ಡಾ. ಅಲ್ಲಮಪ್ರಭು ದೇಶಮುಖ ರವರ ಶ್ರದ್ಧೆ, ಭಕ್ತಿ ದಾಸೋಹ ಮತ್ತು ಕಾಯಕ ನಿಷ್ಠೆಗೆ ಒಲಿದ "ವಚನ ಸೇವಾ ರತ್ನ" ಪ್ರಶಸ್ತಿ

ಡಾ. ಅಲ್ಲಮಪ್ರಭು ದೇಶಮುಖ ರವರ ಶ್ರದ್ಧೆ, ಭಕ್ತಿ  ದಾಸೋಹ ಮತ್ತು ಕಾಯಕ ನಿಷ್ಠೆಗೆ ಒಲಿದ "ವಚನ ಸೇವಾ ರತ್ನ" ಪ್ರಶಸ್ತಿ

ಡಾ. ಅಲ್ಲಮಪ್ರಭು ದೇಶಮುಖ ರವರ ಶ್ರದ್ಧೆ, ಭಕ್ತಿ ದಾಸೋಹ ಮತ್ತು ಕಾಯಕ ನಿಷ್ಠೆಗೆ ಒಲಿದ "ವಚನ ಸೇವಾ ರತ್ನ" ಪ್ರಶಸ್ತಿ

ಜೇವರ್ಗಿ: ಸೇವಾ ಮನೋಭಾವನೆಯಿಂದ ತಮ್ಮನ್ನು ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ಆಡಳಿತಾಧಿಕಾರಿ ಹಾಗೂ ಸಮಾಜ ಸೇವಕ ಡಾ. ಅಲ್ಲಮಪ್ರಭು ದೇಶಮುಖ ಅವರ ಶ್ರದ್ಧೆ, ಭಕ್ತಿ, ದಾಸೋಹ ಮತ್ತು ಕಾಯಕ ನಿಷ್ಠೆಯನ್ನು ಗುರುತಿಸಿ ಜೇವರ್ಗಿಯ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶರಣ ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ ವಚನ ಪಿತಾಮಹ ಫ. ಗು.ಹಳಕಟ್ಟಿ ಯವರ ಜನ್ಮದಿನದಂದು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಡಾ. ಅಲ್ಲಮಪ್ರಭು ದೇಶಮುಖ ರವರು ಮೂಲತಃ ಬೀದರ್ ಜಿಲ್ಲೆಯ ವಡಗಾಂವ್ ಗ್ರಾಮದವರು. ಪೂಜ್ಯ ತಂದೆಯವರಾದ ನ್ಯಾಯವಾದಿ ಶರಣಬಸಪ್ಪ ದೇಶಮುಖ ಹಾಗೂ ಪೂಜ್ಯ ತಾಯಿಯವರಾದ ಮಾತೋಶ್ರೀ ಸುರೇಖಾ ದೇಶಮುಖ ರವರ ಉದರದಲ್ಲಿ ಜನಿಸಿದ್ದಾರೆ.

*ಅಜ್ಜಿ ಲಿಂ ಚೆನ್ನಬಸಮ್ಮನವರ ಆಶಯದಂತೆ ವೈದ್ಯ ರಾದ ಡಾ ಅಲ್ಲಮಪ್ರಭು ದೇಶಮುಖ*

ಕಲ್ಬುರ್ಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನದ 7ನೇ ಪೀಠಾಧಿಪತಿಗಳಾಗಿದ್ದ ಲಿಂ. ದೊಡ್ಡಪ್ಪ ಅಪ್ಪ ಅವರ ಸುಪುತ್ರಿಯಾಗಿದ್ದ, ಅಜ್ಜಿ ಲಿಂ. ಚೆನ್ನಬಸಮ್ಮ ದೇಶಮುಖ ರವರ ಆಶಯದಂತೆ ಡಾ.ಅಲ್ಲಮಪ್ರಭು ದೇಶಮುಖ ರವರು ವೈದ್ಯರಾಗಿ ಬಡ ರೋಗಿಗಳ ಸೇವೆಯನ್ನು ಮಾಡುತ್ತ ಅವರಲ್ಲಿ ದೇವರನ್ನು ಕಾಣುತ್ತಾ ತಮ್ಮ ಬದುಕನ್ನು ಸಾರ್ಥಕ ಗೊಳಿಸಿಕೊಳ್ಳುತ್ತಿದ್ದಾರೆ.

