 21 ರಂದು ಬೆಳಿಗ್ಗೆ 10 ಗಂಟೆಗೆ ಚಿಂಚೋಳಿ ತಹಸೀಲ್ ಕಾರ್ಯಲಯದಲ್ಲಿ ನಡೆಯುವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ,ಪೂರ್ಣಗೊಳಿಸಿಕೊಂಡು ಸಮಾಜದವರು ಕಲಬುರಗಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಯಣ ಬೆಳಸಿ ಕಾರ್ಯಕ್ರಮಕ್ಕೆ ಶೋಭೆ ತಂದು ಯಶಸ್ವಿಗೊಳಿಸಬೇಕೆಂದು ಮುಖಂಡ ಲಕ್ಷ್ಮಣ ಆವಂಟಿ, ಅನಿಲ ಜಮಾದಾರ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ನಗರಘಟಕದ ಅಧ್ಯಕ್ಷ ಚಂದ್ರಕಾಂತ ಘಾಲಿ, ಅನಿಲ ದೇವೀಂದ್ರಪ್ಪ ಜಮಾದಾರ, ಲಕ್ಷ್ಮಣ ಆವಂಟಿ, ಸುರೇಶ ಭಂಟ, ಶರಣು ನಾಟಿಕಾರ, ಕಾಶಿನಾಥ ನಾಟಿಕಾರ, ಗುಂಡಪ್ಪ ಅವರಾದಿ, ಯಂಕು ಮೂಲಿಮನಿ, ಕೃಷ್ಣ ಚಿತ್ರಸಾಲ, ಮಹಾಂತೇಶ್ ಸೇರಿ ಹಲವರು ಉಪಸ್ಥಿತರಿದ್ದರು.