ಪ್ರತಿನಿತ್ಯ ರೋಗಿಗಳನ್ನು ಉಚಿತವಾಗಿ ತಪಾಸಣೆ ಮಾಡುವ ಮತ್ತು ಎಕ್ಸ್ ರೇ, ಸಿಟಿ ಸ್ಕ್ಯಾನ್, ಸೇರಿದಂತೆ ಹಲವು ವಿಧಗಳ ಪರೀಕ್ಷೆಗಳಿಗೆ ರೋಗಿಗಳನ್ನು ಒಳಪಡಿಸಿ ಖಚಿತ ತಪಾಸಣೆ ಮಾಡಿ ರೋಗವನ್ನು ಗುರುತಿಸಿ ಅವರಿಗೆ ಉಚಿತವಾಗಿ ವೈದ್ಯಕೀಯ ಸೇವೆಯನ್ನು ನೀಡುತ್ತಿರುವುದು ಕಲ್ಯಾಣ ಕರ್ನಾಟಕ ಭಾಗದ ಜನರ ಅತೀವ ಮೆಚ್ಚುಗೆಗೆ ಪಾತ್ರವಾಗಿದೆ.

ವೈದ್ಯ ಪದವಿಯನ್ನು ಪೂಜ್ಯ ಡಾ ಶರಣಬಸವಪ್ಪ ಅಪ್ಪಾಜಿ ಹಾಗೂ ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಣಿ ಎಸ್ ಅಪ್ಪಾಜಿ (ಅವ್ವಾಜಿ) ಹಾಗೂ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ರವರ ಪಾದಗಳಿಗೆ ಅರ್ಪಣೆ

ಡಾ ಅಲ್ಲಮಪ್ರಭು ದೇಶಮುಖ ರವರು ತಮ್ಮ ವೈದ್ಯ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಶ್ರೀ ಶರಣಬಸವೇಶ್ವರ ಸಂಸ್ಥಾನ 8 ನೇ ಪೀಠಾಧಿಪತಿಗಳು, ಶರಣಬಸವೇಶ್ವರರ ವಿದ್ಯಾ ವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಪತಿಗಳಾದ ಪೂಜ್ಯ ಡಾ ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಶರಣ ಸಂಸ್ಥಾನದ ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಣಿ ಎಸ್ ಅಪ್ಪಾಜಿ (ಅವ್ವಾಜಿ) ಹಾಗೂ 9 ನೇ ಪೀಠಾಧಿಪತಿಗಳಾದ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಅವರ ಪಾದಗಳಿಗೆ ಅರ್ಪಣೆ ಮಾಡುವ ಮೂಲಕ ತಮ್ಮ ಶೃದ್ಧೆ ಮತ್ತು ಭಕ್ತಿಯ ಪರಾಕಾಷ್ಠೆಯನ್ನು ಮೆರೆದಿದ್ದಾರೆ.

ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಣಿ ಎಸ್ ಅಪ್ಪಾಜಿ ರವರ ದಾಸೋಹ ಸೂತ್ರದಂತೆ ಮತ್ತು 12 ನೇ ನೇ ಶತಮಾನದ ಬಸವಾದಿ ಶರಣರ ಆಶಯದಂತೆ ಬಡ ರೋಗಿಗಳ ಮತ್ತು ವೀಶೇಷವಾಗಿ ಪೌಷ್ಠಿಕ ಆಹಾರ ಕೊರತೆಯಿಂದ ಬಳಲುತ್ತಿರುವ ಮಕ್ಕಳ ಸೇವೆಯನ್ನು ಉಚಿತವಾಗಿ ಮಾಡುವ ಮೂಲಕ ಅನೇಕ ಮಕ್ಕಳ ಪ್ರಾಣವನ್ನು ಉಳಿಸಿರುವುದು ಕಲ್ಯಾಣ ನಾಡಿನ ಹೆಮ್ಮೆಯ ಸಂಗತಿಯಾಗಿದೆ.

ಅಪೌಷ್ಟಿಕ ಮುಕ್ತ ಭಾರತ ಡಾ ಅಲ್ಲಮಪ್ರಭು ದೇಶಮುಖ ರವರ ಸಂಕಲ್ಪ

ಭಾರತ ದೇಶವನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸಿ ಬಡ ಮಕ್ಕಳ ಆರೋಗ್ಯವನ್ನು ಕಾಪಾಡುವುದು ಮತ್ತು ಜೀವಿತಾವಧಿಯ ಮಟ್ಟವನ್ನು ಹೆಚ್ಚಿಸುವುದು ಡಾ ಅಲ್ಲಮಪ್ರಭು ದೇಶಮುಖ ರವರ ಮಹದಾಸೆ ಹಾಗೂ ಸಂಕಲ್ಪವಾಗಿದೆ. 

ಕೋವಿಡ್ -19 ರ ಸಂದರ್ಭದಲ್ಲಿ ಡಾ ಅಲ್ಲಮಪ್ರಭು ದೇಶಮುಖ ರವರ 6 ತಿಂಗಳ ಸಾರ್ಥಕ ಸೇವೆ

ಜಗತ್ತಿಗೆ ಮಹಾಮಾರಿಯಾಗಿ ಪರಿಣಮಿಸಿದ ಕೊವಿಡ್ 19ರ ಸಂದರ್ಭದಲ್ಲಿ ಅದರ ನಿಯಂತ್ರಣಕ್ಕಾಗಿ ನಿಯೋಜಿಸಲಾಗಿದ್ದ, ಐಸೋಲೇಶನ್ ವಾರ್ಡ್ ನಲ್ಲಿ ಡಾ.ಅಲ್ಲಮಪ್ರಭು ದೇಶಮುಖ್ ರವರು ಸುಮಾರು 6 ತಿಂಗಳ ಕಾಲ ತಮ್ಮ ಪ್ರಾಣದ ಹಂಗು ತೊರೆದು ಕೊವಿಡ್ ಸಂತ್ರಸ್ತರ ಸೇವೆಯನ್ನು ಮಾಡಿ ನೂರಾರು ಜನರ ಪ್ರಾಣವನ್ನು ಕಾಪಾಡಿದ್ದೂ, ಈಗ ಇತಿಹಾಸ.

ಪ್ರಚಾರ ಬಯಸದ ಸ್ನೇಹ ಹಾಗೂ ಸರಳಜೀವಿ ಡಾ.ಅಲ್ಲಮಪ್ರಭು ದೇಶಮುಖ

ವೈದ್ಯಕೀಯ ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅಲ್ಲದೆ ಶೈಕ್ಷಣಿಕ ಹಾಗೂ ದಾಸೋಹ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಡಾ ಅಲ್ಲಮಪ್ರಭು ದೇಶಮುಖ ರವರು ಯಾವತ್ತಿಗೂ ಕೂಡ ಪ್ರಚಾರ ಬಯಸದ ಸ್ನೇಹ ಹಾಗೂ ಸರಳಜೀವಿ. ಪೂಜ್ಯ ಅಪ್ಪಾಜಿ, ಪೂಜ್ಯ ಅವ್ವಾಜಿ, ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಹಾಗೂ ಚಿಕ್ಕಪ್ಪ ಬಸವರಾಜ ದೇಶಮುಖ ರವರ ಆಶಿರ್ವಾದ ಹಾಗೂ ಮಾರ್ಗದರ್ಶನದಲ್ಲಿ 

ತಮ್ಮ ಶ್ರದ್ಧೆ, ಭಕ್ತಿ, ಕಾಯಕ ಮತ್ತು ದಾಸೋಹ ಮೂಲಕ ತಮ್ಮಲ್ಲಿ ಸಹಾಯ ಕೇಳಿ ಬಂದವರಿಗೆ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುವ ಹೃದಯ ವೈಶಾಲ್ಯತೆಯನ್ನು ಡಾ ಅಲ್ಲಮಪ್ರಭು ದೇಶಮುಖ ರವರು ತೊರಿಸುತ್ತಾರೆ. ಇಂತಹ ಹೃದಯವಂತ ವೈದ್ಯರು ಇಂದಿನ ದಿನಗಳಲ್ಲಿ ಕಾಣುವುದು ಬಲು ಅಪರೂಪ ಎಂದೆ ಈ ಭಾಗದ ಜನರ ಅಭಿಪ್ರಾಯವಾಗಿದೆ.

 ಡಾ ಅಲ್ಲಮಪ್ರಭು ದೇಶಮುಖ ಹಾಗೂ ಅವರ ಕುಟುಂಬದವರಿಗೆ, ಶರಣ ಸಂಸ್ಥಾನದ ಮತ್ತು ನಾಡಿನ ಸೇವೆಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರರಲ್ಲಿ ಶರಣ ಸಂಸ್ಥಾನದ ಸದ್ಭಭಕ್ತರ ಪ್ರಾರ್ಥನೆಯಾಗಿದೆ. 

{ ಪ್ರಶಸ್ತಿಗಳು ಮನುಷ್ಯನ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಹೀಗಾಗಿ ಇನ್ನು ಮುಂದೆಯೂ ಸಹ ನಾನು ವೈದ್ಯಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಶ್ರಮವಹಿಸಿ ಕಾಯಕ ಮತ್ತು ದಾಸೋಹದಲ್ಲಿ ತೊಡಗಿಸಿಕೊಂಡು ಶ್ರೀ ಶರಣಬಸವೇಶ್ವರ ಸಂಸ್ಥಾನದ ಕೀರ್ತಿ ಹೆಚ್ಚಿಸುವ ಸಾರ್ಥಕ ಸೇವೆ ಮಾಡುತ್ತೇನೆ}. 

-ಡಾ ಅಲ್ಲಮಪ್ರಭು ದೇಶಮುಖ

ಆಡಳಿತಾಧಿಕಾರಿಗಳು

ಶ್ರೀ ಶರಣಬಸವೇಶ್ವರ ಸಂಸ್ಥಾನ, ಕಲಬುರಗಿ